ಮೈಸೂರು: ಕಾಂಗ್ರೆಸ್ ಕಾರ್ಯಕರ್ತರಿಂದ ಸಿದ್ದರಾಮಯ್ಯ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ. 27) ಮೈಸೂರಿಗೆ ತೆರಳಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದ, ಮುಡಾ ಅಧ್ಯಕ್ಷ ಕೆ.ಮರಿಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರೇ ಘೇರಾವ್ ಹಾಕಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (Muda) ನಡೆದಿದೆ ಎನ್ನಲಾಗಿರುವ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ತನಿಖೆ ನಡೆಸಲು ಜನಪ್ರತಿನಿಧಿಗಳ ನ್ಯಾಯಾಲಯ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ. 27) ಮೈಸೂರಿಗೆ ತೆರಳಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದ, ಮುಡಾ ಅಧ್ಯಕ್ಷ ಕೆ.ಮರಿಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರೇ ಘೇರಾವ್ ಹಾಕಿದ್ದಾರೆ.
ಸಿಎಂ ಆಪ್ತ, ಮುಡಾ ಅಧ್ಯಕ್ಷ ಮರಿಗೌಡ ಅವರಿಗೆ ಕೈ ಕಾರ್ಯಕರ್ತರು ಮುತ್ತಿಗೆ ಹಾಕಿ, ಸಿದ್ದರಾಮಯ್ಯರ ಈ ಸ್ಥಿತಿಗೆ ನೀನೇ ಕಾರಣ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಪಸ್ ಕಳುಹಿಸಿದರು. ಈ ವೇಳೆ ಕೆ.ಮರಿಗೌಡ ತಿಳಿ ಹೇಳಲು ಮುಂದಾದರು. ಆದರೆ ಕಾರ್ಯಕರ್ತರು, ನಿನ್ನ ಭಾಷಣ ಬೇಡ ಹೊರಡು ಅಂತ ಕೆ. ಮರಿಗೌಡ ಅವರನ್ನು ಬಲವಂತವಾಗಿ ಕಾರು ಹತ್ತಿಸಿ ವಾಪಸ್ ಕಳುಹಿಸಿದರು.
ಇದನ್ನೂ ಓದಿ: ಮುಡಾ ಹಗರಣ ತನಿಖೆಗೆ ಸಿಬಿಐ ಎಂಟ್ರಿ ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್!
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ