
ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಹಿಡಿದಿದ್ದಕ್ಕೆ ಪೈಲ್ವಾನ್ ಮೇಲೆ ಹಲ್ಲೆ ಮಾಡಿರುವ ಘಟನೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಿನಲ್ಲಿ ನಡೆದಿದೆ.
ಗ್ರಾಮದಲ್ಲಿ ನಡೆದಿದ್ದ ಕೊಬ್ಬರಿ ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಪೈಲ್ವಾನ್ ಹೋರಿ ಹಿಡಿದಿದ್ದ. ಹೀಗಾಗಿ ಅಡಗಂಟಿ ಗ್ರಾಮದ ಹಿಡಿತಗಾರನ ಮೇಲೆ ಹೋರಿ ಕಡೆಯವರು ಹಲ್ಲೆ ಮಾಡಿದ್ದಾರೆ. ಗಾಯಾಳು ಚಿಕ್ಕಬಾಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಈ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 5:19 pm, Sun, 15 December 19