ಕೊಪ್ಪಳ: ಆ ಮೂರು ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದ್ರೆ ಆ ಮೂರು ಜಿಲ್ಲೆಯ ರೈತರಿಗೆ ಕಳೆದ ಮೂರು ತಿಂಗಳಿಂದ ಪ್ರೋತ್ಸಾಹ ಧನ ಸಿಕ್ಕಿಲ್ಲ. ಕಳೆದ ಮೂರು ತಿಂಗಳಿಂದ ಒಕ್ಕೂಟ ಪ್ರೋತ್ಸಾಹ ಧನ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆದಿದೆ.
ಹೈನುಗಾರಿಕೆ ನಂಬಿದ ರೈತರು ಕಂಗಾಲು:
ಪ್ರೋತ್ಸಾಹ ಧನಕ್ಕೆ ಒಕ್ಕೂಟ ಬ್ರೇಕ್:
ಹೀಗಾಗಿ ಮೂರು ಜಿಲ್ಲೆಯ ಹೈನುಗಾರಿಕೆ ನಂಬಿದ ರೈತರು ಪ್ರೋತ್ಸಾಹ ಧನ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸುಮಾರು 6 ಕೋಟಿ ಅಷ್ಟು ಹಣವನ್ನು ರಾ.ಬ.ಕೊ. ಒಕ್ಕೂಟ ಪ್ರೋತ್ಸಾಹ ಧನ ನೀಡಿಲ್ಲ. ತ್ರಿವಳಿ ಜಿಲ್ಲೆಯ ಮೂರು ಜಿಲ್ಲೆಯಲ್ಲಿ 32 ಸಾವಿರ ಹಾಲು ಉತ್ಪಾದಕರಿದ್ದು ಪ್ರೋತ್ಸಾಹ ಧನಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದ ನಿತ್ಯ ಹಾಲು ಮಾರಿ ಜೀವನ ನಡೆಸುತ್ತಿರೋ ರೈತ ಕುಟುಂಬಗಳು ಕಂಗಾಲಾಗಿವೆ.
ಹಾಲು ಉತ್ಪಾದಕರ ಆಕ್ರೋಶ:
ಒಟ್ಟಾರೆ ಸರ್ಕಾರ ಹಾಗೂ ಒಕ್ಕೂಟ ಮಾಡಿದ ಯುಡವಟ್ಟಿಗೆ ತ್ರಿವಳಿ ಜಿಲ್ಲೆಯ ರೈತರು ಬೀದಿಗೆ ಬಂದಿದ್ದಾರೆ. ಒಕ್ಕೂಟ ಲಾಭದಲ್ಲಿದ್ರೂ ಅಧಿಕಾರಿಗಳು ಮಾತ್ರ ಸರ್ಕಾರ ನೀಡೋ ಪ್ರೋತ್ಸಾಹ ಧನಕ್ಕೆ ಕಡಿವಾಣ ಹಾಕಿ ರೈತರ ಹೊಟ್ಟೆ ಮೇಲೆ ಬರೆ ಎಳೆದಿದ್ದು ಮಾತ್ರ ದುರಂತ.