ಟ್ರಾಫಿಕ್ ಪರಿಸ್ಥಿತಿ ಸುಧಾರಣೆಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಕೈಜೋಡಿಸಿದ ಎನ್ಎಂಐಟಿ

|

Updated on: Dec 16, 2023 | 6:52 PM

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲು ತಾಂತ್ರಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಐಟಿ) ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಮಹತ್ತರ ಒಂಪ್ಪದಕ್ಕೆ (ಎಂಒಯು) ಸಹಿ ಹಾಕಿದೆ.

ಟ್ರಾಫಿಕ್ ಪರಿಸ್ಥಿತಿ ಸುಧಾರಣೆಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಕೈಜೋಡಿಸಿದ ಎನ್ಎಂಐಟಿ
ಟ್ರಾಫಿಕ್ ಪೊಲೀಸ್ ಇಲಾಖೆ, ಬೆಂಗಳೂರು ಮತ್ತು ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡುವೆ ಎಂಒಯು ವಿನಿಮಯ. (ಎಡದಿಂದ ಬಲಕ್ಕೆ), ಶ್ರೀ. ಕೆ.ಬಿ. ರಾವ್, ನಿರ್ದೇಶಕರು- ಕಾರ್ಪೊರೇಟ್, ಶ್ರೀ ಎಂ ಎನ್ ಅನುಚೇತ್, ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್, ಡಾ. ವಿ ಶ್ರೀಧರ್, ಡೀನ್ - ಅಕಾಡೆಮಿಕ್ಸ್, ಡಾ ಮೋಹನ್ ಗೌಡರ್, ಎಚ್ಒಡಿ ಆಫ್ ಇನ್ಫರ್ಮೇಷನ್ ಸೈನ್ಸ್ ಇಂಜಿನಿಯರಿಂಗ್
Follow us on

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲು ತಾಂತ್ರಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಐಟಿ) ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಮಹತ್ತರ ಒಂಪ್ಪದಕ್ಕೆ (ಎಂಒಯು) ಸಹಿ ಹಾಕಿದೆ. ಎಂಒಯು ವಿಲಿಮಯ ಸಮಾರಂಭದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ಎಂ.ಎನ್.ಅನುಚೇತ್, ಎನ್ಎಂಐಟಿ ಶೈಕ್ಷಣಿಕ ವಿಭಾಗದ ಡೀನ್ ಡಾ. ವಿ ಶ್ರೀಧರ್, ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮೋಹನ್ ಗೌಡರ್, ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಕೆ.ಬಿ.ರಾವ್, ವಿವಿಧ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸ್ ಜಂಟಿ ಆಯುಕ್ತ ಎಂ ಎನ್ ಅನುಚೇತ್, “ಬೆಂಗಳೂರಿನ ಟ್ರಾಫಿಕ್ ಕೇವಲ ಸಾರಿಗೆ ಸಮಸ್ಯೆಯಲ್ಲ, ಇದು ಆರ್ಥಿಕ ಮತ್ತು ಪರಿಸರ ಸಮಸ್ಯೆಯಾಗಿದೆ. ತಂತ್ರಜ್ಞಾನ, ಪಾಲುದಾರಿಕೆಗಳು ಮತ್ತು ನವೀನ ವಿಧಾನಗಳ ಮೂಲಕ, ನಾವು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಉತ್ಪಾದಕತೆಯನ್ನು ಹೆಚ್ಚಿಸಬಹುದು, ಮಾಲಿನ್ಯವನ್ನು ಕಡಿಮೆ ಮಾಡಬಹುದು ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. NMITಯೊಂದಿಗಿನ ಈ ತಿ ಒಪ್ಪಂದವು ಹೆಚ್ಚು ಪರಿಣಾಮಕಾರಿ ಸಂಚಾರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದರು.

ಇದನ್ನೂ ಓದಿ: ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋಳಾಟ

ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ಎಂಐಟಿ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಕೆ.ಬಿ.ರಾವ್, “ಈ ಕಾರ್ಯತಂತ್ರದ ಪಾಲುದಾರಿಕೆಯು ಪರಸ್ಪರ ಲಾಭದಾಯಕ ಸಂಬಂಧದ ಆರಂಭವನ್ನು ಸೂಚಿಸುತ್ತದೆ, ಇದು ಶಿಕ್ಷಣ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ನಡುವೆ ನಾವೀನ್ಯತೆ, ಜ್ಞಾನ ವಿನಿಮಯ ಮತ್ತು ಸಹಯೋಗದ ಉಪಕ್ರಮಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರಾರಂಭದಲ್ಲಿ ಟ್ರಾಫಿಕ್ ನಿರ್ವಹಣೆಯನ್ನು ಹೆಚ್ಚಿಸಲು ಡ್ರೋನ್‌ಗಳು ಮತ್ತು ಇತರ ತಂತ್ರಜ್ಞಾನಗಳ ಬಳಕೆಯನ್ನು ಒಳಗೊಂಡಂತೆ ನವೀನ ವಿಧಾನಗಳನ್ನು ಅನ್ವೇಷಿಸುವುದನ್ನು ಒಳಗೊಂಡಿರುತ್ತದೆ’ ಎಂದರು.

ಈ ಉಪಕ್ರಮವು ಸಂಚಾರ ಮೇಲ್ವಿಚಾರಣೆ, ನಿಯಂತ್ರಣ, ಸಂಚಾರ ಕಾನೂನು ಉಲ್ಲಂಘಿಸುವವರನ್ನು ಗುರುತಿಸುವುದು ಮತ್ತು ಸಂಚಾರ ದಟ್ಟಣೆಯ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಸಂಬಂಧಿಸಿದ ವಿವಿಧ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಅಲ್ಲದೆ, ಕಾರ್ಯತಂತ್ರದ ಪಾಲುದಾರಿಕೆಯು ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶ ನೀಡುತ್ತದೆ. ಟ್ರಾಫಿಕ್ ನಿರ್ವಹಣೆ ಸವಾಲುಗಳಿಗೆ ನೈಜ-ಸಮಯದ ಪರಿಹಾರಗಳನ್ನು ಒದಗಿಸುವ ಕ್ರಿಯಾತ್ಮಕ ಕಲಿಕೆಯ ವಾತಾವರಣವನ್ನು ಉತ್ತೇಜಿಸುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.