ಕುರುಬ ಸಮಾಜದ ಬೃಹತ್ ಸಮಾವೇಶ; ಪರ್ಯಾಯ ಮಾರ್ಗ ಕಲ್ಪಿಸಿರುವ ಪೊಲೀಸರು

|

Updated on: Feb 07, 2021 | 10:08 AM

ಸಚಿವ ಈಶ್ವರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮುಂದಾಳತ್ವದಲ್ಲಿ ಸಮಾವೇಶ ನಡೆಯಲಿದೆ. ಮೀಸಲಾತಿಗೆ ಆಗ್ರಹಿಸಿ ಜನವರಿ 15 ರಂದು ಕಾಗಿನೆಲೆಯಿಂದ ಆರಂಭವಾಗಿದ್ದ ಪಾದಯಾತ್ರೆ ಫೆಬ್ರವರಿ 4 ರಂದು ಬೆಂಗಳೂರಿನ ಫ್ರೀಡಂಪಾರ್ಕ್​ಗೆ ಬಂದು ತಲುಪಿತ್ತು.

ಕುರುಬ ಸಮಾಜದ ಬೃಹತ್ ಸಮಾವೇಶ; ಪರ್ಯಾಯ ಮಾರ್ಗ ಕಲ್ಪಿಸಿರುವ ಪೊಲೀಸರು
ಕುರುಬ ಸಮಾಜದ ಬೃಹತ್ ಸಮಾವೇಶಕ್ಕೆ ಆಗಮಿಸುತ್ತಿರುವ ಜನರು
Follow us on

ಬೆಂಗಳೂರು: ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿಗೆ ಆಗ್ರಹಿಸಿ ಇಂದು (ಫೆಬ್ರವರಿ 7) 11 ಗಂಟೆಗೆ ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಬೃಹತ್ ಸಮಾವೇಶ ನಡೆಯುತ್ತದೆ. ಸಮಾವೇಶದಲ್ಲಿ ಕುರುಬ ಸಮುದಾಯದ ರಾಜಕಾರಣಿಗಳು, ಮಠಾದೀಶರುಗಳು ಸೇರಿ ಸಾವಿರಾರು ಕುರುಬ ಸಮುದಾಯದವರು ಭಾಗಿಯಾಗುವ ಸಾಧ್ಯತೆಯಿದೆ.

ಸಚಿವ ಈಶ್ವರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮುಂದಾಳತ್ವದಲ್ಲಿ ಸಮಾವೇಶ ನಡೆಯಲಿದೆ. ಮೀಸಲಾತಿಗೆ ಆಗ್ರಹಿಸಿ ಜನವರಿ 15 ರಂದು ಕಾಗಿನೆಲೆಯಿಂದ ಆರಂಭವಾಗಿದ್ದ ಪಾದಯಾತ್ರೆ ಫೆಬ್ರವರಿ 4 ರಂದು ಬೆಂಗಳೂರಿನ ಫ್ರೀಡಂಪಾರ್ಕ್​ಗೆ ಬಂದು ತಲುಪಿತ್ತು.

ಬದಲಿ ಮಾರ್ಗ ಕಲ್ಪಿಸಿರುವ ಪೊಲೀಸರು
ಸಮಾವೇಶಕ್ಕೆ ಈಗಾಗಲೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಬರುತ್ತಿದ್ದು, ಸಮಾವೇಶ ಸ್ಥಳದಲ್ಲಿ  ಸಾವಿರಾರು ಜನ ನೆರೆದಿದ್ದಾರೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂದ್ರ, ತೆಲಂಗಾಣ ಸೇರಿದಂತೆ ತಮಿಳುನಾಡಿನಿಂದಲೂ ಕುರುಬ ಸಮುದಾಯದ ಜನರು ಭಾಗಿಯಾಗಲಿದ್ದಾರೆ. ಹೀಗಾಗಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಬೆಂಗಳೂರಿಗೆ ದೌಡಾಯಿಸುವುದರಿಂದ ರಾಜ್ಯ ರಾಜಧಾನಿಯ ಹೆಬ್ಬಾಗಿಲು ಸ್ಥಬ್ದವಾಗಿದೆ. ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ಪೊಲೀಸರು ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

ತುಮಕೂರು ಮೂಲಕ ಬರುವ ವಾಹನಗಳು ಹೈದರಾಬಾದ್ ರಸ್ತೆ ತಲುಪಬೇಕಾದರೆ ಡಾಬಸ್ ಪೇಟೆ – ದೊಡ್ಡಬಳ್ಳಾಪುರ – ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ತಲುಪಬೇಕಿದೆ. ಹೈದರಾಬಾದ್ ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸುವವರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ – ದೊಡ್ಡಬಳ್ಳಾಪುರ – ಡಾಬಸ್ ಪೇಟೆ ಮಾರ್ಗವಾಗಿ ತುಮಕೂರು ರಸ್ತೆ ತಲುಪಬೇಕು. ತುಮಕೂರು ರಸ್ತೆಯಿಂದ ಹೊಸೂರು ಹಾಗೂ ಮೈಸೂರು ರಸ್ತೆ ಮಾರ್ಗ ಪ್ರವೇಶಿಸಬೇಕಾದಲ್ಲಿ ಡಾಬಸ್ಪೇಟೆ – ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್, ಮಾಗಡಿ ರಸ್ತೆ – ನೈಸ್ ರೋಡ್ ಮೂಲಕ ಹೊಸೂರು ರಸ್ತೆ ಸಂಪರ್ಕಿಸಬಹುದು. ಮೈಸೂರು ಹಾಗೂ ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸಬೇಕಾದವರು ನೈಸ್ ಜಂಕ್ಷನ್ – ಮಾಗಡಿ ರಸ್ತೆ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ – ಡಾಬಸ್ ಪೇಟೆ ಮಾರ್ಗವಾಗಿ ತುಮಕೂರು ತಲುಪಬೇಕು.

ಎಸ್​ಟಿ ಪ್ರವರ್ಗದ ಬೇಡಿಕೆಯೊಂದಿಗೆ ರವಿವಾರ ಕುರಬ ಸಮಾಜದ ಬೃಹತ್ ರ‍್ಯಾಲಿ.. ಸಿದ್ದು, ಇನ್ನೂ ಕೆಲವರ ಗೈರು ಸಾಧ್ಯತೆ

Published On - 10:06 am, Sun, 7 February 21