AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ್​ನಲ್ಲಿ ಮತ್ತೆ ಹಿಮಕುಸಿತ; 8 ಮಂದಿ ಸಾವು, ನೆರವಿಗೆ ಧಾವಿಸಿದ ಭಾರತೀಯ ಸೇನೆ

ಉತ್ತರಾಖಂಡ ಸಿಎಂ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ಹಾಗೇ, ಗೃಹ ಸಚಿವರು ಕರೆ ಮಾಡಿ ಸ್ಥಳದ ಪರಿಸ್ಥಿತಿ ಬಗ್ಗೆ ವರದಿ ಪಡೆದಿದ್ದಾರೆ.

ಉತ್ತರಾಖಂಡ್​ನಲ್ಲಿ ಮತ್ತೆ ಹಿಮಕುಸಿತ; 8 ಮಂದಿ ಸಾವು, ನೆರವಿಗೆ ಧಾವಿಸಿದ ಭಾರತೀಯ ಸೇನೆ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Apr 24, 2021 | 1:21 PM

Share

ಹಿಮಪಾತಕ್ಕೆ ಉತ್ತರಾಖಂಡ ಮತ್ತೊಮ್ಮೆ ನಲುಗಿದೆ. ಚಮೋಲಿ ಜಿಲ್ಲೆಯ ಇಂಡೋ -ಚೀನಾ ಗಡಿ ಶುಕ್ರವಾರ ಹಿಮಪಾತವಾಗಿ 8 ಮಂದಿ ಮೃತಪಟ್ಟಿದ್ದಾರೆ. ಸುಮ್ನಾದಲ್ಲಿ ಹಿಮನದಿ ಕುಸಿತದಿಂದ ಈ ಅವಘಡ ಸಂಭವಿಸಿದೆ. ಹೀಗೆ ಹಿಮಕುಸಿತ ಉಂಟಾದ ಸ್ಥಳದಲ್ಲಿ ಸುಮ್ನಾ-ರಿಮ್​ಕಿಮ್​ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಹಲವು ಕಾರ್ಮಿಕರು ಈ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಹಿಮಕುಸಿತವಾದ ಕೂಡಲೇ ಸ್ಥಳಕ್ಕೆ ಧಾವಿಸಿ, ಕಾರ್ಯಪ್ರವೃತ್ತರಾದ ಭಾರತೀಯ ಸೇನೆ ಸೈನಿಕರು ಸುಮಾರು 430 ಜನರನ್ನು ರಕ್ಷಿಸಿದೆ. ಈ ವೇಳೆ 8 ಮೃತದೇಹಗಳು ಸಿಕ್ಕಿವೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆರ್ಮಿ ಕ್ಯಾಂಪ್​​ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜೋಶಿಮಠ್​ದ ಗಡಿ ಮಾರ್ಗ ತಂಡಗಳು ಭಪ್ಕುಂಡ್​ದಿಂದ ಸುಮ್ನಾವರೆಗೆ ಸ್ಥಳ ತೆರವುಕಾರ್ಯ ನಡೆಸುತ್ತಿದ್ದು, ಅದಿನ್ನೂ ಮುಗಿದಿಲ್ಲ. ಕಳೆದ ನಾಲ್ಕೈದು ದಿನಗಳಿಂದಲೂ ಇಲ್ಲಿ ಸಿಕ್ಕಾಪಟೆ ಮಳೆ, ಸಣ್ಣಪ್ರಮಾಣದ ಹಿಮಪಾತ ಆಗುತ್ತಲೇ ಇತ್ತು. ನಿನ್ನೆ ದೊಡ್ಡಪ್ರಮಾಣದಲ್ಲಿ ಹಿಮನದಿ ಕುಸಿದು 8 ಜನರನ್ನು ಬಲಿಪಡೆದಿದೆ. ಗೃಹಸಚಿವರರಿಂದ ನೆರವಿನ ಭರವಸೆ

ಉತ್ತರಾಖಂಡ ಸಿಎಂ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ಹಾಗೇ, ಗೃಹ ಸಚಿವರು ಕರೆ ಮಾಡಿ ಸ್ಥಳದ ಪರಿಸ್ಥಿತಿ ಬಗ್ಗೆ ವರದಿ ಪಡೆದಿದ್ದಾರೆ. ಎಲ್ಲ ರೀತಿಯ ಸಹಾಯ ಮಾಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಹಿಮಪಾತ, ಹಿಮಕುಸಿತ ಹೊಸದಲ್ಲ. ಫೆಬ್ರವರಿಯಲ್ಲೂ ಸಹ ಭೀಕರವಾದ ಹಿಮನದಿ ಕುಸಿತವಾಗಿ, 136 ಮಂದಿ ಮೃತಪಟ್ಟಿದ್ದರು. ಆಗಲೂ ಸಹ ಇದೇ ಚಮೋಲಿ ಜಿಲ್ಲೆಯಲ್ಲೇ ಅವಘಡ ಸಂಭವಿಸಿತ್ತು.

ಇದನ್ನೂ ಓದಿ: Uttarakhand Glacier Burst ಸಂಕಷ್ಟದಲ್ಲಿರುವ ಉತ್ತರಾಖಂಡ್​ ಜನರಿಗೆ ಯಾವುದೇ ಸಹಾಯ ಮಾಡಲು ಸಿದ್ಧ: ದೆಹಲಿ ಸಿಎಂ ಟ್ವೀಟ್​

ಮಧ್ಯ ಪ್ರದೇಶದ ಕಾಂಗ್ರೆಸ್​ ಶಾಸಕಿ, ಉತ್ತರ ಪ್ರದೇಶದ ಇಬ್ಬರು ಬಿಜೆಪಿ ಶಾಸಕರು ಕೊರೊನಾ ಸೋಂಕಿಗೆ ಬಲಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ