ಬಸವನಗುಡಿ ರೆಹಮಾನ್ ವಿರುದ್ಧ NIA ವಿಶೇಷ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ

|

Updated on: Jan 12, 2021 | 5:46 PM

ISIS​ ಉಗ್ರರ ಜೊತೆ ನಂಟು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧಿತನಾಗಿದ್ದ ರೆಹಮಾನ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. NIA ವಿಶೇಷ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ.

ಬಸವನಗುಡಿ ರೆಹಮಾನ್ ವಿರುದ್ಧ NIA ವಿಶೇಷ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ
ಅಬ್ದುರ್ ರೆಹಮಾನ್
Follow us on

ದೆಹಲಿ: ISIS​ ಉಗ್ರರ ಜೊತೆ ನಂಟು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧಿತನಾಗಿದ್ದ ರೆಹಮಾನ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. NIA ವಿಶೇಷ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ.

2020ರ ಆ.17ರಂದು ಅಬ್ದುರ್ ರೆಹಮಾನ್​ನನ್ನು NIA ಅಧಿಕಾರಿಗಳು ಬಂಧಿಸಿದ್ದರು. ರೆಹಮಾನ್​ನನ್ನು ಬಸವನಗುಡಿಯ ತಮ್ಮ ನಿವಾಸಿದಿಂದ ಬಂಧಿಸಲಾಗಿತ್ತು. ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಉದ್ಯೋಗಿಯಾಗಿದ್ದ ರೆಹಮಾನ್​ ISIS ಮತ್ತು ISKP ಸಂಘಟನೆ ಜೊತೆ ಸೇರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.

ಜೊತೆಗೆ, 2013ರಲ್ಲಿ ಸಿರಿಯಾಗೆ ತೆರಳಿ ISIS ಚಟುವಟಿಕೆಯಲ್ಲಿ ಭಾಗಿಯಾಗಿ ಅಲ್ಲಿಂದ ಬಂದ ಬಳಿಕ ಯುವಕರನ್ನು ಪ್ರಚೋದಿಸುತ್ತಿದ್ದ ಎಂಬ ಮಾಹಿತಿ ಸಹ ದೊರೆತಿತ್ತು. ಯುವಕರನ್ನು ISIS ಉಗ್ರ ಸಂಘಟನೆ ಸೇರಲು ಆರೋಪಿ ಪ್ರಚೋದಿಸುತ್ತಿದ್ದನಂತೆ.

ಇದಲ್ಲದೆ, ಉಗ್ರರ ಚಿಕಿತ್ಸೆ ನೆರವಿಗೆ ಮೆಡಿಕಲ್ ಅಪ್ಲಿಕೇಷನ್​ ಸಹ ಸಿದ್ಧಪಡಿಸಿದ್ದನಂತೆ. ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪವೂ ಸಹ ಈತನ ವಿರುದ್ಧ ಇತ್ತು.

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು: A6 ಆದಿತ್ಯ ಆಳ್ವಾ 7 ದಿನ CCB ಕಸ್ಟಡಿಗೆ

Published On - 5:44 pm, Tue, 12 January 21