ನಾಡಹಬ್ಬ ಮೈಸೂರು ದಸರಾದಲ್ಲಿ ಇಂಗ್ಲಿಷ್ ಬಳಕೆಗೆ ತೀವ್ರ ವಿರೋಧ

|

Updated on: Sep 27, 2019 | 1:32 PM

ಮೈಸೂರು: ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಒಂದೇ ರಾಷ್ಟ್ರ-ಒಂದೇ ಭಾಷೆ’ ಎಂಬ ಹೇಳಿಕೆಗೆ ಕರ್ನಾಟಕ ಸೇರಿದಂತೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕನ್ನಡನಾಡಿನಲ್ಲಿ ಕನ್ನಡ ಬಿಟ್ಟು ಹಿಂದೆ ಭಾಷೆ ಹೇರಿಕೆಗೆ ಕನ್ನಡ ಸಂಘಟನೆಗಳು ಸೇರಿದಂತೆ ರಾಜ್ಯದ ಜನ ಖಂಡಿಸಿದ್ದರು. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದರು. ಆದ್ರೆ, ಇದೀಗ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಇಂಗ್ಲಿಷ್​ ಪೋಸ್ಟರ್​, ಫ್ಲೆಕ್ಸ್​ ಬಳಸಿರುವುದಕ್ಕೆ ಕನ್ನಡ ಪರ […]

ನಾಡಹಬ್ಬ ಮೈಸೂರು ದಸರಾದಲ್ಲಿ ಇಂಗ್ಲಿಷ್ ಬಳಕೆಗೆ ತೀವ್ರ ವಿರೋಧ
Follow us on

ಮೈಸೂರು: ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಒಂದೇ ರಾಷ್ಟ್ರ-ಒಂದೇ ಭಾಷೆ’ ಎಂಬ ಹೇಳಿಕೆಗೆ ಕರ್ನಾಟಕ ಸೇರಿದಂತೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕನ್ನಡನಾಡಿನಲ್ಲಿ ಕನ್ನಡ ಬಿಟ್ಟು ಹಿಂದೆ ಭಾಷೆ ಹೇರಿಕೆಗೆ ಕನ್ನಡ ಸಂಘಟನೆಗಳು ಸೇರಿದಂತೆ ರಾಜ್ಯದ ಜನ ಖಂಡಿಸಿದ್ದರು. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದರು. ಆದ್ರೆ, ಇದೀಗ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಇಂಗ್ಲಿಷ್​ ಪೋಸ್ಟರ್​, ಫ್ಲೆಕ್ಸ್​ ಬಳಸಿರುವುದಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮೈಸೂರು ದಸರಾ ಸಂಬಂಧ ಭಿತ್ತಿಪತ್ರ ಮತ್ತು ಪ್ರಚಾರ ಪತ್ರಗಳಲ್ಲಿ ಹೆಚ್ಚಾಗಿ ಇಂಗ್ಲಿಷ್ ಬಳಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನ ಹೇರುತ್ತಿದ್ರೆ, ರಾಜ್ಯ ಸರ್ಕಾರ ಆಂಗ್ಲ ಭಾಷೆಯನ್ನು ಹೇರುತ್ತಿದೆ. ಇದು ಕನ್ನಡದ ದಸರಾನಾ? ಅಥವಾ ಇಂಗ್ಲಿಷ್​​ ದಸರಾನಾ? ಎಂದು ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮೈಸೂರು ದಸರಾ ಪೋಸ್ಟರ್​ಗಳಲ್ಲಿ ಇನ್ಮುಂದೆ ಕನ್ನಡ ಭಾಷೆ ಮಾತ್ರ ಬಳಸಬೇಕೆಂದು ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.