ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ 75ರಷ್ಟು ಬೆಡ್ ನೀಡಲು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಸರ್ಕಾರ ಆದೇಶ

ಇದರಿಂದ 71,400 ಬೆಡ್‌ಗಳು ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಷ್ಟಾಚಾರದಂತೆ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಸಚಿವರು ಹೇಳಿದರು.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ 75ರಷ್ಟು ಬೆಡ್ ನೀಡಲು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಸರ್ಕಾರ ಆದೇಶ
ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ

|

Apr 25, 2021 | 4:32 PM


ಬೆಂಗಳೂರು: ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಶೇ 75ರಷ್ಟು ಬೆಡ್​ಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ನೀಡಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಮಾಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಇದರಿಂದ 71,400 ಬೆಡ್‌ಗಳು ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಷ್ಟಾಚಾರದಂತೆ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಸಚಿವರು ಹೇಳಿದರು.

ಸಚಿವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರನ್ನು ಭೇಟಿಯಾದ ಸೋಂಕಿರೊಬ್ಬರ ಸಂಬಂಧಿಕರು, ’ನಿನ್ನೆ ರಾತ್ರಿ ಚೆನ್ನಾಗಿದ್ದವರು ಈಗ ತೀರಿಕೊಂಡಿದ್ದಾರೆ’ ಎಂದು ಅಳಲು ತೋಡಿಕೊಂಡರು. ‘ಹೋಗೋರನ್ನು ಹಿಡಿದುಕೊಳ್ಳಲು ಆಗಲ್ಲ’ ಎಂದು ಸಚಿವರು ಸಾಂತ್ವನ ಹೆಳಿದರು.

ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆಯೇ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಸೋಂಕಿತರು ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರಕ್ಕೆ ಚಿಕಿತ್ಸೆ ಕೊಡುವುದು ಹೇಗೆಂಬ ಗೊಂದಲ ಎದುರಾಗಿದೆ. ರಾಜ್ಯ ಸರ್ಕಾರದ ಸೂಚನೆಗೆ ಇಲ್ಲ ಎಂದು ಹೇಳುವ ಖಾಸಗಿ ಆಸ್ಪತ್ರೆಗಳು ಇಲ್ಲ. ಆದರೆ ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಮುಂದಿಡುತ್ತಿವೆ. ಇನ್ನೊಂದು ವಾರದಲ್ಲಿ ಸೂಕ್ತ ವ್ಯವಸ್ಥೆ ಆಗದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

300 ಟನ್ ಆಮ್ಲಜನಕ ಲಭ್ಯ: ಸುಧಾಕರ್
ರಾಜ್ಯದಲ್ಲಿ ಸದ್ಯ 300 ಟನ್ ಆಕ್ಸಿಜನ್ ಲಭ್ಯವಿದೆ. ಕೇಂದ್ರ ಸರ್ಕಾರ ನಿನ್ನೆ (ಏಪ್ರಿಲ್ 24) 800 ಟನ್ ಆಕ್ಸಿಜನ್ ರವಾನಿಸಿದೆ. ಕೇಂದ್ರದಿಂದ 1.22 ಲಕ್ಷ ವಯಲ್ ರೆಮ್‌ಡಿಸಿವಿರ್ ಔಷಧಿ ರಾಜ್ಯಕ್ಕೆ ಬಂದಿದೆ. ಇನ್ನು ಮುಂದೆ ರಾಜ್ಯದಲ್ಲಿ ಆಕ್ಸಿಜನ್, ಔಷಧಗಳ ಕೊರತೆ ಆಗುವುದಿಲ್ಲ. ಮನೆಯಲ್ಲಿ ಐಸೋಲೇಷನ್ ಆಗುವವರಿಗೆ ಹೆಲ್ಪ್ ಡೆಸ್ಕ್ ಸೌಕರ್ಯ ಕಲ್ಪಿಸಲಾಗಿದೆ. ಚಿಕಿತ್ಸೆ ಪಡೆಯುವ ವಿಧಾನದ ಬಗ್ಗೆ ಟೆಲಿ ಕಾಲಿಂಗ್ ವ್ಯವಸ್ಥೆ ಮೂಲಕ ಮಾಹಿತಿ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಈ ವ್ಯವಸ್ಥೆಯೂ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದ್ದಾರೆ.

(Karnataka govt orders private hospitals to reserve 75 percent bad for coronavirus treatment)

ಇದನ್ನೂ ಓದಿ: ಕೊರೊನಾ ಲಕ್ಷಣ ಇಲ್ಲದವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಡಿ, ದಾಖಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ; ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ

ಇದನ್ನೂ ಓದಿ: ಆಕ್ಸಿಜನ್​, ರೆಮ್​​ಡೆಸಿವರ್​ ಉತ್ಪಾದನೆ ಹೆಚ್ಚಿಸಲಾಗ್ತಿದೆ ಮತ್ತು ಆಮದು ಮಾಡಿಕೊಳ್ಳಲಾಗ್ತಿದೆ ಎಂದು ಮೋದಿ ಹೇಳಿದ್ದಾರೆ: ಡಾ.ಕೆ.ಸುಧಾಕರ್


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada