ಪುನೀತ್ ರಾಜ್ಕುಮಾರ್ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಆಗಿರುವ ಪ್ರಕಾಶ ಮತ್ತು ದೀಪಾ ದಂಪತಿ ಮನೆಯ ಎದುರು ದೇವಸ್ಥಾನ ಕಟ್ಟಿಸಿದ್ದಾರೆ. ಅಪ್ಪು ದೇವಸ್ಥಾನವನ್ನು ತಮ್ಮ ಸ್ವಂತ ಜಾಗದಲ್ಲಿ ಈ ಅಭಿಮಾನಿಗಳು ಕಟ್ಟಿದ್ದಾರೆ. ಈ ದಂಪತಿಯ ಮಗಳಿಗೆ ಅಪೇಕ್ಷಾ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ನಾಮಕರಣ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ ಅವರು ನಮ್ಮನ್ನು ಅಗಲಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಅವರ ನೆನಪು ಅಷ್ಟು ಸುಲಭದಲ್ಲಿ ಮಾಸುವಂಥದ್ದಲ್ಲ. ರಸ್ತೆಗಳಿಗೆ, ಪಾರ್ಕ್ಗಳಿಗೆ ಅವರ ಹೆಸರನ್ನು ಇಡಲಾಗಿದೆ. ಈಗ ಪುನೀತ್ ಅಭಿಮಾನಿಯೊಬ್ಬರು ಅಪ್ಪುಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಅಪ್ಪು ದೇವಸ್ಥಾನವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಸಿದ್ದಾರೆ. ಪುನೀತ್ ಮೂರ್ತಿಯನ್ನು ನೋಡಿ ಅಶ್ವಿನಿ ಭಾವುಕರಾಗಿದ್ದಾರೆ. ಈ ಬಗ್ಗೆ ದೇವಸ್ಥಾನ ನಿರ್ಮಿಸಿದವರು ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.