ಚಿತ್ರದುರ್ಗದಲ್ಲಿ ಇಂಟರ್ನೆಟ್ ಸಂಪರ್ಕವೇ ಇಲ್ಲ: ಪುರಾತನರಂತೆ ಬದುಕು ಸವೆಸುತ್ತಿರುವ ಜನ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 7:05 PM

21ನೇ ಶತಮಾನದಲ್ಲಿ ಬದುಕುತ್ತಿರುವ ನಮಗೆ ಮೊಬೈಲ್, ಇಂಟರ್ನೆಟ್​ ಎಂಬುದು ಮನುಷ್ಯನ ದಿನನಿತ್ಯದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಇವೆರಡು ಇಲ್ಲದಿದ್ದರೆ ಮನುಷ್ಯನಿಗೆ ಕೈಕಾಲುಗಳೇ ಆಡುವುದಿಲ್ಲ. ಇಂಥದರಲ್ಲಿ ಚಿತ್ರದುರ್ಗದ ಆ ಗ್ರಾಮಗಳಲ್ಲಿ ಮೊಬೈಲ್, ಇಂಟರ್ನೆಟ್ ಸಂಕರ್ಪ ಬಾರದೇ ಎಷ್ಟೋ ವರ್ಷಗಳೇ ಕಳೆದಿವೆ.

ಚಿತ್ರದುರ್ಗದಲ್ಲಿ ಇಂಟರ್ನೆಟ್ ಸಂಪರ್ಕವೇ ಇಲ್ಲ: ಪುರಾತನರಂತೆ ಬದುಕು ಸವೆಸುತ್ತಿರುವ ಜನ
ಚಿತ್ರದುರ್ಗದಲ್ಲಿ ಇಂಟರ್ನೆಟ್ ಸಂಪರ್ಕವೇ ಇಲ್ಲ: ಪುರಾತನರಂತೆ ಬದುಕು ಸವೆಸುತ್ತಿರುವ ಜನ
Follow us on

ಚಿತ್ರದುರ್ಗ, ಆಗಸ್ಟ್ 30: ಮೊಬೈಲ್, ಇಂಟರ್ನೆಟ್​ ಎಂಬುದು ಮನುಷ್ಯನ ದಿನನಿತ್ಯದ ಭಾಗವಾಗಿ ಹೋಗಿದೆ. ಆದರೆ ಕೋಟೆನಾಡಿನ ಆ ಗ್ರಾಮಗಳ ಜನರು ಮಾತ್ರ ಮೊಬೈಲ್ ಬಳಸುವಂತಿಲ್ಲ. ಇಂಟರ್ನೆಟ್ ಕೂಡ​ ಇಲ್ಲದೆ ಪುರಾತನರಂತೆ ಬದುಕು ಸವೆಸುತ್ತಿದ್ದಾರೆ. ಆದರೂ ಯಾರೊಬ್ಬರೂ ಹೇಳೋರಿಲ್ಲ, ಕೇಳೋರಿಲ್ಲ.

ಮನೆ ಮೇಲೆ ಹತ್ತಿದರೂ, ಮರದ ಮೇಲೇರಿದರೂ ನೆಟ್​ವರ್ಕ್ ಸಿಗಲ್ಲ. ಮಕ್ಕಳಿಗೆ ಓದು-ಬರಹಕ್ಕೆ ಇಂಟರ್ ನೆಟ್​ ಇಲ್ಲದೆ ಜನರು ಪರದಾಡುವಂತಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಥಂಬ್ ಕೊಡಲು ಸಹ ನೆಟ್​​ವರ್ಕ್ ಸಮಸ್ಯೆ ಆಗುತ್ತಿದೆ. ಈ ಎಲ್ಲಾ ಸಮಸ್ಯಗಳು ಇಂದಿಗೂ ಕೋಟೆನಾಡು ಚಿತ್ರದುರ್ಗ ತಾಲೂಕಿನ ನಲ್ಲಿಕಟ್ಟೆ ಮತ್ತು ವಿ.ಪಾಳ್ಯ ಗ್ರಾಮಗಳಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಪುರಾತತ್ವ ಇಲಾಖೆ ಯೋಜನೆಯಿಂದ ಕಳೆಗುಂದಿದ ಚಿತ್ರದುರ್ಗ ಕೋಟೆ, ಪ್ರವಾಸಿಗರ ಕಿಡಿ

ಹೌದು.. ಸುಮಾರು ವರ್ಷಗಳಿಂದ ಈ ಗ್ರಾಮಗಳ ಜನರು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ನೆಟ್​ವರ್ಕ್ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಅನಾರೋಗ್ಯ ಸಂದರ್ಭದಲ್ಲಿ ಆಂಬುಲೆನ್ಸ್​ಗೆ ಕರೆ ಮಾಡಲು ಸಹ ಊರಿಂದ ಹೊರಗೆ ಬರಬೇಕು. ಆಪತ್ತು ಕಾಲದಲ್ಲಿ ಮೊಬೈಲ್ ನೆಟವರ್ಕ್ ಇಲ್ಲದೆ ಪರದಾಡುವ ಸ್ಥಿತಿಯಿದೆ. ಮಕ್ಕಳಿಗೆ ಓದಿಕೊಳ್ಳಲು ಸಹ ಇಂಟರ್ನೆಟ್, ಮೊಬೈಲ್ ನೆಟ್​ವರ್ಕ್ ಅಗತ್ಯವಾಗಿದೆ. ಆದರೆ ನೆಟ್ ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೂ ಸಾಕಷ್ಟು ತೊಂದರೆ ಆಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ನಲ್ಲಿಕಟ್ಟೆ ಗ್ರಾಮದ ಪಕ್ಕದ ಗ್ರಾಮ ವಿ.ಪಾಳ್ಯದಲ್ಲೂ ಪರಿಸ್ಥಿತಿ ಭಿನ್ನಾವಗೇನೂ ಇಲ್ಲ. ನ್ಯಾಯ ಬೆಲೆ ಅಂಗಡಿಗಳಲ್ಲಿ ಥಂಬ್​ ನೀಡಿ ಪಡಿತರ ಪಡೆಯಲು ಸಹ ಸಂಜೆವರೆಗೆ ಕಾಯುವ ದುಸ್ಥಿತಿಯಿದೆ. ಅನೇಕ ಸಲ ಶಾಸಕರು, ಸಂಸದರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಯಾವುದೇ ಪ್ರಯೋಜವಾಗಿಲ್ಲ ಹೀಗಾಗಿ ಪ್ರತ್ಯೇಕ್ ಟವರ್​ಗಳನ್ನು ಅಳವಡಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಜನರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ನಾಪತ್ತೆಯಾಗಿದ್ದ ಖಾಸಗಿ ಶಾಲೆಯ 6 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ

ಒಟ್ಟಾರೆಯಾಗಿ ಚಿತ್ರದುರ್ಗ ತಾಲೂಕಿನ ನಲ್ಲಿಕಟ್ಟೆ ಮತ್ತು ವಿ.ಪಾಳ್ಯ ಗ್ರಾಮಸ್ಥರು ನೆಟ್​ವರ್ಕ್ ಸಮಸ್ಯೆಯಿಂದಾಗಿ ಹೈರಾಣಾಗಿದ್ದಾರೆ. ಈ ಕಾಲದಲ್ಲಿ ವಿದ್ಯುತ್​ನಷ್ಟೇ ಅಗತ್ಯವಾಗಿರುವ ಮೊಬೈಲ್, ಇಂಟರ್ ನೆಟ್ ಸಂಪರ್ಕ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.