ಪೊಲೀಸ್​ ದಾಳಿ: ಬೆಂಗಳೂರಿನಲ್ಲಿ 10 ರಿಂದ 15 ಸಾವಿರಕ್ಕೆ ರೆಮ್​ಡೆಸಿವರ್​ ಮಾರುತ್ತಿದ್ದವರ ಬಂಧನ

| Updated By: guruganesh bhat

Updated on: Apr 24, 2021 | 2:17 PM

ರೆಮ್​ಡೆಸಿವರ್ ಚುಚ್ಚುಮದ್ದಿಗೆ ಬೇಡಿಕೆ ಹೆಚ್ಚಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ₹2,000ದಿಂದ ₹2,500 ಬೆಲೆ ಬಾಳುವ ಔಷಧವನ್ನು ₹10ಸಾವಿರದಿಂದ ₹15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಹಲವು ಕಡೆ ರೈಡ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಪೊಲೀಸ್​ ದಾಳಿ: ಬೆಂಗಳೂರಿನಲ್ಲಿ 10 ರಿಂದ 15 ಸಾವಿರಕ್ಕೆ ರೆಮ್​ಡೆಸಿವರ್​ ಮಾರುತ್ತಿದ್ದವರ ಬಂಧನ
ರೆಮ್‌ಡಿಸಿವಿರ್ ಇಂಜೆಕ್ಷನ್
Follow us on

ಬೆಂಗಳೂರು: ಕೊರೊನಾ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪಿದವರಿಗೆ ಅಗತ್ಯ ಔಷಧ ಎಂದು ಪರಿಗಣಿಸಲಾಗಿರುವ ರೆಮ್​ಡೆಸಿವರ್​ ಇಂಜೆಕ್ಷನ್​ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 16 ಜನರನ್ನು ಬಂಧಿಸಿರುವುದಾಗಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ದಾಳಿ ವೇಳೆ 55 ರೆಮ್​ಡೆಸಿವಿರ್ ಪತ್ತೆಯಾಗಿದ್ದು, ಮೆಡಿಕಲ್​ ಶಾಪ್​ನಲ್ಲಿ ಕೆಲಸ ಮಾಡುತ್ತಿರುವವರು, ಡಿಸ್ಟ್ರಿಬ್ಯೂಟರ್ಸ್​ ಈ ಅಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ರೆಮ್​ಡೆಸಿವರ್ ಚುಚ್ಚುಮದ್ದಿಗೆ ಬೇಡಿಕೆ ಹೆಚ್ಚಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ₹2,000ದಿಂದ ₹2,500 ಬೆಲೆ ಬಾಳುವ ಔಷಧವನ್ನು ₹10ಸಾವಿರದಿಂದ ₹15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಹಲವು ಕಡೆ ರೈಡ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ದಾಳಿ ಮುಂದುವರೆಯುತ್ತದೆ. ಸಾರ್ವಜನಿಕರಿಗೆ ಅಕ್ರಮ ನಡೆಯುತ್ತಿರುವುದು ಗಮನಕ್ಕೆ ಬಂದರೆ ನಮಗೆ ತಿಳಿಸಬಹುದು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಶೇ.50ರಷ್ಟು ಬೆಡ್​ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಖಾಸಗಿ ಅಸ್ಪತ್ರೆಗಳಿಗೆ ಶೇ.50ರಷ್ಟು ಬೆಡ್ ಮೀಸಲಿಡುವಂತೆ ಸರ್ಕಾರ ಹೇಳಿದ್ದರೂ ಕೆಲ ಆಸ್ಪತ್ರೆಗಳು ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂದು ಈ ಬಗ್ಗೆ ಪರಿಶೀಲನೆಗಿಳಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಬೆಂಗಳೂರಿನಲ್ಲಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಶಿಫಾ ಆಸ್ಪತ್ರೆಯ ಮೋಸ ಬಯಲಾಗಿದ್ದು, ಗೌರವ್​ ಗುಪ್ತಾ ಎಚ್ಚರಿಕೆಗೆ ತಬ್ಬಿಬ್ಬಾದ ಶಿಫಾ ಆಸ್ಪತ್ರೆ ಸಿಬ್ಬಂದಿ ಈಗಲೇ ಶೇ.50ರಷ್ಟು ಬೆಡ್ ಕೊಡ್ತೇವೆ ಸರ್ ಎಂದು ತಡಬಡಾಯಿಸಿದ್ದಾರೆ.

ಅಂತೆಯೇ, ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯೂ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಬೆಡ್​ ನೀಡದ ವಿಕ್ರಂ ಆಸ್ಪತ್ರೆಗೆ ಗೌರವ್ ಗುಪ್ತಾ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:
ಅಮ್ಮ, ಮಗನ ದೂರ ಮಾಡಿದ ಕೊರೊನಾ; ಮಗನಿಗೆ ತಾಯಿಯ ಸಾವಿನ ಸುದ್ದಿ ಹೇಳದೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು 

ರೆಮ್​ಡೆಸಿವಿರ್ ಇಂಜೆಕ್ಷನ್​ 25 ಸಾವಿರಕ್ಕೆ ಮಾರುತ್ತಿದ್ದ ಮೂವರ ಬಂಧನ