
ಕರ್ನಾಟಕದಲ್ಲಿ ಸರ್ಕಾರ ಮತ್ತು ಉದ್ಯಮ ಲೋಕದ ನಡುವೆ ಜ್ಞಾನ ಸೇತುವೆಯಂತೆ ಕೆಲಸ ಮಾಡುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ ಇದೇ ಜುಲೈ 22 ಮತ್ತು 23ರಂದು ಮೈಸೂರಿನಲ್ಲಿ ನಡೆಯುತ್ತಿರುವ ಮೈಸೂರು ಬಿಗ್ ಟೆಕ್ ಶೋಗೆ ‘ಮುಂದೆ ಬನ್ನಿ’ ಸಂಸ್ಥೆಯನ್ನು ಅಧಿಕೃತ ಕಮ್ಯೂನಿಟಿ ಪಾರ್ಟನರ್ ಆಗಿ ಗುರುತಿಸಿದೆ. ಬೆಂಗಳೂರು ಟೆಕ್ ಸಮ್ಮಿಟ್ ಗೆ ಪೂರ್ವಭಾವಿಯಾಗಿ ಕರ್ನಾಟಕದ ಆರು ನಗರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇದು ಮೊದಲನೆಯದ್ದು.
ಎರಡು ದಿನಗಳ ಕಾಲ ಉದ್ಯಮ ಲೋಕದ ದಿಗ್ಗಜರು, ಸರ್ಕಾರದ ಪ್ರತಿನಿಧಿಗಳು, ಮೈಸೂರು ಭಾಗದ ಉದ್ಯಮ ವಲಯದ ಇಕೋ ಸಿಸ್ಟಂ ರೂಪಿಸುತ್ತಿರುವ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಉದ್ಯಮಿಗಳಿಗೆ ಮಾರ್ಗದರ್ಶನ, ಸಂಪರ್ಕ, ತಿಳಿವು ನೀಡುವ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಇಲ್ಲಿರಲಿವೆ.
ಕರ್ನಾಟಕದಾದ್ಯಂತ ಆಹಾರ ಉತ್ಪನ್ನಗಳು (ಜೇನು ತುಪ್ಪ, ಮಸಾಲೆ ಪದಾರ್ಥಗಳು, ಆರ್ಗ್ಯಾನಿಕ್ ಉತ್ಪನ್ನಗಳು, ಸುಸ್ಥಿರ ಆರ್ಥಿಕತೆಗೆ ಪೂರಕವಾದ ಉತ್ಪನ್ನಗಳು (ಅಡಿಕೆ ಹಾಳೆಯ ಪ್ಲೇಟು, ಚಮಚ ಇತ್ಯಾದಿ), ಟೆಕ್ನಾಲಜಿ, ಐಟಿ ಸೇವೆ ಹೀಗೆ ಯಾವುದೇ ವಲಯದಲ್ಲಿ ಉತ್ಪನ್ನ ಇಲ್ಲವೇ ಸೇವೆ ಕಲ್ಪಿಸುತ್ತಿರುವ ಉದ್ಯಮಿಗಳು ತಮ್ಮ ಉದ್ಯಮವನ್ನು ಭಾರತದ ಆಚೆ ಹರಡಲು ಬಯಸುತ್ತಿದ್ದಲ್ಲಿ ಮುಂದೆ ಬನ್ನಿ ಮತ್ತು KDEM ಜೊತೆಗೂಡಿ ಹಮ್ಮಿಕೊಳ್ಳುತ್ತಿರುವ Global Market Access ಸೆಶನ್ ಅಲ್ಲಿ ಪಾಲ್ಗೊಳ್ಳಬಹುದು.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ
ನೆದರ್ ಲ್ಯಾಂಡ್, ಫ್ರಾನ್ಸ್ ಮತ್ತು ಜಪಾನ್ ದೇಶದ ಪ್ರತಿನಿಧಿಗಳು ಈ ಸೆಶನ್ ಅಲ್ಲಿ ಭಾಗವಹಿಸಿ ನಿಮ್ಮ ಉತ್ಪನ್ನಗಳನ್ನು ಆ ದೇಶದ ಮಾರುಕಟ್ಟೆಗೆ ಒಯ್ಯುವ ಬಗೆಯನ್ನು ವಿವರಿಸಲಿದ್ದಾರೆ. ನಿಮ್ಮ ಕಂಪನಿಯನ್ನು ಭಾರತದ ಆಚೆಗೆ ಒಯ್ಯಬೇಕು ಅನ್ನುವ ಆಸಕ್ತಿ ಇದ್ದಲ್ಲಿ ನೀವು ಪಾಲ್ಗೊಳ್ಳಬಹುದು. ಆಯ್ಕೆಯಾದ 30 ಜನರಿಗೆ ಮುಂದೆ ಬನ್ನಿ ವತಿಯಿಂದ ಉಚಿತ ಪ್ರವೇಶ ಕಲ್ಪಿಸಲಾಗುವುದು. ಆಸಕ್ತ ಉದ್ಯಮಿಗಳು ರಿಜಿಸ್ಟರ್ ಮಾಡಿಕೊಳ್ಳಿ. 18ನೇ ತಾರೀಕು ಕೊನೆಯ ದಿನ.
ಆಸಕ್ತ ಉದ್ಯಮಿಗಳು ರೆಜಿಸ್ಟರ್ ಮಾಡಿಕೊಳ್ಳಿ: forms.gle/r51hiUjhdQ6azELH9
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Wed, 15 July 26