Coronavirus Case Updates: ದೇಶದಲ್ಲಿ 24 ಗಂಟೆಯಲ್ಲಿ 2,624 ಮಂದಿ ಕೊರೊನಾದಿಂದ ಸಾವು; 3.46 ಲಕ್ಷ ಹೊಸ ಕೇಸ್ಗಳು
ಕಳೆದ 24ಗಂಟೆಯಲ್ಲಿ 2,19,838 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ದೇಶದಲ್ಲಿ 25,52,940 ಕೊರೊನಾ ಕೇಸ್ಗಳಿವೆ.
ದೇಶದಲ್ಲಿ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆ ಸಿಕ್ಕಾಪಟೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಸಾವಿನ ಸಂಖ್ಯೆಯಲ್ಲೂ ಆತಂಕ ಹುಟ್ಟಿಸುವಷ್ಟು ಏರಿಕೆಯಾಗುತ್ತಿದೆ. ಶನಿವಾರ ಒಂದೇ ದಿನ ಬರೋಬ್ಬರಿ of 3,46,786 ಹೊಸ ಕೊವಿಡ್ 19 ಕೇಸ್ಗಳು ದಾಖಲಾಗಿವೆ. ಹಾಗೇ, 24 ಗಂಟೆಯಲ್ಲಿ 2,624 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ದೇಶದ ಒಟ್ಟು ಸೋಂಕಿತರ ಸಂಖ್ಯೆ 1.66 ಕೋಟಿಗೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,89,544ಕ್ಕೆ ತಲುಪಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮಹರಾಷ್ಟ್ರ ಮುಂದಿದ್ದು, ಕೇರಳ, ದೆಹಲಿ, ಕರ್ನಾಟಕ, ಉತ್ತರಪ್ರದೇಶಗಳಲ್ಲಿ ಸೋಂಕು ಮಿತಿಮೀರುತ್ತಿದೆ.
ಕಳೆದ 24ಗಂಟೆಯಲ್ಲಿ 2,19,838 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ದೇಶದಲ್ಲಿ 25,52,940 ಕೊರೊನಾ ಕೇಸ್ಗಳಿವೆ. ಕಳೆದ 24ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 66,836 ಕೇಸ್ಗಳು, ಉತ್ತರಪ್ರದೇಶದಲ್ಲಿ 36,605, ಕೇರಳದಲ್ಲಿ 28,447, ಕರ್ನಾಟಕದಲ್ಲಿ 26,962, ದೆಹಲಿಯಲ್ಲಿ 24,331 ಕೇಸ್ಗಳು ದಾಖಲಾಗಿವೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವಲ್ಲಿ ಈ ಐದು ರಾಷ್ಟ್ರಗಳ ಪಾಲು ಶೇ.52.82ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆ ಬೆಂಗಳೂರು ನಗರ
83 ವರ್ಷದ ಅಜ್ಜನನ್ನು ಮನೆಗೆ ತಲುಪಿಸಿದ ಮಹಿಳಾ ASI ಉಮೇರಾ ಭಾನು ಮಾನವೀಯತೆ
ಉತ್ತರಾಖಂಡ್ನಲ್ಲಿ ಮತ್ತೆ ಹಿಮಕುಸಿತ; 8 ಮಂದಿ ಸಾವು, ನೆರವಿಗೆ ಧಾವಿಸಿದ ಭಾರತೀಯ ಸೇನೆ
Published On - 2:02 pm, Sat, 24 April 21