Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚಿದ ಕ್ರೈಂ: ಮನೆ ಬಾಡಿಗೆ ಕೊಡಲು ಬೇಡಿಕೆಗಳ ಪಟ್ಟಿಯಿಟ್ಟ ಬೆಂಗಳೂರಿನ ಮನೆ ಮಾಲೀಕರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಮಹಾಲಕ್ಷ್ಮೀ ಕೊಲೆ ಪ್ರಕರಣದಿಂದ ಸಿಲಿಕಾನ್ ಸಿಟಿ ಮನೆ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಯಾರಿಗೆ ಮನೆ ಕೊಡಬೇಕು? ಯಾರಿಗೆ ಮನೆ ಕೊಡಬಾರದು ಎನ್ನುವ ಟೆನ್ಷನ್ ಶುರುವಾಗಿಬಿಟ್ಟಿದೆ. ಈ ಹಿನ್ನಲೆ ಮನೆ ಬಾಡಿಗೆ ಕೊಡಲು ಕೆಲ ಬೇಡಿಕೆಗಳ ಪಟ್ಟಿಯಿಟ್ಟಿದ್ದಾರೆ. ಏನದು ಅಂತೀರಾ? ಈ ಸ್ಟೋರಿ ಓದಿ.

ಹೆಚ್ಚಿದ ಕ್ರೈಂ: ಮನೆ ಬಾಡಿಗೆ ಕೊಡಲು ಬೇಡಿಕೆಗಳ ಪಟ್ಟಿಯಿಟ್ಟ ಬೆಂಗಳೂರಿನ ಮನೆ ಮಾಲೀಕರು
ಮನೆ ಬಾಡಿಗೆ ಕೊಡಲು ಬೇಡಿಕೆಗಳ ಪಟ್ಟಿಯಿಟ್ಟ ಬೆಂಗಳೂರಿನ ಮನೆ ಮಾಲೀಕರು
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2024 | 10:05 PM

ಬೆಂಗಳೂರು, ಸೆ.27: ವೈಯಾಲಿಕಾವಲ್​ನಲ್ಲಿ ನಡೆದ ಮಹಾಲಕ್ಷ್ಮೀಯ ಭೀಕರ ಕೊಲೆಯಿಂದ ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬಿದ್ದಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಆತಂಕಕ್ಕೊಳಗಾಗಿರುವುದು ಬೆಂಗಳೂರಿನ(Bengaluru) ಮನೆ ಮಾಲೀಕರು. ಹೌದು, ಕೊಲೆ ಸುದ್ದಿ ಕೇಳಿದ ಮನೆ ಮಾಲೀಕರಿಗೆ ಢವಢವ ಶುರುವಾಗಿದ್ದು, ನಾವ್ ಬ್ಯಾಚುಲರ್​ಗಳಿಗೆ ಮನೆ ಕೊಡಲ್ಲ ಅಂತಿದ್ದಾರೆ. ಆಧಾರ್ ಕಾರ್ಡ್, ವೋಟಾರ್ ಐಡಿ ಕಾಪಿ ತಗೊಂಡರೂ ವೇಸ್ಟ್ ಆಗ್ಬಿಟ್ಟಿದ್ಯಂತೆ. ಬಾಡಿಗೆ ಮಾಲೀಕರಿಗೆ ಬಾಡಿಗೆದಾರರ ಮೂಲ ಹುಡುಕುವುದೇ ಕಷ್ಟ ಕಷ್ಟ ಎಂದು ಕೊರಗುತ್ತಿದ್ದಾರೆ.

ಇನ್ನು ಹೆಚ್ಚಿದ ಕ್ರೈಂ ಸಂಖ್ಯೆಯಿಂದ ಫುಲ್ ಟೆನ್ಷನ್ ಆಗಿರುವ ಮನೆ ಮಾಲೀಕರು, ಜಿಲ್ಲೆ ಹಾಗೂ ಹೊರರಾಜ್ಯದವರನ್ನ ಹೇಗೆ ನಂಬಿ ಬಾಡಿಗೆ ಕೊಡುವುದು ಎಂದು ಆಕ್ರೋಶ ಹೊರಹಾಕ್ತಿದ್ದಾರೆ. ಅದಲ್ಲದೇ, ಒಂದಷ್ಟು ಬೇಡಿಕೆಗಳನ್ನೂ ಪಟ್ಟಿ ಮಾಡ್ಕೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಮಹಾಲಕ್ಷ್ಮೀಯನ್ನು 50ಕ್ಕೂ ಹೆಚ್ಚು ಪೀಸ್ ಪೀಸ್ ಮಾಡಿದ್ದ ಹಂತಕ ಆತ್ಮಹತ್ಯೆ

ಮನೆ ಮಾಲೀಕರ ಬೇಡಿಕೆಗಳು?

01. ಆಧಾರ್ ಕಾರ್ಡ್ ಕೊಡದೇ ಕೆಲವರು ಕಳ್ಳಾಟ, ಕಡ್ಡಾಯ ಆಧಾರ್ ಕೊಡಬೇಕು 02. ಆಧಾರ್ ನಕಲಿಯೋ ಅಸಲಿಯೋ ತಿಳಿಯಲು ಹೆಲ್ಪ್ ಡೆಸ್ಕ್ ತೆರೆಯಲು ಒತ್ತಾಯ 03. ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್, ವೋಟರ್ ಐಡಿ ಎಲ್ಲಾ ಕೊಡಬೇಕು 04. ಗಲ್ಲಿ ಗಲ್ಲಿಯಲ್ಲೂ ರೋಡ್ನಲ್ಲಿ ಸ್ಥಳೀಯ ಆಡಳಿತ ಸಿಸಿಟಿವಿ ಅಳವಡಿಸ ಬೇಕು 05. ಮನೆಯಲ್ಲಿ ಆರಂಭದಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟೇ ಜನರು ಇರಬೇಕು 06. ಬಾಡಿಗೆ ಮನೆಯಲ್ಲಿ ಯಾವುದೇ ರೀತಿ ಪಾರ್ಟಿ ಮಾಡಲು ಅವಕಾಶ ಇರುವುದಿಲ್ಲ

ಒಟ್ಟಿನಲ್ಲಿ ಮಹಾಲಕ್ಷ್ಮೀ ಭೀಕರ ಕೊಲೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಕೊಡುವ ಮಾಲೀಕರ ಎದೆ ಬಡಿತ ಹೆಚ್ಚಿಸಿರುವುದಂತೂ ನಿಜಾ. ಆದರೆ, ಇದರಿಂದ ಮನೆ ಹುಡುಕುವ ಬ್ಯಾಚುಲರ್ಸ್​ಗಳಿಗೆ ಸಮಸ್ಯೆ ಆಗುತ್ತಿರುವುದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ