ಮಂಡ್ಯ: ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಮಂಡ್ಯದ ಕೆ.ಆರ್. ಪೇಟೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಬೀದಿ ರಂಪಾಟ ಮಾಡಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡದ್ದಕ್ಕೆ ಪುರಸಭೆ ಸದಸ್ಯ ಕೆಸಿ ಮಂಜುನಾಥ್ ಬೀದಿ ರಂಪಾಟ ಮಾಡಿರುವುದು ಗೊತ್ತಾಗಿದೆ.
ಮಂಡ್ಯ, ಸೆಪ್ಟೆಂಬರ್ 27: ಪುರಸಭೆ ಸದಸ್ಯ ಕೆಸಿ ಮಂಜುನಾಥ್ ಅವರು ಕೆಆರ್ ಪೇಟೆ ಪುರಸಭೆಗೆ 4 ಬಾರಿ ಆಯ್ಕೆ ಆಗಿದ್ದಾರೆ. ಈ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಸ್ಥಾಯಿ ಸಮಿತಿ ನೀಡುವುದಾಗಿ ಭರವಸೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲಾಧ್ಯಕ್ಷರು ಭರವಸೆ ನೀಡಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಇದೀಗ ಸ್ಥಾಯಿ ಸಮಿತಿ ಕೈ ತಪ್ಪುವ ವಿಚಾರ ತಿಳಿದು ಮಂಜುನಾಥ್ ಕೆಂಡಾ ಮಂಡಲವಾಗಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಕುಮಾರ್, ಜಿಲ್ಲಾ ಅಧ್ಯಕ್ಷ ಸಿಡಿ ಗಂಗಾಧರ್, ಮಾಜಿ ಶಾಸಕ ಕೆಬಿ ಚಂದ್ರಶೇಖರ್ ವಿರುದ್ಧ ಅವಾಚ್ಯ ಶಬ್ದಗಳಿಂದ ಅವರು ನಿಂದನೆ ಮಾಡಿದ್ದಾರೆ.
ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಮಾತು ಕೇಳಿಕೊಂಡು ಕಾಂಗ್ರೆಸ್ ಪಕ್ಷ ಹಾಳು ಮಾಡ್ತಿದ್ದೀರಿ. ಜೆಡಿಎಸ್ ಪಕ್ಷದ ಜೊತೆ ಶಾಮಿಲ್ ಆಗಿದ್ದೀರಾ? ಸ್ಥಾಯಿ ಸಮಿತಿ ಕೊಡುತ್ತೇವೆ ಎಂದು ಅನ್ಯಾಯ ಮಾಡಿದ್ದಾರೆ, ಇವರ ಮನೆ ಹಾಳಾಗ ಎಂದೆಲ್ಲ ಮಂಜುನಾಥ್ ಕಿಡಿ ಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ