ಕಲಬುರಗಿ: ಕೊರೊನಾ ಸೋಂಕಿತ ತಾಯಿಯನ್ನು ನೋಡಲು ಬಿಡದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಪುತ್ರ
ಕೊರೊನಾ ಸೋಂಕಿತ ತಾಯಿ ಮುಖವನ್ನು ನೋಡಲು ಬಿಟ್ಟಿಲ್ಲ ಎಂದು ದುಖಿಃತನಾಗಿರುವ ಯುವಕ ಜಿಮ್ಸ್ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಮುಂದಾಗಿದ್ದ. ಇದರಿಂದ ಕಲಬುರಗಿಯ ಜಿಮ್ಸ್ನ ಸಿಬ್ಬಂದಿ ತಾಯಿಯನ್ನು ನೋಡಲು ಅವಕಾಶ ಮಾಡಿಕೊಡುವುದಾಗಿ ಯುವಕನಿಗೆ ಭರವಸೆ ನೀಡಿದ್ದರು.
ಕಲಬುರಗಿ: ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಎರಡನೇ ಅಲೆ ಬಾಳಿ ಬದುಕಬೇಕಾದ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ಬೆಡ್, ಆ್ಯಕ್ಸಿಜನ್ ಕೊರತೆ ಅಭಾವ ಹೆಚ್ಚಾಗಿದೆ. ಸದ್ಯ ಈ ಕೊರತೆಯನ್ನು ನೀಗಿಸಲು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಮಧ್ಯೆ ಕೊರೊನಾ ಸೋಂಕಿತ ತಾಯಿಯನ್ನು ನೋಡಲು ಬಿಡದ ಹಿನ್ನೆಲೆ ಪುತ್ರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೊನಾ ಸೋಂಕಿತ ತಾಯಿ ಮುಖವನ್ನು ನೋಡಲು ಬಿಟ್ಟಿಲ್ಲ ಎಂದು ದುಖಿಃತನಾಗಿರುವ ಯುವಕ ಜಿಮ್ಸ್ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಮುಂದಾಗಿದ್ದ. ಇದರಿಂದ ಕಲಬುರಗಿಯ ಜಿಮ್ಸ್ನ ಸಿಬ್ಬಂದಿ ತಾಯಿಯನ್ನು ನೋಡಲು ಅವಕಾಶ ಮಾಡಿಕೊಡುವುದಾಗಿ ಯುವಕನಿಗೆ ಭರವಸೆ ನೀಡಿದ್ದರು. ಜಿಮ್ಸ್ನ ಸಿಬ್ಬಂದಿ ಭರವಸೆ ನೀಡಿದ ಹಿನ್ನೆಲೆ ಕಟ್ಟಡದ ಮೇಲಿಂದ ಯುವಕ ಕೆಳಗೆ ಇಳಿದು ಬಂದಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಇಂದು (ಏಪ್ರಿಲ್ 25) ಬೆಳಿಗ್ಗೆ 5 ಗಂಟೆ ಹೊತ್ತಿಗೆ ನಡೆದಿದೆ.
ನಿನ್ನೆಯೂ ಕೂಡಾ ತನ್ನ ತಾಯಿಯ ಸಾವನ್ನು ತಿಳಿಯದ ಕೊರೊನಾ ಸೋಂಕಿತ ಮಗನಿಗೆ ಕುಟುಂಬಸ್ಥರು ವಿಚಾರ ತಿಳಿಸದೆ ಅಂತ್ಯಕ್ರಿಯೆ ನೆರವೇರಿಸಿದ್ದರು. ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೊತೆಗೆ ಮಗನಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಉಸಿರಾಟದ ಸಮಸ್ಯೆಯಿಂದ ತಾಯಿ ಕೊನೆಯುಸಿರೆಳೆದಳು. ಈ ಮಾಹಿತಿಯನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನಿಗೆ ಹೇಳದೆ ಕುಟುಂಬಸ್ಥರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ತಾಯಿಯ ಸಾವನ್ನು ಅರಿಯದ ಮಗ ಅಮ್ಮ ಹೇಗಿದ್ದಾರೆ ಎಂದು ಕುಟುಂಬಸ್ಥರ ಬಳಿ ಕೇಳುತ್ತಿದ್ದ. ಅದಕ್ಕೆ ತಾಯಿಯ ಸಾವನ್ನು ಸಹಿಸದ ಮಗನಿಗೆ ಆರೋಗ್ಯದ ಸ್ಥಿತಿ ಹದಗೆಡುತ್ತದೆ ಎಂಬ ಕಾರಣಕ್ಕೆ ಸಾವಿನ ಸುದ್ದಿ ಹೇಳದೆ ಅರಾಮಾಗಿದ್ದಾರೆಂದು ಹೇಳಿದ್ದಾರೆ.
ಇದನ್ನೂ ಓದಿ
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ; ಬಸವರಾಜ ಬೊಮ್ಮಾಯಿ
(son tried to commit suicide as refused to see Corona infected mother at Kalaburagi)