Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
ಕೋವಿಡ್-19ರ ಚಿಕಿತ್ಸೆ, ಮನೆಯಲ್ಲಿ ವಹಿಸಬೇಕಾದ ಎಚ್ಚರ ಸೇರಿದಂತೆ ಹಲವು ಅತ್ಯಗತ್ಯ ಮಾಹಿತಿ ಇದರಲ್ಲಿದೆ. ಏಮ್ಸ್ ಪ್ರಕಟಿಸಿರುವ ಈ ಪುಸ್ತಕದ ಸಂಕ್ಷಿಪ್ತ ಮತ್ತು ಸರಳ ಅನುವಾದದ ಮೊದಲ ಕಂತು ಇಲ್ಲಿದೆ.
ಕೊರೊನಾ ಸೋಂಕು ದೃಢಪಟ್ಟ ನಂತರ ಏನು ಮಾಡಬೇಕೆಂದು ತೋಚದೇ ಗಾಬರಿ ಆಗುವವರೇ ಹೆಚ್ಚು. ಇಂಥವರಿಗೆ ನೆರವಾಗಲೆಂದೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (All India Institute of Medical Sciences – AIIMS) ಪಾಟ್ನಾ ಘಟಕ ಮಹತ್ವದ ಮಾಹಿತಿಗಳುಳ್ಳ ಕೈಪಿಡಿಯೊಂದನ್ನು ಹೊರತಂದಿದೆ. ಕೋವಿಡ್-19ರ ಚಿಕಿತ್ಸೆ, ಮನೆಯಲ್ಲಿ ವಹಿಸಬೇಕಾದ ಎಚ್ಚರ ಸೇರಿದಂತೆ ಹಲವು ಅತ್ಯಗತ್ಯ ಮಾಹಿತಿ ಇದರಲ್ಲಿದೆ. ಏಮ್ಸ್ ಪ್ರಕಟಿಸಿರುವ ಈ ಪುಸ್ತಕದ ಸಂಕ್ಷಿಪ್ತ ಮತ್ತು ಸರಳ ಅನುವಾದದ ಮೊದಲ ಕಂತು ಇಲ್ಲಿದೆ. ಏಮ್ಸ್ನ ವೈದ್ಯರು ಮತ್ತು ಆಡಳಿತಾಧಿಕಾರಿಗಳಾದ ಡಾ.ಲೋಕೇಶ್ ತಿವಾರಿ, ಡಾ.ಸಿ.ಎಂ.ಸಿಂಗ್, ಡಾ.ಪಿ.ಕೆ.ಸಿಂಗ್ ಈ ಕೈಪಿಡಿಗಾಗಿ ಶ್ರಮಿಸಿದ್ದಾರೆ.
ಈ ಕೈಪಿಡಿಯ ಪ್ರಕಾರ ಕೋವಿಡ್-19 ಆರಂಭದ ಹಂತದಲ್ಲಿ ಶ್ವಾಸನಾಳದ ಮೇಲಿನ ಹಂತದಲ್ಲಿ ಸೋಂಕು, ಉಸಿರಾಡಲು ಕಷ್ಟವಾಗುವುದು, ಜ್ವರ, ಉಸಿರುಕಟ್ಟಿದಂತೆ ಆಗುವ ಲಕ್ಷಣಗಳು ಕಂಡುಬರುತ್ತವೆ.
ಶುಶ್ರೂಷಾ ಕ್ರಮ 1) ಸಾಕಷ್ಟು ನೀರು ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ 2) ವೈಯಕ್ತಿಕ ಶುಚಿತ್ವಕ್ಕೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ಅನುಸರಿಸಬೇಕು. 2 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಾಗಿದ್ದಾರೆ ಮಾಸ್ಕ್ ಧರಿಸಬಹುದು 3) ಪ್ರತಿ 6 ಗಂಟೆಗೆ ಒಮ್ಮೆ ದೇಹದ ತಾಪಮಾನ ಪರಿಶೀಲಿಸಬೇಕು. ಕೊಠಡಿಯ ಉಷ್ಣಾಂಶವಿರುವ ನೀರಿನಲ್ಲಿ (ನಲ್ಲಿ ನೀರು ಬಳಸಿ, ಫ್ರಿಡ್ಜ್ನಿಂದ ತೆಗೆದ ಕೋಲ್ಡ್ ವಾಟರ್ ಬೇಡ). ದಪ್ಪ ಬಟ್ಟೆಯನ್ನು ನೆನೆಸಿ ಮೈ ಒರೆಸಿ. 4) ಉಸಿರಾಟದ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ. 6 ನಿಮಿಷ ಸತತವಾಗಿ ಓಡಾಡಿದ ನಂತರ ಸುಸ್ತು, ಉಸಿರಾಡಲು ಕಷ್ಟ ಎನಿಸಿದರೆ ವೈದ್ಯರನ್ನು ತಕ್ಷಣ ಸಂಪರ್ಕಿಸಿ. 5) ದಿನಕ್ಕೆರೆಡು ಬಾರಿ ಬಿಸಿ ಹಬೆ ತೆಗೆದುಕೊಳ್ಳಿ. 6) ಕ್ಲೊರ್ಹೆಕ್ಸಿಡೈನ್ (chlorhexidine) ಮೌತ್ವಾಷ್ನಿಂದ ಪ್ರತಿ 6 ಗಂಟೆಗೊಮ್ಮೆ ಬಾಯಿ ಮುಕ್ಕಳಿಸಿ.
ಔಷಧೋಪಚಾರ ಸ್ವಯಂ ವೈದ್ಯ ಅಪಾಯಕಾರಿ. ವೈದ್ಯರ ಸಲಹೆ ಪಡೆದೇ ಔಷಧ ಸೇವಿಸಬೇಕು ಎಂದು ಟಿವಿ9 ಎಲ್ಲ ಓದುಗರಲ್ಲಿ ವಿನಂತಿಸುತ್ತದೆ.
1) ಪ್ಯಾರಾಸೆಟಮಾಲ್ 500 ಎಂಜಿ. ಜ್ವರ 100 ಫ್ಯಾರನ್ಹೀಟ್ಗಿಂತಲೂ ಹೆಚ್ಚಾಗಿದ್ದರೆ ಪ್ರತಿ 6 ಗಂಟೆಗೊಮ್ಮೆ ತೆಗೆದುಕೊಳ್ಳಬಹುದು. 2) ವಿಟಮಿನ್ ಸಿ 500 ಎಂಜಿ. ದಿನಕ್ಕೆರೆಡು ಮಾತ್ರೆಗಳಂತೆ 15 ದಿನಗಳಿಗೆ. 3) ಜಿಂಕ್ 50 ಎಂಜಿ. ದಿನಕ್ಕೊಂದು ಮಾತ್ರೆಯಂತೆ 15 ದಿನಗಳಿಗೆ. 4) ಗಂಟಲು ಕೆರೆತವಿದ್ದರೆ ಲೆವೊಸಿಟಿರಿಜೈನ್ 5 ಎಂಜಿ ಮತ್ತು ಮೊಂಟೆಲುಕಾಸ್ಟ್ 8 ಎಂಜಿ (levocetirizine 5 mg + montelukast 8 mg) ಮಲಗುವ ಮೊದಲು 5 ದಿನಗಳ ಅವಧಿಗೆ ತೆಗೆದುಕೊಳ್ಳಬೇಕು.
ಇದರ ಜೊತೆಗೆ ನೀಡಬೇಕಾದ ಪೂರಕ ಔಷಧಿಗಳು ಮತ್ತು ಪ್ರಯೋಗಾಲಯಗಳಲ್ಲಿ ನಡೆಸಬೇಕಾದ ಬೇಕಾದ ಪರೀಕ್ಷೆಗಳ ಬಗ್ಗೆ ವೈದ್ಯರು ಮಾಹಿತಿ, ಮಾರ್ಗದರ್ಶನ ನೀಡುತ್ತಾರೆ.
ಕೋವಿಡ್-19ರ ಲಕ್ಷಣಗಳು ಆರಂಭಿಕ ಹಂತದಲ್ಲಿರುವವರು, ಲಕ್ಷಣಗಳು ಕಾಣಿಸಿಕೊಂಡ ದಿನದಿಂದ ಕನಿಷ್ಠ 10 ದಿನ ಮನೆಯಲ್ಲಿ ಪ್ರತ್ಯೇಕವಾಸ (ಐಸೊಲೇಶನ್) ಮಾಡಬೇಕು. ರೋಗ ಲಕ್ಷಣಗಳು ವಾಸಿಯಾದರೆ, ಜನರ ಇಲ್ಲದಿದ್ದರೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಬೇಕಾಗುವುದಿಲ್ಲ.
ಕೋವಿಡ್-19ರ ತೀವ್ರತೆ ಮಧ್ಯಮ ಪ್ರಮಾಣದಲ್ಲಿದ್ದರೆ ಕೋವಿಡ್ ಚಿಕಿತ್ಸೆಗೆ ಮೀಸಲಿರುವ ವಾರ್ಡ್ಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಬೇಕು. ಆಮ್ಲಜನಕ ನೀಡಬೇಕಾಗುತ್ತದೆ. ಕೋವಿಡ್-19ರ ತೀವ್ರತೆ ಹೆಚ್ಚಾಗಿದ್ದಾಗ ಮೆಕ್ಯಾನಿಕಲ್ ವೆಂಟಿಲೇಶನ್ ಬೇಕಾಗುತ್ತದೆ. ಕೃತಕ ಉಸಿರಾಟದ ಸೌಲಭ್ಯ ಕಲ್ಪಿಸಬೇಕಾಗುತ್ತದೆ.
ಮಕ್ಕಳಲ್ಲಿ ಕಂಡುಬರುವ ಇತರ ಲಕ್ಷಣಗಳು.. 0-19 ವರ್ಷ ವಯೋಮಾನದ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬರಬಹುದು. ಬಾಯಿಹುಣ್ಣು, ಕೈ ಅಥವಾ ಕಾಲಿನಲ್ಲಿ ಹುಣ್ಣುಗಳು. ಆಘಾತದ ಮನಃಸ್ಥಿತಿ, ಹೃದಯದ ಬಡಿತದಲ್ಲಿ ಅಪಾಯಕಾರಿ ಏರಿಳಿತ, ವಾಂತಿ, ಭೇದಿ, ಹೊಟ್ಟೆನೋವು. ಕೋವಿಡ್-19 ರೋಗಿಗಳ ಸಂಪರ್ಕಕ್ಕೆ ಬಂದಿದ್ದ ಬಗ್ಗೆ ವಿಚಾರಿಸಿಕೊಳ್ಳಬೇಕು. ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕು.
ಕೊರೊನಾ ಸೋಂಕು ದೃಢಪಟ್ಟ ನಂತರ ಏನು ಮಾಡಬೇಕೆಂದು ತೋಚದೇ ಗಾಬರಿ ಆಗುವವರೇ ಹೆಚ್ಚು. ಇಂಥವರಿಗೆ ನೆರವಾಗಲೆಂದೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (All India Institute of Medical Sciences – AIIMS) ಪಾಟ್ನಾ ಘಟಕ ಮಹತ್ವದ ಮಾಹಿತಿಗಳುಳ್ಳ ಕೈಪಿಡಿಯೊಂದನ್ನು ಹೊರತಂದಿದೆ. #AIIMS #CoronavirusIndia pic.twitter.com/P5RXaTiPDR
— TV9 Kannada (@tv9kannada) April 22, 2021
ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್
ಇದನ್ನೂ ಓದಿ: ಕೊವಿಡ್ ಸೋಂಕಿತರಿಗೆ ಚಿಕಿತ್ಸೆ; ಕೇಂದ್ರಕ್ಕೆ ನೊಟೀಸ್ ನೀಡಿದ ಸುಪ್ರೀಂಕೋರ್ಟ್
Published On - 4:00 pm, Thu, 22 April 21