AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ನಿಯಮಾನುಸಾರ ಕಟೀಲಿನಲ್ಲಿ ಹಸೆಮಣೆ ಏರಿದ 47 ಜೋಡಿ; ಹಾಸನದಲ್ಲಿ ಮಾಸ್ಕ್ ಧರಿಸದ ಮದುಮಗಳಿಗೆ 100 ರೂ. ದಂಡ

Weekend Curfew: ದೇವಳದ ಸರಸ್ವತಿ ಸದನ, ಮಹಾಲಕ್ಷ್ಮಿ ಸದನ, ಅನ್ನಛತ್ರದಲ್ಲಿ ಮದುವೆ ನಡೆದಿದ್ದು ಈ ಮುನ್ನವೇ 90 ಜೋಡಿಗಳು ಮದುವೆಯಾಗಲು ನೋಂದಣಿ ಮಾಡಿಕೊಂಡಿದ್ದರು. ಇಂದು ಕೊವಿಡ್ ನಿಯಮಾನುಸಾರ 47 ಜೋಡಿಗಳ ಮದುವೆ ನೆರವೇರಿತು.

ಕೊವಿಡ್ ನಿಯಮಾನುಸಾರ ಕಟೀಲಿನಲ್ಲಿ ಹಸೆಮಣೆ ಏರಿದ 47 ಜೋಡಿ; ಹಾಸನದಲ್ಲಿ ಮಾಸ್ಕ್ ಧರಿಸದ ಮದುಮಗಳಿಗೆ 100 ರೂ. ದಂಡ
ಮದುವೆಯ ಒಂದು ದೃಶ್ಯ
guruganesh bhat
|

Updated on: Apr 25, 2021 | 5:31 PM

Share

ಮಂಗಳೂರು: ವಾರಾಂತ್ಯದ ಕರ್ಫ್ಯೂವಿನ ಮಧ್ಯೆಯೇ ರಾಜ್ಯದ ವಿವಿಧೆಡೆ ಮದುವೆ ಸಮಾರಂಭಗಳು ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಟೀಲು ದುರ್ಗಾಪರಮೇಶ್ವರಿ ದೇಗುಲದಲ್ಲಿ ಜರುಗಿದ ಸರಳ ವಿವಾಹ ಕಾರ್ಯಕ್ರಮದಲ್ಲಿ 47 ಜೋಡಿ ಕೊವಿಡ್ ನಿಯಮವನ್ನು ಪಾಲಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಂದು ಮದುವೆಗೆ ಅರ್ಚಕರು, ಫೊಟೋಗ್ರಾಫರ್ ಸೇರಿ 10 ಜನರಿಗೆ ಅವಕಾಶ ಒದಗಿಸಲಾಗಿತ್ತು. ದೇವಳದ ಸರಸ್ವತಿ ಸದನ, ಮಹಾಲಕ್ಷ್ಮಿ ಸದನ, ಅನ್ನಛತ್ರದಲ್ಲಿ ಮದುವೆ ನಡೆದಿದ್ದು ಈ ಮುನ್ನವೇ 90 ಜೋಡಿ ಮದುವೆಯಾಗಲು ನೋಂದಣಿ ಮಾಡಿಕೊಂಡಿದ್ದರು. ಇಂದು ಕೊವಿಡ್ ನಿಯಮಾನುಸಾರ 47 ಜೋಡಿಯ ಮದುವೆ ನೆರವೇರಿತು.

ಮಾಸ್ಕ್‌ ಧರಿಸದ‌ ಮದುಮಗಳಿಗೆ ದಂಡ ಇತ್ತ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದ ಮದುವೆಯೊಂದರಲ್ಲಿ ಮದುವೆ ಮುಗಿಸಿ ಹೊರಡುವ ವೇಳೆ ಮದುಮಗಳು ಮಾಸ್ಕ್ ಹಾಕಿರಲಿಲ್ಲ. ಈ ವೇಳೆ‌ ಸ್ಥಳಕ್ಕೆ ಆಗಮಿಸಿದ ಅರಕಲಗೂಡು ತಹಶೀಲ್ದಾರ್ ರೇಣುಕುಮಾರ್ ಮಾಸ್ಕ್ ಧರಿಸಿರದ ವಧುವಿಗೆ ನೂರು ರೂಪಾಯಿ ದಂಡ ವಿಧಿಸಿ ರಶೀದಿ ನೀಡಿದರು.

ಮದುವೆಗೆ ಸೇರಿದ 300 ಜನ ಬಾಗಲಕೋಟೆ ಜಿಲ್ಲೆ ಮುಚಖಂಡಿ ತಾಂಡಾ 1ರಲ್ಲಿ ಕೊವಿಡ್ ನಿಯಮಾವಳಿ ಉಲ್ಲಂಘಿಸಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು. ಮದುವೆಗೆ 300ಕ್ಕೂ ಹೆಚ್ಚು ಜನರು ಸೇರಿದ್ದರು. ಈ ವೇಳೆ ಬಾಗಲಕೋಟೆ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ದಾಳಿ ನಡೆಸಿ ವೇದಿಕೆ ಕಾರ್ಯಕ್ರಮ ರದ್ದುಗೊಳಿಸಿ ಟೆಂಟ್ ಖಾಲಿ ಮಾಡಿಸಿದರು. ಕೊರೊನಾ ನಿಯಮ ಉಲ್ಲಂಘಿಸಿ ಮದುವೆ ನಡೆಸಿದ್ದಕ್ಕಾಗಿ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

(47 couple married during weekend curfew in Kateel Durgaparameshwari follow Covid guidelines)