ಹಸಿದ ಹೊಟ್ಟೆಗೆ ಅನ್ನ ನೀಡಿದ ಉಡುಪಿ ಮಹಿಳೆ; ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಮೆಚ್ಚುಗೆಯ ಮಹಾಪೂರ
ಮುಸ್ಲಿಂ ಮಹಿಳೆಯೊಬ್ಬರು ಮನೆಯಲ್ಲಿ ಅಡುಗೆ ತಯಾರಿಸಿ ಉಡುಪಿ ನಗರ ಭಾಗದಲ್ಲಿ ಹಸಿವಿನಿಂದ ಇದ್ದವರಿಗೆ ಊಟ ನೀಡಿದ್ದಾರೆ. ಸದ್ದಿಲ್ಲದೆ ತನ್ನ ಪತಿಯೊಂದಿಗೆ ಬಂದು ಊಟ ನೀಡುವ ಇವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಉಡುಪಿ: ವೀಕೆಂಡ್ ಕರ್ಫ್ಯೂ ಅಂತ ಎಲ್ಲರೂ ಬೆಚ್ಚಗೆ ಮನೆಯಲ್ಲಿದ್ದಾರೆ. ಹೊರಗೆ ಹೋಗಿ ಕೊರೊನಾ ತಗುಲಿದರೆ ಯಾರು ಗತಿ ಅಂತ ಸುಮ್ಮನ್ನೆ ಅವರವರ ಮನೆಯಲ್ಲಿ ಇದ್ದಾರೆ. ಆದರೂ ಕೆಲವರು ಯಾವುದಕ್ಕೂ ಕ್ಯಾರೆ ಎನ್ನದೆ ಹೊರಗೆ ಹೋಗುತ್ತಿದ್ದಾರೆ. ಅಂತವರಿಗೆ ಪೊಲೀಸರು ಲಾಠಿ ರುಚಿ ನೀಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲೊಂದು ಮಹಿಳೆ ಮನೆಯಿಂದ ಹೊರ ಬಂದು ಎಲ್ಲರ ಮೆಚ್ಚುಗೆಯ ಕೆಲಸವನ್ನು ಮಾಡಿದ್ದಾರೆ.
ಮುಸ್ಲಿಂ ಮಹಿಳೆಯೊಬ್ಬರು ಮನೆಯಲ್ಲಿ ಅಡುಗೆ ತಯಾರಿಸಿ ಉಡುಪಿ ನಗರ ಭಾಗದಲ್ಲಿ ಹಸಿವಿನಿಂದ ಇದ್ದವರಿಗೆ ಊಟ ನೀಡಿದ್ದಾರೆ. ಸದ್ದಿಲ್ಲದೆ ತನ್ನ ಪತಿಯೊಂದಿಗೆ ಬಂದು ಊಟ ನೀಡುವ ಇವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕೊರೊನಾ ಸೋಂಕು ಪ್ರಕರಣ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ವಿಧಿಸಿದೆ. ಆದರೆ ಕಾರ್ಮಿಕರಿಗೆ ಮಾತ್ರ ಸರಿಯಾದ ಊಟದ ವ್ಯವಸ್ಥೆ ದೊರಕಿಲ್ಲ. ಹೊಟೇಲ್, ಡಾಬ ಅವಲಂಬಿತ ಕಾರ್ಮಿಕರಿಗೆ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಬೆಳಿಗ್ಗೆ ಪೂರ್ತಿ ಉಪವಾಸವಿದ್ದು, ದಣಿದಿದ್ದರೂ ಅದನ್ನು ಲೆಕ್ಕಿಸದೆ ಮಹಿಳೆ ನಿಸ್ವಾರ್ಥವಾಗಿ ಊಟ ತಯಾರಿಸಿ ತಂದು ಹಂಚಿರುವುದು ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ. ಮಹಿಳೆಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ
ಬಳ್ಳಾರಿಯಲ್ಲಿ ಬಾಣಂತಿಗೆ ನೆರವು ನೀಡಿದ ಎಎಸ್ಐ; ವೀಕೆಂಡ್ ಕರ್ಫ್ಯೂ ನಡುವೆ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಆಧಿಕಾರಿ
ಕೊರೊನಾ ಕಠಿಣ ನಿಯಮ ನಡುವೆ ಉಡುಪಿಯಲ್ಲಿ ನಡೆಯಿತು 354 ಸರಳ ಮದುವೆ
(workers was given a meal by woman and praised the woman for her work on social media)