ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಣೆ: ರಾಯಚೂರಿನಲ್ಲಿ ಆಂಬುಲೆನ್ಸ್​ ಚಾಲಕ ಅಮಾನತು, ಬೆಂಗಳೂರಿನಲ್ಲಿ ಇಬ್ಬರ ಬಂಧನ

ಅಕ್ರಮವಾಗಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಆಂಬುಲೆನ್ಸ್​ ಚಾಲಕನನ್ನು ರಿಮ್ಸ್‌ ನಿರ್ದೇಶಕ ಡಾ.ಪೀರಾಪುರರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಣೆ: ರಾಯಚೂರಿನಲ್ಲಿ ಆಂಬುಲೆನ್ಸ್​ ಚಾಲಕ ಅಮಾನತು, ಬೆಂಗಳೂರಿನಲ್ಲಿ ಇಬ್ಬರ ಬಂಧನ
ರಾಯಚೂರಿನಲ್ಲಿ ಅಕ್ರಮವಾಗಿ ರೆಮ್​ಡೆಸಿವಿರ್ ಸಾಗಿಸುತ್ತಿದ್ದ ಆರೋಪ ಹೊತ್ತ ವ್ಯಕ್ತಿಯನ್ನು ಅಮಾನತು ಮಾಡಲಾಯಿತು.
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 25, 2021 | 5:49 PM

ರಾಯಚೂರು/ಬೆಂಗಳೂರು: ಅಕ್ರಮವಾಗಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಆಂಬುಲೆನ್ಸ್​ ಚಾಲಕನನ್ನು ರಿಮ್ಸ್‌ ನಿರ್ದೇಶಕ ಡಾ.ಪೀರಾಪುರರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ರಾಯಚೂರಿನ ಒಪೆಕ್ ಬಳಿ ಆ್ಯಂಬುಲೆನ್ಸ್ ನಿಲ್ಲಿಸಿ, ಚಾಲಕ ಬಂಡೆಪ್ಪನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭ ಚಾಲಕನ ಜೇಬಿನಲ್ಲಿ ವಯಲ್‌ಗಳು ಪತ್ತೆಯಾಗಿದ್ದವು. ಚಾಲಕನ ವಿರುದ್ಧ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ. ಚಾಲಕ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಾಟ ಮಾಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು.

ನಿಗದಿತ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಮಾರಾಟ ಮಾಡುತ್ತಿದ್ದ ಬೆಂಗಳೂರು ಸಮೀಪದ ಆನೇಕಲ್ ತಾಲ್ಲೂಕು ಜಿಗಣಿ ಗ್ರಾಮದ ಸುಹಾಸ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ಅಲಿ ಮತ್ತು ರಕ್ಷಿತ್‌ ಮೇಲೆ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಆರೋಪ ಹೊರಿಸಲಾಗಿದೆ.

ಆರೋಪಿಗಳು ರೆಮ್​ಡಿಸಿವಿರ್ ಇಂಜೆಕ್ಷನ್​ಗಳನ್ನು ₹ 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಜಿಗಣಿ ಠಾಣೆಯ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದರು. 2 ಇಂಜೆಕ್ಷನ್‌ಗೆ ₹ 30 ಸಾವಿರ ಪಡೆಯುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಔಷಧ ಬೇಕಿತ್ತು. ಈ ವೇಳೆ ಶಾಂತಿನಗರದಿಂದ ತರಿಸಿಕೊಡುವುದಾಗಿ ಹೇಳಿದ್ದ ಸಿಬ್ಬಂದಿ ಹಣ ಪಡೆಯಲು ಮುಂದಾಗಿದ್ದರು ಎಂಬ ದೂರುಗಳಿವೆ. ಕಳೆದ ಬಾರಿ ಕೊವಿಡ್ ಸಮಯದಲ್ಲೂ ಸಾಕಷ್ಟು ದೂರು ಕೇಳಿಬಂದಿತ್ತು.

ಬೀದರ್​ನಿಂದ ಯಾದಗಿರಿಗೆ ರೆಮ್​ಡಿವಿರ್ ಸಾಗಾಟ ಬೀದರ್‌ನಿಂದ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ 50 ರೆಮ್‌ಡಿಸಿವಿರ್ ಇಂಜೆಕ್ಷನ್​ಗಳನ್ನು ಸಾಗಿಸಲಾಗಿದೆ. ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿ ವಾಹನದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್​ಗಳನ್ನು ಕೊಂಡೊಯ್ಯಲಾಯಿತು. ಇಂಜೆಕ್ಷನ್ ಕೊಂಡೊಯ್ದ ರೀತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ರೆಮ್​ಡಿಸಿವಿರ್ ಮಾರಾಟ ಜಾಲ; ಮತ್ತಿಬ್ಬರ ಬಂಧನ

ಇದನ್ನೂ ಓದಿ: ಪೊಲೀಸ್​ ದಾಳಿ: ಬೆಂಗಳೂರಿನಲ್ಲಿ 10 ರಿಂದ 15 ಸಾವಿರಕ್ಕೆ ರೆಮ್​ಡೆಸಿವರ್​ ಮಾರುತ್ತಿದ್ದವರ ಬಂಧನ