ಚಿತ್ರದುರ್ಗ: ನಾಪತ್ತೆಯಾಗಿದ್ದ ಖಾಸಗಿ ಶಾಲೆಯ 6 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ

ಮಕ್ಕಳ ಬಗ್ಗೆ ಎಷ್ಟೇ ಎಚ್ಚರ ವಹಿಸಿದರು, ಅದು ಕಡಿಮೆಯೇ. ಹೌದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ(Holalkere) ಪಟ್ಟಣದ ಖಾಸಗಿ ಶಾಲೆಯ ಆರು ವಿದ್ಯಾರ್ಥಿಗಳು ದಿಢೀರ್ ನಾಪತ್ತೆಯಾದ ಘಟನೆ ನಡೆದಿತ್ತು. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ನಾಪತ್ತೆಯಾದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

ಚಿತ್ರದುರ್ಗ: ನಾಪತ್ತೆಯಾಗಿದ್ದ ಖಾಸಗಿ ಶಾಲೆಯ 6 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ
ಹೊಳಲ್ಕೆರೆ ಖಾಸಗಿ ಶಾಲೆಯ 6 ವಿದ್ಯಾರ್ಥಿಗಳು ದಿಢೀರ್​ ನಾಪತ್ತೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 21, 2024 | 5:15 PM

ಚಿತ್ರದುರ್ಗ, ಆ.21: ಆರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ(Holalkere) ಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದಿತ್ತು. ಡ್ರೀಮ್ ವರ್ಡ್ ಇಂಟರ್ ನ್ಯಾಷನಲ್‌ ಸ್ಕೂಲ್(Dream world international school)​ನಲ್ಲಿ ಎಸ್​ಎಸ್​ಎಲ್​ಸಿ ಓದುತ್ತಿದ್ದ 6 ವಿದ್ಯಾರ್ಥಿಗಳಾದ ಶ್ರೇಯಸ್, ಧನುಷ್, ಮನು, ತರುಣ್, ಸಿದ್ದೇಶ್ ಹಾಗೂ ಯಶಸ್ ನಾಪತ್ತೆಯಾಗಿದ್ದರು. ಈ ಆರು ಜನ ವಿದ್ಯಾರ್ಥಿಗಳು, ಶಾಲೆಯ ವಸತಿ ಶಾಲೆಯಲ್ಲಿದ್ದರು. ಆದರೆ, ಇಂದು(ಬುಧವಾರ) ಬೆಳಗ್ಗೆಯಿಂದ ನಾಪತ್ತೆ ಆಗಿದ್ದರು. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ನಾಪತ್ತೆಯಾಗಿದ್ದ 6ಜನ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಪತ್ತೆಯಾಗಿದ್ದಾರೆ. ಶ್ರೇಯಸ್ ಸಂಬಂಧಿ ಮನೆಗೆ ಈ ವಿದ್ಯಾರ್ಥಿಗಳು ತೆರಳಿದ್ದು, ಪೀಣ್ಯ ಬಡಾವಣೆಯ‌ ಶ್ವೇತಾ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದಾರೆ. ವಿಡಿಯೋ ಕಾಲ್ ಮಾಡಿ ತಹಸೀಲ್ದಾರ್ ಫಾತಿಮಾ ಖಚಿತ ಪಡಿಸಿಕೊಂಡಿದ್ದಾರೆ.

ದೇವಾಪುರ ಗ್ರಾ.ಪಂ ಬಿಲ್​ ಕಲೆಕ್ಟರ್​ ಯಲ್ಲಪ್ಪ ಆತ್ಮಹತ್ಯೆಗೆ ಯತ್ನ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಅಧ್ಯಕ್ಷೆ ಹಣ ಪಾವತಿಸದಿದ್ದಕ್ಕೆ ಬಿಲ್​ ಕಲೆಕ್ಟರ್​ ಯಲ್ಲಪ್ಪ ಎಂಬಾತ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಸೂಚನೆಯಂತೆ ಸುಮಾರು 1.5 ಲಕ್ಷ ರೂ. ಖರ್ಚು ಮಾಡಿ ಚರಂಡಿ ಸ್ವಚ್ಛತೆ ಹಾಗೂ ಇನ್ನಿತರ ಕಾರ್ಯ ಯಲ್ಲಪ್ಪ ಮಾಡಿಸಿದ್ದರು. ಇದೀಗ ಪಿಡಿಒ ಹಾಗೂ ಅಧ್ಯಕ್ಷೆ ಬಿಲ್​ನ ಹಣ ಪಾವತಿಸದೆ ಸತಾಯಿಸಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಯಲ್ಲಪ್ಪಗೆ ಸುರಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಟೆಕ್ಕಿ ನಿಗೂಢ ನಾಪತ್ತೆ; ಹುಡುಕಿಕೊಡುವಂತೆ ಎಕ್ಸ್​ ಮೂಲಕ ಪೊಲೀಸ್ ಆಯುಕ್ತರಿಗೆ ಪತ್ನಿ ಮನವಿ

ಜಮೀನಿನಲ್ಲಿ ಅನುಮಾನಸ್ಪದವಾಗಿ ವ್ಯಕ್ತಿ ಸಾವು

ಶಿವಮೊಗ್ಗ: ಅನುಮಾನಸ್ಪದವಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ತಾವರೆಕೊಪ್ಪ ಗ್ರಾಮದ ಜಮೀನಿನಲ್ಲಿ ನಡೆದಿದೆ. ಮಂಜುನಾಥ್ (36) ಮೃತ ವ್ಯಕ್ತಿ. ಕಳೆದ ಎರಡು ದಿನದ ಹಿಂದೆ ಜಮೀನಿನಲ್ಲಿ ತಂದೆ-ಮಗ ಕೆಲಸ ಮಾಡುತ್ತಿದ್ದರು. ಬಳಿಕ ಜಮೀನಿನಿಂದ ಮಧ್ಯಾಹ್ನ ಊಟಕ್ಕೆಂದು ಮೃತ ಮಂಜುನಾಥ್ ತಂದೆ ಮನೆಗೆ ತೆರಳಿದ್ದರು. ಮಗ ಮಾತ್ರ ಜಮೀನಿನಲ್ಲಿ ಅಣಬೆ ಹುಡುಕುತ್ತಿದ್ದ. ತಂದೆಯ ಊಟ ಮುಗಿದು ಎಷ್ಟು ಹೊತ್ತಾದರೂ‌ ಮಗ ಮನೆಗೆ ‌ಬಾರದ ಹಿನ್ನಲೆ ಆತನನ್ನು ಹುಡುಕುತ್ತಾ ಜಮೀನಿನತ್ತ‌ ತಂದೆ ತೆರಳಿದ್ದರು.

ಈ ವೇಳೆ ಜಮೀನಿನಲ್ಲಿ ಅನುಮಾನಸ್ಪದವಾಗಿ ಮಂಜುನಾಥ್ ಮೃತಪಟ್ಟಿದ್ದ. ಮಂಜುನಾಥ್ ಮೃತದೇಹ ಕಂಡು ತಂದೆ ದಿಗ್ಬ್ರಾಂತರಾಗಿದ್ದಾರೆ. ಇನ್ನು ಮೃತ ಮಂಜುನಾಥ್ ದೇಹದಲ್ಲಿ ಸುಟ್ಟ ಗಾಯ ಕಂಡು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. 2022 ರಲ್ಲಿ ಮಂಜುನಾಥ್ ಸಹೋದರ ಮಹೇಶ್ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಮಂಜುನಾಥ್ ಅನುಮಾನಸ್ಪದವಾಗಿ ‌ಕೊನೆಯುಸಿರೆಳೆದಿದ್ದಾರೆ. ಈ ಘಟನೆ ‌ಕುರಿತು‌ ಸೊರಬ‌ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Wed, 21 August 24

ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್