Bengaluru Stampede; ಕಾಲ್ತುಳಿತ ಸಂಗತಿ ಗೊತ್ತಾಗುತ್ತಿದ್ದಂತೆಯೇ ಅವಸರದಲ್ಲಿ ಕಾರ್ಯಕ್ರಮ ಮುಗಿಸಿದ್ದೇವೆ: ಶಿವಕುಮಾರ್
ವಿಷಯ ಗೊತ್ತಾಗುತ್ತಿದ್ದಂತೆಯೇ ಆಟಗಾರರರ ಸತ್ಕಾರ ಸಮಾರಂಭವನ್ನು ಕೂಡಲೇ ಮುಗಿಸುವ ಕೆಲಸಕ್ಕೆ ಮುಂದಾದೆವು, ಕೇವಲ ಒಂದು ಸುತ್ತಿನ ಸತ್ಕಾರ ಮಾತ್ರ ಸಾಧ್ಯವಾಗಿದ್ದು, ತಾವ್ಯಾರೂ ಭಾಷಣ ಮಾಡಲಿಲ್ಲ, ಭದ್ರತೆಯ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ, ಇದ್ದ ಸಮಾಯಾಕಾಶದಲ್ಲೇ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ, ಅವರನ್ನು ದೂರುವುದರಲ್ಲಿ ಪ್ರಯೋಜನವಿಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು, ಜೂನ್ 4: ಆರ್ಸಿಬಿ ತಂಡದ ಸದಸ್ಯರನ್ನು ಸತ್ಕರಿಸುವ ಕಾರ್ಯಕ್ರಮ ಸೂತಕದೊಂದಿಗೆ ಕೊನೆಗೊಂಡಿದೆ. ಭಾರೀ ಸತ್ಕಾರ ಕೂಟವನ್ನು ಪ್ಲ್ಯಾನ್ ಮಾಡಿದ್ದ ಕರ್ನಾಟಕ ಸರ್ಕಾರ ಕೇವಲ 15 ನಿಮಿಷಗಳಲ್ಲಿ ಅದನ್ನು ಮುಗಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಅರ್ಸಿಬಿ ಆಟಗಾರರು ಬರ್ತಾರೆ ಅಂತ ಅಭಿಮಾನಿಗಳು ಅಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದಾಗಲೇ ಕಾಲ್ತುಳಿತದ ಘೋರ ದುರಂತ ಸಂಭವಿಸಿದೆ. ಆನಾಹುತದ ಬಗ್ಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಲಕ್ಷಾಂತರ ಜನ ಸ್ಟೇಡಿಯಂ ಬಳಿ ಸೇರಿದ್ದರು, ದುರಂತ ನಡೆದಿರುವುದಕ್ಕೆ ತಾನು ಯಾರನ್ನೂ ದೂರಲ್ಲ, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಬಂದವರ ಮೇಲೆ ಲಾಠಿ ಬೀಸಿ ಶಿಸ್ತು ಕಾಯ್ದುಕೊಳ್ಳಿ ಅಂತ ಹೇಳಲಾಗಲ್ಲ, ಎಷ್ಟು ಜನ ಸತ್ತಿದ್ದಾರೆ ಅಂತ ನಿಖರವಾದ ಮಾಹಿತಿ ಇಲ್ಲ, ತಾನೀಗ ಅಸ್ಪತ್ರೆಗೆ ಹೋಗುತ್ತಿದ್ದು ನಂತರ ವಿವರವಾಗಿ ಮಾತಾಡುವುದಾಗಿ ಹೇಳಿದರು.
ಇದನ್ನೂ ಓದಿ: RCB IPL Victory Stampede: ಕಾಲ್ತುಳಿತದಲ್ಲಿ 10 ಮಂದಿ ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್ನಲ್ಲಿ ಸಿಲಿಕಾನ್ ಸಿಟಿ ಕೂಲ್ ಕೂಲ್

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್

ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
