ನನ್ನ ಗಂಡನಿಗೆ ಕೈಕಾಲು ಕಟ್ಟಿ ಹಾಕಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ, ಅವರ ಸಾವಿಗೆ ವಿಕ್ಟೋರಿಯಾ ವೈದ್ಯರೇ ಕಾರಣ ಎಂದು ಕಣ್ಣೀರಿಟ್ಟ ಮಹಿಳೆ

ಕೈಕಾಲು ಕಟ್ಟಿಹಾಕಿ ಟ್ರೀಟ್ಮೆಂಟ್ ಕೊಡುವ ಅಗತ್ಯವೇನಿತ್ತು? ನನ್ನ ಗಂಡನ ಸಾವಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೇ ಕಾರಣ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಆರೋಪಿಸಿದ್ದಾರೆ.

ನನ್ನ ಗಂಡನಿಗೆ ಕೈಕಾಲು ಕಟ್ಟಿ ಹಾಕಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ, ಅವರ ಸಾವಿಗೆ ವಿಕ್ಟೋರಿಯಾ ವೈದ್ಯರೇ ಕಾರಣ ಎಂದು ಕಣ್ಣೀರಿಟ್ಟ ಮಹಿಳೆ
ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧಿನ ಗಾಯಾಳು ಖೈದಿ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಸಾವು
Follow us
ಆಯೇಷಾ ಬಾನು
|

Updated on: Apr 25, 2021 | 2:13 PM

ಬೆಂಗಳೂರು: ಮಹಾಮಾರಿ ಕೊರೊನಾ ನಡುವೆ ಸರ್ಕಾರಿ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ನನ್ನ ಗಂಡನಿಗೆ ಕೈಕಾಲು ಕಟ್ಟಿ ಹಾಕಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಕೈಕಾಲು ಕಟ್ಟಿಹಾಕಿ ಟ್ರೀಟ್ಮೆಂಟ್ ಕೊಡುವ ಅಗತ್ಯವೇನಿತ್ತು? ನನ್ನ ಗಂಡನ ಸಾವಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೇ ಕಾರಣ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಆರೋಪಿಸಿದ್ದಾರೆ.

ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿದ್ದೆವು. ಆಗ ಕೊರೊನಾ ಪಾಸಿಟಿವ್ ಬಂತು. ಎಷ್ಟೇ ಪ್ರಯತ್ನಿಸಿದರೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗಲೇ ಇಲ್ಲ. 3 ದಿನಗಳ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದೆವು. ವಿಕ್ಟೋರಿಯಾದಲ್ಲಿ ಕೊವಿಡ್ ಟೆಸ್ಟ್ ಮಾಡಿಸಿದ ವೇಳೆ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದ್ರೆ ಅಲ್ಲಿನ ಸಿಬ್ಬಂದಿ ಹೇಗಿದ್ರೂ ಕೊವಿಡ್ ವಾರ್ಡ್ಗೆ ಬಂದಿದ್ದೀರಿ ಚಿಕಿತ್ಸೆ ಪಡೆಯಿರಿ ಎಂದು ಒತ್ತಾಯಪೂರ್ವಕವಾಗಿ ಕೂಡಿಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವ ರೀತಿ ಚಿಕಿತ್ಸೆ ನೀಡಿದರು ಎಂದು ಮಾಹಿತಿಯಿಲ್ಲ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ನನ್ನ ಪತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯನ್ನೇ ನೀಡಿಲ್ಲ. ಆಸ್ಪತ್ರೆಗೆ ದಾಖಲಾಗುವಾಗ ಸ್ಮಾರ್ಟ್ಫೋನ್ ಬೇಡ ಅಂದಿದ್ರು. ಕೀ ಪ್ಯಾಡ್ ಸೆಟ್ ಮಾತ್ರ ಬಳಸಲು ಅವಕಾಶ ಎಂದಿದ್ದರು. ವಾರ್ಡ್ಗೆ ಹೋದ ಮೇಲೆ ಉಸಿರಾಟದ ಸಮಸ್ಯೆ ಕಾಣಿಸಿತ್ತು. ಅಲ್ಸರ್ ಆಗಿದ್ದರಿಂದ ಮಾತಾಡಲು ಆಗುತ್ತಿಲ್ಲ ಎಂದು ನನ್ನ ಪತಿ ಹೇಳಿದ್ರು. ಚಿಕಿತ್ಸೆಯನ್ನೇ ನೀಡದೆ ಕೂಡಿಟ್ಟು ಸಾಯಿಸಿದ್ದಾರೆ. ನನ್ನ ಗಂಡನ ಸಾವಿಗೆ ವಿಕ್ಟೋರಿಯಾ ಆಸ್ಪತ್ರೆಯವರೇ ಕಾರಣ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ: ಮೇಡಿ ಅಗ್ರಹಾರದಲ್ಲಿ ಒಂದೇ ದಿನ 27 ದೇಹಗಳ ದಹನ, ಕೊಂಚವೂ ಬಿಡುವಿಲ್ಲದೆ ನಡೆಯುತ್ತಿದೆ ದಹನ ಕಾರ್ಯ