ಹಂಪಿಯ ಬಡವಿ ಲಿಂಗ ಅರ್ಚಕ ಕೃಷ್ಣ ಭಟ್ಗೆ ಶಾಂತಿ ಕೋರಲು ಬೇರೊಬ್ಬರ ಚಿತ್ರ ಬಳಸಿದ ಸಚಿವ ಶ್ರೀರಾಮುಲು
ರಾಮಸ್ವಾಮಿ ಅಯ್ಯಂಗಾರ್ ಅವರು ಕಳೆದ ಹಲವು ವರ್ಷಗಳಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇಗುಲದಲ್ಲಿ ಸೇವೆ ನೆರವೇರಿಸುತ್ತಿದ್ದಾರೆ. ಹಂಪಿಯ ಕೃಷ್ಣ ಭಟ್ರ ಚಿತ್ರದ ಬದಲಿಗೆ ರಾಮಸ್ವಾಮಿ ಅಯ್ಯಂಗಾರ್ರ ಚಿತ್ರ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸಚಿವ ಶ್ರೀರಾಮುಲು ಮುಜುಗರಕ್ಕೆ ಈಡಾಗಿದ್ದಾರೆ.
ಮಂಡ್ಯ: ಹಂಪಿಯ ಬಡವಿ ಲಿಂಗದ ಅರ್ಚಕ ಕೃಷ್ಣ ಭಟ್ ಭಾನುವಾರ ಬೆಳಗ್ಗೆ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಕೋರಲು ಹೋಗಿ ಸಚಿವ ಶ್ರೀರಾಮುಲು ಮುಜುಗರಕ್ಕೀಡಾಗಿದ್ದಾರೆ. ಶ್ರದ್ಧಾಂಜಲಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವಾಗ ಸಚಿವ ಶ್ರೀರಾಮುಲು ಫೇಸ್‌ಬುಕ್‌ನಲ್ಲಿ ಕೃಷ್ಣ ಭಟ್ ಅವರ ಪೋಟೊ ಬದಲಿಗೆ ಮೇಲುಕೋಟೆಯ ರಾಮಸ್ವಾಮಿ ಅಯ್ಯಂಗಾರ್ ಅವರ ಚಿತ್ರ ಬಳಸಿ ಆತ್ಮಕ್ಕೆ ಶಾಂತಿ ಕೋರಿದ್ದರು. ಈ ಕುರಿತು ಮೇಲುಕೋಟೆಯ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಚ್ಚೆತ್ತ ಸಚಿವ ಶ್ರೀರಾಮುಲರ ಮೇಲುಕೋಟೆ ರಾಮಸ್ವಾಮಿ ಅಯ್ಯಂಗಾರ್ರ ಚಿತ್ರ ಬಳಸಿದ್ದ ಪೋಸ್ಟ್ ಡಿಲೀಟ್ ಮಾಡಿ, ಹೊಸದಾಗಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ರಾಮಸ್ವಾಮಿ ಅಯ್ಯಂಗಾರ್ ಅವರು ಕಳೆದ ಹಲವು ವರ್ಷಗಳಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇಗುಲದಲ್ಲಿ ಸೇವೆ ನೆರವೇರಿಸುತ್ತಿದ್ದಾರೆ. ಹಂಪಿಯ ಕೃಷ್ಣ ಭಟ್ರ ಚಿತ್ರದ ಬದಲಿಗೆ ರಾಮಸ್ವಾಮಿ ಅಯ್ಯಂಗಾರ್ರ ಚಿತ್ರ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸಚಿವ ಶ್ರೀರಾಮುಲು ಮುಜುಗರಕ್ಕೆ ಈಡಾಗಿದ್ದಾರೆ.
ಮೇಲುಕೋಟೆಯ ಫ್ಯಾಂಟಮ್ ರಾಮಸ್ವಾಮಿ ಅಯ್ಯಂಗಾರ್ ರಾಮಸ್ವಾಮಿ ಅಯ್ಯಂಗಾರ್ ಅವರು ಮೇಲುಕೋಟೆಯಲ್ಲಿ ಫ್ಯಾಂಟಮ್ ಎಂದರೆ ಜನಜನಿತರು. 76 ವರ್ಷದ ಅವರು ಪ್ರತಿದಿನ ಯೋಗನರಸಿಂಹಸ್ವಾಮಿ ಬೆಟ್ಟದ ಕೆಳಭಾಗದಲ್ಲಿರುವ ನರಸಿಂಹ ಹೊಂಡದಿಂದ ಪೂಜೆಗೆ ಅಗತ್ಯವಿರುವ ನೀರನ್ನು ಕೊಂಡೊಯ್ಯುತ್ತಾರೆ. ಹೀಗೆ ಅವರು ನೀರನ್ನು ಹೊತ್ತು ಸುಮಾರು 255 ಮೆಟ್ಟಿಲು ಹತ್ತುತ್ತಾರೆ.
ಈ ಕಾಯಕವನ್ನು ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ರಾಮಸ್ವಾಮಿ ಅಯ್ಯಂಗಾರ್ರನ್ನು ಮೇಲುಕೋಟೆಯ ಬಾಹುಬಲಿ, ಮೇಲುಕೋಟೆಯ ಫ್ಯಾಂಟಮ್, ಚಿರಂಜೀವಿ ಎಂದೂ ಹೆಮ್ಮೆ ಮತ್ತು ಪ್ರೀತಿಯಿಂದ ಕರೆಯುತ್ತಾರೆ. ಕಾಳಮೇಗಂ ಮನೆತನದ ರಾಮಸ್ವಾಮಿ ಅಯ್ಯಂಗಾರ್ರು ಇವರೆಗೆ ಆಸ್ಪತ್ರೆಯ ಮೆಟ್ಟಿಲು ಹತ್ತಿಯೇ ಇಲ್ಲ. ಬೆಳಗ್ಗೆ ತಣ್ಣೀರು ಸ್ನಾನ, ಒಂದೊತ್ತಿನ ಊಟ ಮತ್ತು ಯೋಗನರಸಿಂಹಸ್ವಾಮಿ ದೇಗುಲದ ಸೆವೆಯಷ್ಟೇ ಅವರ ಕಾಯಕವಾಗಿದೆ ಎಂದು ಧಾರ್ಮಿಕ ಚಿಂತಕ ಶೆಲ್ವಪಿಳ್ಳೆ ಅಯ್ಯಂಗಾರ್ ಟಿವಿ9 ಡಿಜಿಟಲ್ಗೆ ತಿಳಿಸಿದರು.
ಹಂಪಿಯ ಬಡವಿ ಲಿಂಗದ ಪೂಜೆ ಮಾಡುತ್ತಿದ್ದ ಕೃಷ್ಣ ಭಟ್ಟರ ಬಗ್ಗೆ ನಾಡಿನಲ್ಲಿ ಅಪಾರ ಗೌರವ ಮತ್ತು ಪ್ರೀತಿಯಿದೆ. 1995ರಲ್ಲಿ ದೈನಂದಿನ ನೈವೇದ್ಯಕ್ಕೆಂದು 2-3 ತಿಂಗಳಿಗೆ 30 ಕೆಜಿ ಅಕ್ಕಿ ಮತ್ತು ತಿಂಗಳಿಗೆ 300ರೂ ಸಂಭಾವನೆಯೊಂದಿಗೆ ಕೃಷ್ಣ ಭಟ್ಟರು ನಿಯುಕ್ತರಾಗಿದ್ದರು ಎಂಬ ಮಾಹಿತಿಯಿದೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕಾಸರವಳ್ಳಿ ಎಂಬ ಗ್ರಾಮದವರಾದ ಇವರು 1978ರಲ್ಲಿ ಮಲೆನಾಡಿನಿಂದ ಬಿಸಿಲು ನಾಡಿಗೆ ಬಂದು ಕೆಲಕಾಲ ವಿರೂಪಾಕ್ಷ ದೇವರ ಅರ್ಚಕರೂ ಆಗಿದ್ದರು.
ಇದನ್ನೂ ಓದಿ: ಹಂಪಿಯ ಬಡವಿಲಿಂಗ ಅರ್ಚಕ ಕೆ.ಎನ್.ಕೃಷ್ಣ ಭಟ್ ಇನ್ನಿಲ್ಲ
ಕೊಪ್ಪಳದ ಕಿಷ್ಕಿಂದೆಯೇ ಹನುಮ ಹುಟ್ಟಿದ ಸ್ಥಳ; ಇಲ್ಲಿವೆ ಖಚಿತ ದಾಖಲೆಗಳು
(Karnataka Minister B Srimalu posts Melkote Ramaswamy Iyengar photo instead of Hampi Badavailinga KN Krishna Bhat to make Condolences)