ಕೊರೊನಾಗೆ ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ಹಣ ಏನಾಯ್ತು? ಸಾಮಾಜಿಕ ಜಾಲತಾಣದಲ್ಲಿ ಕೇಂದ್ರಕ್ಕೆ ಜನರಿಂದ ಪ್ರಶ್ನೆಗಳ ಸುರಿಮಳೆ

ಈ‌ ಬಾರಿಯ ಕೇಂದ್ರದ ಬಜೆಟ್ನಲ್ಲಿ ಕೊರೊನಾ ಲಸಿಕೆ ಖರೀದಿಗೆ ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಲಾಗಿದೆ. ಆದರೆ ಇದುವರೆಗೂ ನೀಡಿರುವ 14 ಕೋಟಿ ಡೋಸ್ ಲಸಿಕೆಗೆ 35 ಸಾವಿರ ಕೋಟಿರೂ ಖರ್ಚಾಗಿಲ್ಲ.

ಕೊರೊನಾಗೆ ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ಹಣ ಏನಾಯ್ತು? ಸಾಮಾಜಿಕ ಜಾಲತಾಣದಲ್ಲಿ ಕೇಂದ್ರಕ್ಕೆ ಜನರಿಂದ ಪ್ರಶ್ನೆಗಳ ಸುರಿಮಳೆ
ಆಸ್ಟ್ರಾಜೆನೆಕಾ ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
ಆಯೇಷಾ ಬಾನು
|

Updated on:Apr 25, 2021 | 11:45 AM

ದೆಹಲಿ: ಕೊರೊನಾ 2ನೇ ಅಲೆ ದೇಶದಲ್ಲೆಡೆ ವ್ಯಾಪಿಸಿದೆ. ಇದರ ಭೀಕರತೆಗೆ ದಿನದಿಂದ ದಿನಕ್ಕೆ ಸಾವು ನೋವುಗಳು ಹೆಚ್ಚಾಗುತ್ತಿವೆ. ಇದರ ನಡುವೆ ಸರ್ಕಾರ ಕೂಡ ಇದರ ವಿರುದ್ಧ ಹೋರಾಡುವಲ್ಲಿ ಅನೇಕ ಕಡೆ ಎಡವುತ್ತಿದೆ. ಆಕ್ಸಿಜನ್ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕೊರೊನಾ ಸೋಂಕಿತರು ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ.

ಈಗಾಗಲೇ ಒಂದು ಬಾರಿ ಕೊರೊನಾ ಅಲೆಯನ್ನು ಎದುರಿಸಿರುವ ಸರ್ಕಾರ ಎರಡನೇ ಅಲೆಗೆ ಏಕೆ ಸಿದ್ಧವಾಗಿಲ್ಲ ಎಂಬ ಕೂಗು, ಆಕ್ರೋಶ ಈಗಾಗಲೇ ಕೇಳಿ ಬಂದಿದ್ದು ಮತ್ತೊಂದು ಚರ್ಚೆ ಟ್ವಿಟರ್ನಲ್ಲಿ ಶುರುವಾಗಿದೆ. ಕೊರೊನಾ ನಿರ್ವಾಹಣೆಗೆ ಬಜೆಟ್ನಲ್ಲಿ ಹಂಚಿಕೆ ಮಾಡಿದ್ದ ಹಣ ಎಲ್ಲಿ ಹೋಯ್ತು? ಎಂದು ಸಾರ್ವಜನಿಕರು ಕೇಂದ್ರಕ್ಕೆ ಟ್ವಿಟರ್ ಮೂಲಕ ಪ್ರಶ್ನೆ ಹಾಕಿದ್ದಾರೆ.

ದೇಶದ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಬಜೆಟ್​ನಲ್ಲಿ 35 ಸಾವಿರ ಕೋಟಿ ರೂಪಾಯಿಯನ್ನು  ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು. ಹಾಗೂ ನಿರ್ಮಲಾ ಸೀತಾರಾಮನ್ ಸಚಿವ ಹರ್ಷವರ್ಧನ್ , ಕಾನೂನು ಸಚಿವ ರವಿಶಂಕರ್ ಪ್ರಸಾದ್ ಉಚಿತ ಲಸಿಕೆ ಘೋಷಣೆ ಮಾಡಿದ್ದರು. ಆದರೆ ಈಗ ಉಲ್ಟಾ ಹೊಡೆದಿರುವ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಜನರೇ ಹಣ ಪಾವತಿಸಬೇಕು ಎಂದಿದೆ. ಶೇಕಡಾ 50 ರಷ್ಟು ಲಸಿಕೆಯನ್ನ ಕೇಂದ್ರ ಸರ್ಕಾರ ಪೂರೈಸಲಿದೆ. ಇನ್ನುಳಿದ ಶೇಕಡಾ 50 ರಷ್ಟು ಲಸಿಕೆಗೆ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳು ಹಣ ಪಾವತಿಸಬೇಕು ಎಂದಿದೆ.

ಬಜೆಟ್ನಲ್ಲಿ ಹಂಚಿಕೆ ಮಾಡಿದ್ದ ಹಣ ಎಲ್ಲಿ ಹೋಯ್ತು? ಈ‌ ಬಾರಿಯ ಕೇಂದ್ರದ ಬಜೆಟ್ನಲ್ಲಿ ಕೊರೊನಾ ಲಸಿಕೆ ಖರೀದಿಗೆ ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಲಾಗಿದೆ. ಆದರೆ ಇದುವರೆಗೂ ನೀಡಿರುವ 14 ಕೋಟಿ ಡೋಸ್ ಲಸಿಕೆಗೆ 35 ಸಾವಿರ ಕೋಟಿರೂ ಖರ್ಚಾಗಿಲ್ಲ. ಆದರೆ ಈಗ ಶೇ.50 ರಷ್ಟು ಲಸಿಕೆಯನ್ನ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳೇ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾದರೇ ಬಜೆಟ್ನಲ್ಲಿ ಹಂಚಿಕೆ ಮಾಡಿದ್ದ ಹಣ ಎಲ್ಲಿ ಹೋಯ್ತು? ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಜನರೇ ಪ್ರತಿ ಡೋಸ್ ಕೋವಿಶೀಲ್ಡ್ ಲಸಿಕೆಗೆ 600 ರೂಪಾಯಿ , ಕೋವ್ಯಾಕ್ಸಿನ್ ಲಸಿಕೆಗೆ 1,200 ರೂಪಾಯಿ ನೀಡಿ ಖರೀದಿಸಬೇಕು. ಕೇಂದ್ರ ಸರ್ಕಾರ ಜನರ ಮೇಲೆಯೇ ಲಸಿಕೆ ಖರ್ಚಿನ ಹೊರೆ ಹೇರಿದೆ. ಹಣದುಬ್ಬರ, ವೇತನ ಕಡಿತ, ನಿರುದ್ಯೋಗದ ಮಧ್ಯೆ ಜನರಿಗೆ ಲಸಿಕೆ ವೆಚ್ಚದ ಹೊರೆ ಬಿದ್ದಿದೆ ಎಂದು ಟ್ವಿಟರ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Coronavirus in India Update: ಸತತ ನಾಲ್ಕನೇ ದಿನ ದೇಶದಲ್ಲಿ 3 ಲಕ್ಷ ದಾಟಿದ ಹೊಸ ಕೊವಿಡ್ ಪ್ರಕರಣ, 2,767 ಮಂದಿ ಸಾವು

Published On - 11:40 am, Sun, 25 April 21