ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ: ರೈತ ಚಿಂತಾಕ್ರಾಂತ

|

Updated on: Nov 24, 2023 | 10:56 AM

ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಾದ ಹಾರಂಗಿ, ಕೃಷ್ಣರಾಜಸಾಗರ, ಕಬಿನಿ ಮತ್ತು ಹೇಮಾವತಿಯಲ್ಲಿ ನೀರಿನ ಮಟ್ಟವು ಅವುಗಳ ಒಟ್ಟು ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ಇದೆ. ಈ ಇದು ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವ ಸೂಚಕವಾಗಿದೆ.

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ: ರೈತ ಚಿಂತಾಕ್ರಾಂತ
ಕೆಆರ್​ಎಸ್​ ಡ್ಯಾಂ
Follow us on

ಮೈಸೂರು ನ.24: ಮುಂದಿನ ಒಂದು ತಿಂಗಳು ತಮಿಳುನಾಡಿಗೆ (Tamilnadu) ಪ್ರತಿನಿತ್ಯ 2700 ಟಿಎಂಸಿ ಕಾವೇರಿ ನೀರು ಬಿಡಬೇಕು ಎಂಬ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಮಳೆ ಇಲ್ಲಿದೆ ಬರಗಾಲ ಆವರಿಸಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಾದ (Dam) ಹಾರಂಗಿ, ಕೃಷ್ಣರಾಜಸಾಗರ (KRS), ಕಬಿನಿ ಮತ್ತು ಹೇಮಾವತಿಯಲ್ಲಿ ನೀರಿನ ಮಟ್ಟವು ಅವುಗಳ ಒಟ್ಟು ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ಇದೆ. ಈ ಇದು ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವ ಸೂಚಕವಾಗಿದೆ.

ಲಭ್ಯವಿರುವ ನೀರು ಬೆಂಗಳೂರು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಬೇಕು. ಅಲ್ಲದೇ ಮುಂದಿನ ವರ್ಷದ ಮಾನ್ಸೂನ್​ವರೆಗು ಈ ನೀರನ್ನೇ ಬಳಸಬೇಕು. ನವೆಂಬರ್​ 22 ರಂದು ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯದಲ್ಲಿ 56.55 ಟಿಎಂಸಿ ನೀರು ಇತ್ತು. ಅವುಗಳ ಒಟ್ಟು ಒಟ್ಟು ಸಾಮರ್ಥ್ಯ 114.57 ಟಿಎಂಸಿ. 2022 ರ ನವೆಂಬರ್ 22 ರಂದು ಈ ಜಲಾಶಯಗಳಲ್ಲಿ 97.45 ಟಿಎಂಸಿ ನೀರು ಸಂಗ್ರಹವಿತ್ತು. ಡೆಡ್ ಸ್ಟೋರೇಜ್ ಮಟ್ಟವನ್ನು ಬಿಟ್ಟು ಪ್ರಸ್ತುತ, ಎಲ್ಲ ನಾಲ್ಕು ಜಲಾಶಯಗಳಲ್ಲಿ ಒಟ್ಟು ಶೇಕಡಾ 49 ರಷ್ಟು ನೀರಿನ ಸಂಗ್ರಹವಿದೆ. ಡೆಡ್​ ಸ್ಟೋರೇಜ್​​ ನೀರನ್ನು ಮಾನವ ಬಳಕೆಗೆ ಬಳಸಲಾಗುವುದಿಲ್ಲ.

ಕೊಡಗು ಜಿಲ್ಲೆಯ ಹಾರಂಗಿ ಅಣೆಕಟ್ಟಿನ ಒಟ್ಟು ಸಂಗ್ರಹಣೆ ಮಟ್ಟ 8.50 ಟಿಎಂಸಿ ಅಡಿ ಇದೆ. ಗುರುವಾರ ನವೆಂಬರ್ 22 ರಂದು ಜಲಾಶಯದಲ್ಲಿ 4.58 ಟಿಎಂಸಿ ಅಡಿ (ಶೇ. 54) ನೀರು ಇತ್ತು. ಕಳೆದ ವರ್ಷ ಇದೇ ದಿನಾಂಕದಂದು 4.46 ಟಿಎಂಸಿ ಅಡಿ ಸಂಗ್ರಹವಾಗಿತ್ತು. ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟಿನ ಒಟ್ಟು ಸಂಗ್ರಹ ಮಟ್ಟ 49.45 ಟಿಎಂಸಿ ಆಗಿದೆ. ನವೆಂಬರ್ 22 ರಂದು 22.33 ಟಿಎಂಸಿ ಅಡಿ (ಶೇ. 45) ಇದ್ದರೆ, ಕಳೆದ ವರ್ಷ ಇದೇ ದಿನಾಂಕದಂದು 45.58 ಟಿಎಂಸಿ ಅಡಿ ಸಂಗ್ರಹವಾಗಿತ್ತು.

ಹಾಸನ ಜಿಲ್ಲೆಯ ಹೇಮಾವತಿ ಅಣೆಕಟ್ಟಿನ ಒಟ್ಟು ಸಂಗ್ರಹಣೆ ಮಟ್ಟ 37.10 ಟಿಎಂಸಿ ಅಡಿ, ನ.22 ರಂದು 15.88 ಟಿಎಂಸಿ ಅಡಿ (ಶೇ. 43) ಇದ್ದರೇ, ಕಳೆದ ವರ್ಷ ಇದೇ ದಿನಾಂಕದಂದು 32.12 ಟಿಎಂಸಿ ಅಡಿ ಸಂಗ್ರಹವಾಗಿತ್ತು. ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆಯಲ್ಲಿರುವ ಕಬಿನಿ ಅಣೆಕಟ್ಟಿನ ಒಟ್ಟು ಸಂಗ್ರಹ ಮಟ್ಟ 19.52 ಟಿಎಂಸಿ ಅಡಿ, ನವೆಂಬರ್ 22 ರಂದು 13.76 ಟಿಎಂಸಿ ಅಡಿ (ಶೇ 71) ಇದ್ದರೇ, ಕಳೆದ ವರ್ಷ ಇದೇ ದಿನಾಂಕದಂದು 15.29 ಟಿಎಂಸಿ ಅಡಿ ಸಂಗ್ರಹವಾಗಿತ್ತು.

ಇದನ್ನೂ ಓದಿ: ಕರ್ನಾಟಕಕ್ಕೆ ಹೊಡೆತದ ಮೇಲೆ ಹೊಡೆತ: ಮತ್ತೆ ತಮಿಳುನಾಡಿಗೆ ಕಾವೇರಿ ನಿರು ಹರಿಸಲು ಸೂಚನೆ

ನ.22ಕ್ಕೆ ಹಾರಂಗಿ ಅಣೆಕಟ್ಟೆಗೆ 44 ಕ್ಯೂಸೆಕ್ ಒಳ ಹರಿವು ಇದ್ದರೆ, ಹೊರ ಹರಿವು 2,100 ಕ್ಯೂಸೆಕ್ ಇದೆ. ಹೇಮಾವತಿ ಅಣೆಕಟ್ಟೆಗೆ 339 ಕ್ಯೂಸೆಕ್ ಒಳಹರಿವು ಇದ್ದು, 1,300 ಕ್ಯೂಸೆಕ್ ಹೊರಹರಿವು ಇದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಆರ್ ಎಸ್ ಅಣೆಕಟ್ಟೆಗೆ 1,572 ಕ್ಯೂಸೆಕ್ ಒಳಹರಿವು ಇದ್ದು, 4,141 ಕ್ಯೂಸೆಕ್ ಹೊರ ಹರಿವು ಇದೆ. ಕಬಿನಿ ಅಣೆಕಟ್ಟೆಗೆ 148 ಕ್ಯೂಸೆಕ್ ಒಳಹರಿವು ಇದ್ದು, ನ.22ರಂದು 1,900 ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ.

ಕೊಡಗು, ಮೈಸೂರು ಮತ್ತು ಹಾಸನ ಪ್ರದೇಶಗಳಲ್ಲಿ ಮಳೆಯ ಅಭಾವದಿಂದ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟುಗಳಲ್ಲಿ ಕಡಿಮೆ ಸಂಗ್ರಹ ಮಟ್ಟಕ್ಕೆ ಕಾರಣವಾಗಿದೆ. ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ (ನೈಋತ್ಯ ಮಾನ್ಸೂನ್), ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ 271 ಮಿಮೀ ಮಳೆಯಾಗಿದ್ದು, 369 ಮಿಮೀ ಸಾಮಾನ್ಯ ಮಳೆಯಾಗಿದ್ದು, ಶೇಕಡಾ 26 ರಷ್ಟು ಮಳೆ ಕೊರತೆಯಾಗಿದೆ.

ಅಕ್ಟೋಬರ್ 1 ರಿಂದ ನವೆಂಬರ್ 22 (ಈಶಾನ್ಯ ಮಾನ್ಸೂನ್) ವರೆಗೆ, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ 182 ಮಿಮೀ ಸಾಮಾನ್ಯ ಮಳೆಗೆ 124 ಮಿಮೀ ಮಳೆಯಾಗಿದೆ, ಇದರ ಪರಿಣಾಮವಾಗಿ ಶೇಕಡಾ 32 ರಷ್ಟು ಕೊರತೆಯಾಗಿದೆ. ಜನವರಿ 1, 2023 ರಿಂದ ನವೆಂಬರ್ 22 ರವರೆಗೆ, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ 558 ಮಿಮೀ ಮಳೆಯಾಗಿದ್ದು, 694 ಮಿಮೀ ಸಾಮಾನ್ಯ ಮಳೆಯಾಗಿದ್ದು, ಇದರ ಪರಿಣಾಮವಾಗಿ ಶೇಕಡಾ 20 ರಷ್ಟು ಮಳೆ ಕೊರತೆಯಾಗಿದೆ.

ಜೂನ್ 1, 2023 ರಿಂದ ನವೆಂಬರ್ 22 ರವರೆಗೆ, ಈ ಪ್ರದೇಶದಲ್ಲಿ 551 ಮಿಮೀ ಮಳೆಯಾಗಿದ್ದು, ಇದರ ಪರಿಣಾಮವಾಗಿ ಶೇಕಡಾ 28 ರಷ್ಟು ಮಳೆ ಕೊರತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:55 am, Fri, 24 November 23