ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್ಸಿಬಿ; ವಿಡಿಯೋ
Bengaluru Welcomes RCB Champions: 17 ವರ್ಷಗಳ ಬಳಿಕ ಆರ್ಸಿಬಿ ತಂಡ ಮಿಲಿಯನ್ ಡಾಲರ್ ಟೂರ್ನಿಯನ್ನು ಗೆದ್ದು ಬೆಂಗಳೂರಿಗೆ ಮರಳಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ತಂಡವನ್ನು ಸ್ವಾಗತಿಸಿದರು. ಆರ್ಸಿಬಿ ಅಭಿಮಾನಿಗಳು ತಂಡಕ್ಕೆ ಅದ್ಭುತ ಸ್ವಾಗತ ನೀಡಿದರು. ಆರ್ಸಿಬಿ ತನ್ನ ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದೆ.
ಬರೋಬ್ಬರಿ 17 ವರ್ಷಗಳ ಬಳಿಕ ಮಿಲಿಯನ್ ಡಾಲರ್ ಟೂರ್ನಿಯನ್ನು ಗೆದ್ದುಬೀಗಿರುವ ಆರ್ಸಿಬಿ ತಂಡ ಇಂದು ಟ್ರೋಫಿಯೊಂದಿಗೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಪೂರ್ವ ನಿರ್ಧರಿತ ಕಾರ್ಯಕ್ರಮದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಡೀ ತಂಡವನ್ನು ಸ್ವಾಗತಿಸಿದರು. ಆ ಬಳಿಕ ತಂಡದ ಆಟಗಾರರು ಎರಡು ಬಸ್ಗಳಲ್ಲಿ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಪ್ರಯಾಣ ಬೆಳೆಸಿದರು. ವಿಮಾನ ನಿಲ್ದಾಣದಿಂದ ಹೋಟೆಲ್ವರೆಗೂ ಇಡೀ ತಂಡಕ್ಕೆ ಆರ್ಸಿಬಿ ಅಭಿಮಾನಿಗಳ ಭವ್ಯ ಸ್ವಾಗತ ದೊರೆತಿತು. ಅಭಿಮಾನಿಗಳ ಈ ಅಭಿಮಾನಕ್ಕೆ ಆರ್ಸಿಬಿ ಫ್ರಾಂಚೈಸಿಯೇ ಮನಸೋತಿದ್ದು, ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ನಮ್ಮ ಅಭಿಮಾನಿಗಳ ತರ ಬೇರೆ ಯಾರು ಇಲ್ಲ, ನೀವೇ ನಮ್ಮ ಜೀವ ಸ್ವರ ಎಂದು ಬರೆದುಕೊಂಡಿದೆ.

