ಕೊರೊನಾ ಕಠಿಣ ನಿಯಮ ನಡುವೆ ಉಡುಪಿಯಲ್ಲಿ ನಡೆಯಿತು 354 ಸರಳ ಮದುವೆ

ಮದುವೆಯನ್ನು ಫೇಸ್​​ಬುಕ್​, ಯುಟ್ಯೂಬ್​ನಲ್ಲಿ ಲೈವ್ ಮಾಡಿ ಕುಟುಂಬಸ್ಥರು ಮನೆಯಲ್ಲೇ ಕುಳಿತು ಮದುವೆ ನೋಡುತ್ತಿದ್ದಾರೆ. ನಗರದ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ, ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು.

ಕೊರೊನಾ ಕಠಿಣ ನಿಯಮ ನಡುವೆ ಉಡುಪಿಯಲ್ಲಿ ನಡೆಯಿತು 354 ಸರಳ ಮದುವೆ
ಉಡುಪಿಯಲ್ಲಿ ನಡೆದ ಸರಳ ಮದುವೆ
Follow us
sandhya thejappa
|

Updated on: Apr 25, 2021 | 2:58 PM

ಉಡುಪಿ: ಕೊವಿಡ್ 19 ರ ಅಬ್ಬರ, ವೀಕೆಂಡ್ ಲಾಕ್​ಡೌನ್​, ಕಠಿಣ ನಿಯಮದ ನಡುವೆ ರಾಜ್ಯದಲ್ಲಿ ಹಲವು ಕಡೆ ಮದುವೆಗಳು ನಡೆಯುತ್ತಿವೆ. ಅದರಂತೆ ಉಡುಪಿಯಲ್ಲೂ ಕೂಡಾ ಸರಳವಾಗಿ ಮದುವೆಗಳು ನಡೆಯುತ್ತಿವೆ. ಇಂದು ಜಿಲ್ಲೆಯಲ್ಲಿ ಅನುಮತಿ ನಡೆದ 354 ಮದುವೆಗಳು ನಡೆಯುತ್ತಿವೆ. ಸಾವಿರ ಆಮಂತ್ರಣ ಅಚ್ಚು ಹಾಕಿಸಿದ ಮನೆಗಳು 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯ ಪೂರೈಸುತ್ತಿವೆ.

ಮದುವೆಯನ್ನು ಫೇಸ್​​ಬುಕ್​, ಯುಟ್ಯೂಬ್​ನಲ್ಲಿ ಲೈವ್ ಮಾಡಿ ಕುಟುಂಬಸ್ಥರು ಮನೆಯಲ್ಲೇ ಕುಳಿತು ಮದುವೆ ನೋಡುತ್ತಿದ್ದಾರೆ. ನಗರದ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ, ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು. ಒಂದೂವರೆ ಸಾವಿರ ಜನರ ವ್ಯವಸ್ಥೆಗೆ ಸಿದ್ಧಗಾಗಿದ್ದ ಈ ಜೋಡಿಯ ಕುಟುಂಬಸ್ಥರು, ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದ್ದಾರೆ. ಮದುವೆ ಮುಂದೂಡಬಹುದಿತ್ತು. ನಿಗದಿಯಾದ ಘಳಿಗೆ ಚೆನ್ನಾಗಿದ್ದ ಕಾರಣ ಮದುವೆ ಮಾಡುತ್ತಿದ್ದೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕೊವಿಡ್ ಹತೋಟಿಗೆ ಬಂದ ನಂತರ ಗೆಳೆಯರಿಗೆ ಮದುವೆ ಪಾರ್ಟಿ ಕೊಡುತ್ತೇವೆ ಎಂದು ವರ ಪ್ರಸನ್ನ ಹೇಳಿದ್ದಾರೆ.

ಸಾಮಾಜಿಕ ಅಂತರದ ವ್ಯವಸ್ಥೆ

ವಾಟ್ಸಾಪ್, ಫೆಸ್​ಬುಕ್​ನಲ್ಲಿ ಶುಭ ಹಾರೈಕೆ ಮದುವೆ ಸಂಭ್ರಮಕ್ಕೆ ಕೊರೊನಾ ನಿಯಮಗಳು ಬ್ರೇಕ್ ಹಾಕಿದೆ. ಸಾವಿರಾರು ಜನರಿಗೆ ಕಾರ್ಡ್ ಹಂಚಿದ್ದರೂ ಕೆಲವರನ್ನ ಮಾತ್ರ ಕರೆಯಲಾಗಿದೆ. ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಅನುಸರಿಸಬೇಕಾಗಿದೆ. ಸ್ನೇಹಿತರನ್ನು ಕರೆದಿದ್ದೆವು. ಆದರೆ ಅವರು ಬರಲು ಆಗದ ಕಾರಣ ಸದ್ಯ ವಾಟ್ಸಾಪ್, ಫೇಸ್​ಬುಕ್​​ನಲ್ಲಿ ಶುಭ ಹಾರೈಸಿದ್ದಾರೆ ಎಂದು ಬೆಂಗಳೂರಿನ ಮಲ್ಲೇಶ್ವರಂನ ಕಲ್ಯಾಣ ಮಂಟಪದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿಯಾದ ಜೈ ಪ್ರಕಾಶ್ ಮತ್ತು ಕಲ್ಪನ ಹೇಳಿದರು.

ಇದನ್ನೂ ಓದಿ

ನನ್ನ ಗಂಡನಿಗೆ ಕೈಕಾಲು ಕಟ್ಟಿ ಹಾಕಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ, ಅವರ ಸಾವಿಗೆ ವಿಕ್ಟೋರಿಯಾ ವೈದ್ಯರೇ ಕಾರಣ ಎಂದು ಕಣ್ಣೀರಿಟ್ಟ ಮಹಿಳೆ

ಮಹಾರಾಷ್ಟ್ರದಲ್ಲಿ ಎಲ್ಲರಿಗೂ ಕೊವಿಡ್ ಲಸಿಕೆ ಉಚಿತ; ಸಚಿವ ನವಾಬ್ ಮಲಿಕ್ ಘೋಷಣೆ

(354 weddings simply took place in backdrop of stricter at udupi)