ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟ; ಕಲಬುರಗಿಯಲ್ಲಿ ಇಬ್ಬರು ಬಂಧನ

|

Updated on: May 03, 2021 | 12:15 PM

ಪೊಲೀಸರು ಬಂಧಿತರಿಂದ ಐದು ರೆಮ್​ಡಿಸಿವಿರ್ ಇಂಜೆಕ್ಷನ್ ಬಾಟಲ್, ಮೊಬೈಲ್ ಮತ್ತು ಬೈಕ್​ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಮಹಂತೇಶ್ ಮಠಪತಿ, ಸಾಜೀದ್ ಕೂಡಿ ಎಂದು ತಿಳಿದುಬಂದಿದ್ದು, ಇವರಿಬ್ಬರು ನಗರದ ನವಜೀವನ್ ಬ್ಲಡ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು.

ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟ; ಕಲಬುರಗಿಯಲ್ಲಿ ಇಬ್ಬರು ಬಂಧನ
ರೆಮ್​ಡಿಸಿವಿರ್​ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ
Follow us on

ಕಲಬುರಗಿ: ಕೊರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸೂಕ್ತ ಚಿಕಿತ್ಸೆ, ಬೆಡ್ ಹಾಗು ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕೆಲವು ಕಡೆ ಅಕ್ರಮವಾಗಿ ರೆಮ್ಡಿಸಿವಿರ್ ಇಂಜೆಕ್ಷನ್ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಇಂತಹದೊಂದು ಘಟನೆ ಇದೀಗ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ರೆಮ್​ಡಿಸಿವಿರ್​ನ್ನು ಇಬ್ಬರು ಮಾರಾಟ ಮಾಡುತ್ತಿದ್ದರು. ನಗರ ರೌಡಿ ನಿಗ್ರಹ ಪಡೆಯ ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಬಂಧಿತರಿಂದ ಐದು ರೆಮ್​ಡಿಸಿವಿರ್ ಇಂಜೆಕ್ಷನ್ ಬಾಟಲ್, ಮೊಬೈಲ್ ಮತ್ತು ಬೈಕ್​ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಮಹಂತೇಶ್ ಮಠಪತಿ, ಸಾಜೀದ್ ಕೂಡಿ ಎಂದು ತಿಳಿದುಬಂದಿದ್ದು, ಇವರಿಬ್ಬರು ನಗರದ ನವಜೀವನ್ ಬ್ಲಡ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಕೆಲ ಆಸ್ಪತ್ರೆಯವರಿಂದ ರೆಮ್​ಡಿಸಿವಿರ್ ಇಂಜೆಕ್ಷನ್ ಪಡೆಯುತ್ತಿದ್ದರು. ಜೊತೆಗೆ ಒಂದು ಬಾಟಲ್ ರೆಮ್​ಡಿಸಿವಿರ್​ಗೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.

ಬಂಧಿತರಿಂದ ಐದು ಬಾಟಲ್​ ರೆಮ್​ಡಿಸಿವಿರ್​ನ ವಶಪಡಿಸಿಕೊಂಡಿದ್ದಾರೆ

ಆಂಬುಲೆನ್ಸ್ ಚಾಲಕ ಅಮಾನತು
ಈ ಹಿಂದೆ ಅಕ್ರಮವಾಗಿ ರೆಮ್​ಡಿಸಿವಿರ್ ಇಂಜೆಕ್ಷನ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಆಂಬುಲೆನ್ಸ್ ಚಾಲಕನನ್ನು ರಿಮ್ಸ್ ನಿರ್ದೇಶಕ ಡಾ.ಪೀರಾಪುರರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ರಾಯಚೂರಿನ ಒಪೆಕ್ ಬಳಿ ಆ್ಯಂಬುಲೆನ್ಸ್ ನಿಲ್ಲಿಸಿ, ಚಾಲಕ ಬಂಡೆಪ್ಪನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭ ಚಾಲಕನ ಜೇಬಿನಲ್ಲಿ ವಯಲ್​ಗಳು ಪತ್ತೆಯಾಗಿದ್ದವು. ಚಾಲಕನ ವಿರುದ್ಧ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರು. ಚಾಲಕ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಾಟ ಮಾಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು.

ಇದನ್ನೂ ಓದಿ

ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಣೆ: ರಾಯಚೂರಿನಲ್ಲಿ ಆಂಬುಲೆನ್ಸ್​ ಚಾಲಕ ಅಮಾನತು, ಬೆಂಗಳೂರಿನಲ್ಲಿ ಇಬ್ಬರ ಬಂಧನ

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ; 4 ದಿನದಿಂದ ತುಮಕೂರಿನ ವ್ಯಕ್ತಿ ಪರದಾಟ

(Police arrested two people who were illegally selling Remdesivir injection in kalaburagi)