ಬಳ್ಳಾರಿಯಲ್ಲಿ ಬಾಣಂತಿಗೆ ನೆರವು ನೀಡಿದ ಎಎಸ್ಐ; ವೀಕೆಂಡ್ ಕರ್ಫ್ಯೂ ನಡುವೆ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಆಧಿಕಾರಿ

ಬಾಗೇಪಲ್ಲಿಯಿಂದ ಬಸ್ ಮೂಲಕ ಬಳ್ಳಾರಿಗೆ ಕವಿತಾ ಎಂಬ ಬಾಣಂತಿ ಮಹಿಳೆ ತನ್ನ ಮೂರು ತಿಂಗಳ ಶಿಶುವಿನೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಬಂದಿದ್ದರು. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮಕ್ಕೆ ತೆರಳಬೇಕಿದ್ದ ಕವಿತಾ ವೀಕೆಂಡ್ ಕರ್ಫ್ಯೂನಿಂದ ವಾಹನಗಳಿಲ್ಲದೆ 3 ತಿಂಗಳ ಶಿಶು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದರು.

ಬಳ್ಳಾರಿಯಲ್ಲಿ ಬಾಣಂತಿಗೆ ನೆರವು ನೀಡಿದ ಎಎಸ್ಐ; ವೀಕೆಂಡ್ ಕರ್ಫ್ಯೂ ನಡುವೆ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಆಧಿಕಾರಿ
ಬಾಣಂತಿ ಮಹಿಳೆ ಕುಟುಂಬದವರಿಗೆ ಆಟೋದಲ್ಲಿ ಕಳುಹಿಸಿದ ಸಂಚಾರಿ ಪೊಲೀಸ್ ಆಧಿಕಾರಿ
Follow us
sandhya thejappa
|

Updated on: Apr 25, 2021 | 2:01 PM

ಬಳ್ಳಾರಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ಇಡೀ ರಾಜ್ಯ ಸ್ತಬ್ಧವಾಗಿದೆ. ಜನರು ಬೇಕಾಬಿಟ್ಟಿಯಾಗಿ ಓಡಾದಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಬಳ್ಳಾರಿಯ ಸಂಚಾರಿ ಪೊಲೀಸ್ ಬಾಣಂತಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆಯ ಮಾತುಗಳನ್ನು ಕೆಲವರು ಭಾಷಣ ಮಾಡುವಾಗ ಅಥವಾ ಇತರರ ಮುಂದೆ ಹೀರೋ ಎಂದೆನಿಕೊಳ್ಳುವಾಗ ಹೇಳುತ್ತಾರೆ. ಆದರೆ ಮಾನವೀಯ ಗುಣಗಳು ಭಾಷಣ ಬಿಗಿಯುವವರಿಗೇ ಇರುವುದಿಲ್ಲ. ಹಾಗಂತ ಎಲ್ಲರೂ ಈ ವರ್ಗಕ್ಕೆ ಸೇರುವುದಿಲ್ಲ. ಕೆಲವರು ತನಗೆ ತೊಂದರೆಯಾಗುತ್ತದೆ, ದುಡ್ಡು ಖರ್ಚಾಗುತ್ತದೆ ಎಂದು ಯೋಚಿಸದೆ ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಹೀಗೆ ಸಹಾಯ ಮಾಡುವ ಮೂಲಕ ಬಳ್ಳಾರಿಯ ಸಂಚಾರಿ ಪೊಲೀಸ್ ಅಧಿಕಾರಿ ಮಾನವೀಯತೆ ಮೆರೆದಿದ್ದಾರೆ.

ಬಾಗೇಪಲ್ಲಿಯಿಂದ ಬಸ್ ಮೂಲಕ ಬಳ್ಳಾರಿಗೆ ಕವಿತಾ ಎಂಬ ಬಾಣಂತಿ ಮಹಿಳೆ ತನ್ನ ಮೂರು ತಿಂಗಳ ಶಿಶುವಿನೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಬಂದಿದ್ದರು. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮಕ್ಕೆ ತೆರಳಬೇಕಿದ್ದ ಕವಿತಾ ವೀಕೆಂಡ್ ಕರ್ಫ್ಯೂನಿಂದ ವಾಹನಗಳಿಲ್ಲದೆ 3 ತಿಂಗಳ ಶಿಶು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಗರದ ರಾಯಲ್ ವೃತ್ತದಲ್ಲಿ ಟ್ರಾಫಿಕ್ ಎಎಸ್​ಐ ಹೆಚ್ ನಾಗಭೂಷಣ ಅವರಿಂದ ಆಕೆಯನ್ನು ವಿಚಾರಿಸಿದರು. ವಿಚಾರಿಸಿದ ಬಳಿಕ ಬಾಣಂತಿ ಗೋಟೂರು ಗ್ರಾಮಕ್ಕೆ ಹೋಗಬೇಕಾಗಿರುವುದು ಸಂಚಾರಿ ಪೊಲೀಸ್ ಆದ ನಾಗಭೂಷಣರವರಿಗೆ ತಿಳಿಯಿತು. 3 ತಿಂಗಳ ಶಿಶು ಎತ್ತಿಕೊಂಡು ನಡೆದು ಹೋಗುತ್ತಿದ್ದ ಬಾಣಂತಿ ಕವಿತಾಳನ್ನು ನಿಲ್ಲಿಸಿ ಆಕೆಗೆ ಮನೆ ಹೋಗಲು ಆಟೋ ವ್ಯವಸ್ಥೆ ಮಾಡುವ ಜೊತೆಗೆ ಆಟೋ ಬಾಡಿಗೆಯನ್ನು ಸ್ವತಃ ತಾವೇ ನೀಡಿ ಕಳುಹಿಸಿಕೊಟ್ಟರು.

ಮೂರು ತಿಂಗಳ ಶಿಶುವಿನೊಂದಿಗೆ ಇರುವ ಮಹಿಳೆ

ಇದನ್ನೂ ಓದಿ

ತೀರ್ಪು ನೀಡುವಾಗ ‘ಜಾಮೀನು ಅಲ್ಲ, ಜೈಲು‘ ಎಂಬ ತತ್ವವನ್ನು ಪಾಲಿಸಿ; ಹೈಕೋರ್ಟ್​ಗಳಿಗೆ ಸುಪ್ರೀಂಕೋರ್ಟ್ ಸೂಚನೆ

ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

(Assistant Sub Inspector helps to woman in bellary)

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್