AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಕ್ಷಣ ಇಲ್ಲದವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಡಿ, ದಾಖಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ; ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ

ರೂಪಾಂತರಿ ಕೊರೊನಾ ವೈರಸ್ ವೈದ್ಯಕೀಯ ವಿಭಾಗಕ್ಕೆ ದಾರಿ ತಪ್ಪಿಸುತ್ತಿದೆ. ಬೇರೆ ದೇಶದ ರೂಪಾಂತರಿ ವೈರಸ್ ಇಲ್ಲಿ ಪತ್ತೆಯಾಗಿಲ್ಲ. ಇದರ ಗುಣಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಎರಡನೇ ಅಲೆ ಸೋಂಕಿತರ ಪ್ರಮಾಣ ಹೆಚ್ಚಿದ್ದರೂ, ಸಾವಿನ ಪ್ರಮಾಣ ಕಡಿಮೆ ಇದೆ. ಸರ್ಕಾರ ಬಿಗಿಯಾದ ಮಾರ್ಗಸೂಚಿ ಮಾಡಿದೆ.

ಕೊರೊನಾ ಲಕ್ಷಣ ಇಲ್ಲದವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಡಿ, ದಾಖಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ; ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ
sandhya thejappa
|

Updated on: Apr 24, 2021 | 2:45 PM

Share

ಬೆಂಗಳೂರು: ಕೊರೊನಾ ಸೋಂಕು ನಮ್ಮ ಜೊತೆಯಲ್ಲಿ ಚೆಸ್ ರೀತಿಯಲ್ಲಿ ಆಡುತ್ತಿದೆ ಅಂತಾ ಏಮ್ಸ್ ನಿರ್ದೇಶಕರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮೊದಲ ಅಲೆಯಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ಈಗ ಇದ್ದಷ್ಟು ಆಕ್ಸಿಜನ್ ಬೇಡಿಕೆ ಆಗ ಇರಲಿಲ್ಲ. ಈಗಾಗಲೇ ನಾವು 500 ಟನ್ ಆಕ್ಸಿಜನ್ ಬಳಸಿದ್ದೇವೆ. ಮೇ ತಿಂಗಳಲ್ಲಿ 1,414 ಟನ್ ಆಕ್ಸಿಜನ್ ಬೇಕಾಗುತ್ತದೆ. 1,414 ಟನ್ ಆಕ್ಸಿಜನ್ ಪೂರೈಕೆಗೆ ಮನವಿ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ವೇಳೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ ಎಂದು ತಿಳಿಸಿದ ಸಚಿವ ಸುಧಾಕರ್ ಬೆಂಗಳೂರಿನಲ್ಲಿ ಎರಡು ಸಾವಿರ ಐಸಿಯು, ವೆಂಟಿಲೇಟರ್ ಬೇಕು. ಹೆಚ್ಚುವರಿಯಾಗಿ 2 ಸಾವಿರ ಐಸಿಯು, ವೆಂಟಿಲೇಟರ್​ಗಳು ಬೇಕು ಎಂದಿದ್ದಾರೆ.

ನಂತರ ಮಾತನಾಡಿದ ಅವರು ರೂಪಾಂತರಿ ಕೊರೊನಾ ವೈರಸ್ ವೈದ್ಯಕೀಯ ವಿಭಾಗಕ್ಕೆ ದಾರಿ ತಪ್ಪಿಸುತ್ತಿದೆ. ಬೇರೆ ದೇಶದ ರೂಪಾಂತರಿ ವೈರಸ್ ಇಲ್ಲಿ ಪತ್ತೆಯಾಗಿಲ್ಲ. ಇದರ ಗುಣಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಎರಡನೇ ಅಲೆ ಸೋಂಕಿತರ ಪ್ರಮಾಣ ಹೆಚ್ಚಿದ್ದರೂ, ಸಾವಿನ ಪ್ರಮಾಣ ಕಡಿಮೆ ಇದೆ. ಸರ್ಕಾರ ಬಿಗಿಯಾದ ಮಾರ್ಗಸೂಚಿ ಮಾಡಿದೆ. ಅನಗತ್ಯ ಮನೆಯಿಂದ ಹೊರಗಡೆ ಬರುವುದು, ಗುಂಪು ಸೇರುವುದನ್ನು ತಪ್ಪಿಸಬೇಕು. ಲಸಿಕೆಗಳನ್ನು ಮೊದಲು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ 2 ಸಾವಿರ ಬೆಡ್ಗಳ ಮೇಕ್ ಶಿಪ್ಟ್ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೇಕ್ ಶಿಪ್ಟ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುತ್ತದೆ. ಇವೆಲ್ಲವೂ 15 ದಿನಗಳಲ್ಲಿ ನಿರ್ಮಾಣಮಾಡಬೇಕಿದೆ. ಕೊರೊನಾ ವಿಚಾರ ನಮಗೆ ಸವಾಲಾಗಿದೆ. ಬೇರೆ ರಾಜ್ಯಗಳಲ್ಲಿ ಸಹಾ ಆಕ್ಸಿಜನ್ ಕೊರತೆ ಇದೆ. ನಮ್ಮ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್ ಲಕ್ಷಣ ಇಲ್ಲದವರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಡಿ. ಸರ್ಕಾರ ಹಣ ಕೊಡುತ್ತದೆ ಎಂದು ಆಸ್ಪತ್ರೆಗೆ ದಾಖಲಿಸಿದರೆ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಸೋಮವಾರದ ನಂತರವೂ ಟಫ್ ರೂಲ್ಸ್ ಜಾರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸಚಿವ ಸಂಪುಟ ಸಭೆ ಕೈಗೊಳ್ಳುವ ತೀರ್ಮಾನವೇ ಅಂತಿಮ. ಸಚಿವರು ಅವರವರ ಸಲಹೆ, ಅಭಿಪ್ರಾಯಗಳನ್ನು ಹೇಳುತ್ತಾರೆ. ಆರೋಗ್ಯ ಇಲಾಖೆಯಿಂದಲೂ ಸಲಹೆಗಳನ್ನು ಕೊಡುತ್ತೇವೆ. ಅಂತಿಮವಾಗಿ ಸಿಎಂ ಯಡಿಯೂರಪ್ಪ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

Coronavirus Case Updates: ದೇಶದಲ್ಲಿ 24 ಗಂಟೆಯಲ್ಲಿ 2,624 ಮಂದಿ ಕೊರೊನಾದಿಂದ ಸಾವು; 3.46 ಲಕ್ಷ ಹೊಸ ಕೇಸ್​​ಗಳು

83 ವರ್ಷದ ಅಜ್ಜನನ್ನು ಮನೆಗೆ ತಲುಪಿಸಿದ ಮಹಿಳಾ ASI ಉಮೇರಾ ಭಾನು ಮಾನವೀಯತೆ‌

Covid 19 Coronavirus Dr k Sudhakar Karnataka Government