RCB IPL Celebration: ವಿಧಾನಸೌಧದ ಬಳಿ ಮಳೆಯಲ್ಲಿ ನೆನೆಯುತ್ತಲೇ ಬಸ್ ಹತ್ತಿದ ಪೇಟಧಾರಿ ಆರ್ಸಿಬಿ ಸದಸ್ಯರು
ಅಟಗಾರರಿಗೆ ಮೀಸಲಾಗಿದ್ದ ಎರಡು ಬಸ್ಗಳಲ್ಲಿ ಒಂದರ ಚಾಲಕ ರಿವರ್ಸ್ ಗೇರಲ್ಲಿ ವಾಹನವನ್ನು ಹಿಂದಕ್ಕೆ ಓಡಿಸುವಾಗಿ ದೊಡ್ಡ ಅನಾಹುತವೊಂದು ಸಂಭವಿಸುವುದು ಸ್ವಲ್ಪದರಲ್ಲಿ ತಪ್ಪಿತು. ಬಸ್ಸಿನ ಹಿಂಭಾಗದಲ್ಲಿ ಹೋಗುತ್ತಿದ್ದ ಜನರಲ್ಲಿ ಒಬ್ಬರೋ ಅಥವಾ ಇಬ್ಬರೋ ನೂಕುನುಗ್ಗಾಟದಿಂದ ಕೆಳಗೆ ಬೀಳುತ್ತಾರೆ. ಅದನ್ನು ಗಮನಿಸುವ ಪೊಲೀಸರು, ಬಸ್ಸಿಗೆ ರಪರಪನೆ ಹೊಡೆದು, ಗುದ್ದಿ ಅದನ್ನು ನಿಲ್ಲಿಸುವಲ್ಲಿ ಸಫಲರಾಗಿ ಅನಾಹುತ ತಪ್ಪಿಸುತ್ತಾರೆ.
ಬೆಂಗಳೂರು, ಜೂನ್ 4: ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League 2025) ಚಾಂಪಿಯನ್ಸ್ ಆರ್ಸಿಬಿ ಆಟಗಾರರ ಸತ್ಕಾರ ಸಮಾರಂಭಕ್ಕೆ ಕಪ್ಪು ಚುಕ್ಕೆ ಎಂಬಂತೆ ಮಳೆ ಅಡಚಣೆ ಉಂಟು ಮಾಡಿತು. ಇವತ್ತು ಸಾಯಂಕಾಲ ಮಳೆ ಸುರಿಯುವ ಮುನ್ಸೂಚನೆ ಇತ್ತು. ಆರ್ಸಿಬಿ ಆಟಗಾರರಿಗೆ ಮಳೆ ಸುರಿಯಲಿದೆ ಎಂಬ ಧಾವಂತದಲ್ಲೇ ಹಾರ ಹಾಕಿ, ಪೇಟ ತೊಡಿಸಿ ಸನ್ಮಾನಿಸಲಾಯಿತು. ಮಳೆಯ ಕಾರಣ ಆಟಗಾರರಲ್ಲೂ ಉತ್ಸಾಹ ಬತ್ತಿ ಹೋಗಿತ್ತು. ಕೊಡೆಗಳ ನೆರವಿನಿಂದ ಆಟಗಾರರನನ್ನು ಬಸ್ವರೆಗೆ ಕರೆತಂದು ವಾಹನದದೊಳಗೆ ಹತ್ತಿಸಲಾಯಿತು. ಅವರೊಂದಿಗೆ ಸಚಿವ ಜಮೀರ್ ಅಹ್ಮದ್ ಸಹ ಬಸ್ಸಿನ ಬಳಿ ಬರೋದನ್ನು ದೃಶ್ಯಗಳಲ್ಲಿ ನೋಡಬಹುದು.
ಇದನ್ನೂ ಓದಿ: RCB IPL Victory Stampede: ಕಾಲ್ತುಳಿತದಲ್ಲಿ 10 ಮಂದಿ ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್

ಪ್ರಿಯಾಂಕ್ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ

‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
