ರಾಯಚೂರು: ಲಿಂಗಸೂರು ತಾಲೂಕಿನ 4 ಗ್ರಾಮಗಳಲ್ಲಿ ಲಘು ಭೂಕಂಪ: 2.7ರಷ್ಟು ತೀವ್ರತೆ ದಾಖಲು

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಅಕ್ಟೋಬರ್​ 23ರ ಮಧ್ಯರಾತ್ರಿ ಲಘು ಭೂಕಂಪವಾಗಿದೆ. ನಿಲೋಗಲ್, ಹಟ್ಟಿ, ವೀರಾಪುರ ಹಾಗೂ ಗೆಜ್ಜಲಗಟ್ಟ ಗ್ರಾಮಗಳಲ್ಲಿ ಮಧ್ಯರಾತ್ರಿ ಭೂಮಿ ಕಂಪಿಸಿದ ಅನುಭವಾಗಿದೆ.

ರಾಯಚೂರು: ಲಿಂಗಸೂರು ತಾಲೂಕಿನ 4 ಗ್ರಾಮಗಳಲ್ಲಿ ಲಘು ಭೂಕಂಪ: 2.7ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Oct 24, 2023 | 11:34 AM

ರಾಯಚೂರು ಅ.24: ಲಿಂಗಸೂಗೂರು (Lingasuru) ತಾಲೂಕಿನ ನಾಲ್ಕು ಗ್ರಾಮಗಳಲ್ಲಿ (Viallages) ಅಕ್ಟೋಬರ್​ 23ರ ಮಧ್ಯರಾತ್ರಿ ಲಘು ಭೂಕಂಪವಾಗಿದೆ. ನಿಲೋಗಲ್, ಹಟ್ಟಿ, ವೀರಾಪುರ ಹಾಗೂ ಗೆಜ್ಜಲಗಟ್ಟ ಗ್ರಾಮಗಳಲ್ಲಿ ಮಧ್ಯರಾತ್ರಿ ಭೂಮಿ ಕಂಪಿಸಿದ (Earthquake) ಅನುಭವಾಗಿದೆ. ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಹಟ್ಟಿ ಗ್ರಾಮದ ಸುತ್ತಲಿನ 2.6 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ. ಲಘು ಭೂಕಂಪನದಿಂದ ಗ್ರಾಮಗಳಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಈ ರೀತಿಯ ಲಘು ಭೂಕಂಪನದಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ನಿರ್ದೇಶಕರು ಹೇಳಿದ್ದಾರೆ.

Published On - 11:33 am, Tue, 24 October 23

ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Loading...
Unable to load recommendations.
Follow Us