Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರೀ ಮಳೆಯಿಂದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು

ಭಾರೀ ಮಳೆಯಿಂದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು

ಸುಷ್ಮಾ ಚಕ್ರೆ
|

Updated on:Sep 27, 2024 | 9:43 PM

ಭಾರೀ ಮಳೆಯಿಂದಾಗಿ ಉಜ್ಜಯಿನಿಯ ಮಹಾಕಾಳ ದೇವಾಲಯದ ಹೊರಬದಿಯ ಗೋಡೆ ಕುಸಿದಿದ್ದು, ಹಲವರು ಸಿಲುಕಿರುವ ಆತಂಕವಿದೆ. ಅವಶೇಷಗಳ ಅಡಿಯಲ್ಲಿರುವ ವ್ಯಕ್ತಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಭಾರಿ ಮಳೆಗೆ ಉಜ್ಜಯಿನಿ ಮಹಾಕಾಳೇಶ್ವರ ದೇಗುಲದ ಗೋಡೆ ಕುಸಿತವಾಗಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭಾರೀ ಮಳೆಗೆ ಮಹಾಕಾಲ್ ದೇವಸ್ಥಾನದ ಹೊರಭಾಗದ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಇನ್ನೂ ಇಬ್ಬರು ಗಾಯಗೊಂಡಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಜ್ಜಯಿನಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ರಸ್ತೆಗಳಲ್ಲಿ ನೀರು ಸಂಗ್ರಹವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 27, 2024 09:42 PM