ವೈದ್ಯಕೀಯ ಆಕ್ಸಿಜನ್ ತೀವ್ರ ಕೊರತೆ; ಹೈಕೋರ್ಟ್ ಮೆಟ್ಟಿಲೇರಿದ ದೆಹಲಿ ಆಸ್ಪತ್ರೆ
ಆಕ್ಸಿಜನ್ ಬೇಡಿಕೆ ಹೆಚ್ಚುತ್ತಿದ್ದಂತೆ, ದೆಹಲಿಯ ಬಹುತೇಕ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ INOX ಕೂಡ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ ಎಂದು ಆಸ್ಪತ್ರೆ ತನ್ನ ಅರ್ಜಿಯಲ್ಲಿ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವಂತೆ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಸರಿಯಾಗಿ ಪೂರೈಕೆಯಾಗುತ್ತಿಲ್ಲ, ಅಭಾವ ಉಂಟಾಗಿದೆ ಎಂಬಿತ್ಯಾದಿ ಆರೋಪಗಳನ್ನು ರಾಜ್ಯಗಳು ಮಾಡುತ್ತಿವೆ. ಅದರಲ್ಲೂ ಆಕ್ಸಿಜನ್ ಅಭಾವದ ಬಗ್ಗೆ ಅತಿ ಹೆಚ್ಚಾಗಿ ಕೂಗು ಕೇಳಿಬರುತ್ತಿರುವುದು ದೆಹಲಿ ಆಸ್ಪತ್ರೆಗಳಿಂದ. ಇದೀಗ ರಾಷ್ಟ್ರ ರಾಜಧಾನಿಯ ಇನ್ನೊಂದು ಆಸ್ಪತ್ರೆ, ತಮಗೆ ತುರ್ತಾಗಿ ಆಕ್ಸಿಜನ್ ಬೇಕಾಗಿದೆ.. ನಮ್ಮ ಆಸ್ಪತ್ರೆಯಲ್ಲಿ ಸುಮಾರು 70 ಕೊವಿಡ್ 19 ಸೋಂಕಿತರು ಆಕ್ಸಿಜನ್ ಸಪೋರ್ಟ್ನಲ್ಲಿದ್ದಾರೆ. ಸಹಾಯ ಮಾಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದೆ.
ದೆಹಲಿಯ ಸರೋಜ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ನಮ್ಮಲ್ಲಿ ಒಟ್ಟು 180 ಹಾಸಿಗೆಗಳ ಇವೆ. ಸದ್ಯ 130 ರೋಗಿಗಳು ಇದ್ದಾರೆ. ಅವರಲ್ಲಿ 70 ಸೋಂಕಿತರ ಸ್ಥಿತಿ ಗಂಭೀರವಾಗಿದ್ದು, ಐಸಿಯುದ್ದಲ್ಲಿದ್ದಾರೆ. 48 ಮಂದಿ ವೆಂಟಿಲೇಟರ್ ಸಪೋರ್ಟ್ನಲ್ಲಿದ್ದಾರೆ. ಆಕ್ಸಿಜನ್ ಕೊರತೆಯಿಂದ ಇರುವ ಬೆಡ್ಳನ್ನೂ ಬಳಸಿಕೊಳ್ಳಲಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ. ಇಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆಯಿಂದಲೇ ಆಮ್ಲಜನಕ ಕೊರತೆ ಬಿಕ್ಕಟ್ಟು ಉಂಟಾಗಿದೆ. ಸಂಜೆ ಹೊತ್ತಿಗೆ ವೈದ್ಯಕೀಯ ಆಮ್ಲಜನಕ ಸಂಪೂರ್ಣವಾಗಿ ಖಾಲಿ ಆಗಲಿದೆ. ಹಾಗಾಗಿ ಹೈಕೋರ್ಟ್ಗೆ ತುರ್ತಾಗಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಆಸ್ಪತ್ರೆ ತಿಳಿಸಿದೆ.
ಆಕ್ಸಿಜನ್ ಬೇಡಿಕೆ ಹೆಚ್ಚುತ್ತಿದ್ದಂತೆ, ದೆಹಲಿಯ ಬಹುತೇಕ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ INOX ಕೂಡ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ ಎಂದು ಆಸ್ಪತ್ರೆ ತನ್ನ ಅರ್ಜಿಯಲ್ಲಿ ತಿಳಿಸಿದೆ. ಇನ್ನು ಬುಧವಾರ ಮುಂಜಾನೆ ದೆಹಲಿಯ ಜಿಟಿಬಿ ಆಸ್ಪತ್ರೆ ಸೇರಿ, ಹಲವು ಹಾಸ್ಪಿಟಲ್ಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗಿತ್ತು.
ದೇಶದಲ್ಲಿ ಬರೀ ಆಕ್ಸಿಜನ್ ಕೊರತೆಯಷ್ಟೇ ಅಲ್ಲ, ಲಸಿಕೆ, ಬೆಡ್ ಮತ್ತಿತರ ವೈದ್ಯಕೀಯ ವ್ಯವಸ್ಥೆಗಳ ಅಭಾವವೂ ಉಂಟಾಗಿದೆ. ಈ ಬೆನ್ನಲ್ಲೇ ಇಂದು ಸುಪ್ರಿಂಕೋರ್ಟ್ ಇದರ ಬಗ್ಗೆ ಸುಮೊಟೊ ವಿಚಾರಣೆ ಕೈಗೆತ್ತಿಕೊಂಡು, ಕೊವಿಡ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಆಕ್ಸಿಜನ್, ಔಷಧ ಸೇರಿ ಇತರ ವ್ಯವಸ್ಥೆಗಳನ್ನು ಪೂರೈಸಲು ರಾಷ್ಟ್ರೀಯ ಯೋಜನೆಯೊಂದನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ಇದನ್ನೂ ಓದಿ: Earth Day 2021: ‘ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು ನಡುವೆ ಕಾಪಾಡುವುದು ತಾಯ ಕಣ್ಣು’
Saroj Super Specialty Hospital in Delhi Move high court to seeking emergency help for the supply of oxygen
Published On - 4:05 pm, Thu, 22 April 21