ಔಷಧ ಮೂಲಿಕಾ ಸಸ್ಯಗಳ ಕೊರತೆ.. ಎಲ್ಲಿ?

|

Updated on: Nov 19, 2020 | 1:34 PM

ಬೆಂಗಳೂರು:ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಉಂಟಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ವಿವಿಧ ಔಷಧಿ ಸಸ್ಯಗಳ ಅವಶ್ಯಕತೆ ಇದೆ. ಇದು ವೈದ್ಯಕೀಯ ಸಸ್ಯಗಳಿಗೆ ವಿಶೇಷ ಒತ್ತು ನೀಡಿ, ಸಸ್ಯಗಳ ಸ್ಥಿತಿಗತಿ ಮತ್ತು ಕಾಡಿನಲ್ಲಿ ಜೈವಿಕ ಸಂಪನ್ಮೂಲಗಳ ಪರಿಶೀಲನೆ ಕುರಿತು ಇತ್ತೀಚೆಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಹೊರಹೊಮ್ಮಿದೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿತ್ತು. ಇದು ಸಸ್ಯ ಸಂಪತ್ತಿನ ಸಂರಕ್ಷಣೆ ದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದ ಅಧ್ಯಯನಗಳಲ್ಲಿ ಒಂದಾಗಿದೆ. ಹಿರಿಯ […]

ಔಷಧ ಮೂಲಿಕಾ ಸಸ್ಯಗಳ ಕೊರತೆ.. ಎಲ್ಲಿ?
Follow us on

ಬೆಂಗಳೂರು:ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಉಂಟಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ವಿವಿಧ ಔಷಧಿ ಸಸ್ಯಗಳ ಅವಶ್ಯಕತೆ ಇದೆ. ಇದು ವೈದ್ಯಕೀಯ ಸಸ್ಯಗಳಿಗೆ ವಿಶೇಷ ಒತ್ತು ನೀಡಿ, ಸಸ್ಯಗಳ ಸ್ಥಿತಿಗತಿ ಮತ್ತು ಕಾಡಿನಲ್ಲಿ ಜೈವಿಕ ಸಂಪನ್ಮೂಲಗಳ ಪರಿಶೀಲನೆ ಕುರಿತು ಇತ್ತೀಚೆಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಹೊರಹೊಮ್ಮಿದೆ.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿತ್ತು. ಇದು ಸಸ್ಯ ಸಂಪತ್ತಿನ ಸಂರಕ್ಷಣೆ ದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದ ಅಧ್ಯಯನಗಳಲ್ಲಿ ಒಂದಾಗಿದೆ. ಹಿರಿಯ ಅರಣ್ಯ ಅಧಿಕಾರಿಗಳು, ಸಸ್ಯ ಶಾಸ್ತ್ರಜ್ಞರು ಹಾಗೂ ನುರಿತ ಕ್ಷೇತ್ರ ತಜ್ಞರ ಸಹಯೋಗದಲ್ಲಿ 12,820 ಕಿ.ಮೀ ದೂರದವರೆಗೆ ಕ್ರಮಿಸಿ ಅಧ್ಯಯನವನ್ನು ಹಮ್ಮಿಕೊಳ್ಳಲಾಗಿತ್ತು.

30 ಜಿಲ್ಲೆಗಳ ಅರಣ್ಯ ವಿಭಾಗಗಳಲ್ಲಿ ಕಂಡುಬರುವ ಔಷಧಿ ಸಸ್ಯಗಳನ್ನು ಗುರುತಿಸಿ, ಅವುಗಳನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ಸಮೀಕ್ಷೆಯನ್ನು ಹಮ್ಮಿಕೊಂಡಿತ್ತು. ಕರ್ನಾಟಕದ ಎಲ್ಲಾ ಪ್ರದೇಶಗಳ ಅರಣ್ಯದಲ್ಲಿ ಕಂಡು ಬರುವ ಔಷಧಿ ಸಸ್ಯ ಸಂಪನ್ಮೂಲಗಳ ಲಭ್ಯತೆಯ ಕುರಿತು ಈ ಸಮೀಕ್ಷೆ ಸಮಗ್ರ ಪರಿಶೀಲನೆ ನಡೆಸಿ, ಸರಿಸುಮಾರು 3000 ಔಷಧಿ ಸಸ್ಯಗಳನ್ನು ಗುರುತಿಸಿದೆ.

ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ರಾಷ್ಟ್ರೀಯ ಔಷಧಿ ಮೂಲಿಕಾ ಪ್ರಾಧಿಕಾರದ (NMPB) ಅನುದಾನದೊಂದಿಗೆ, ಔಷಧಿ ಮೂಲಿಕಾ ಮಂಡಳಿ ಹಾಗೂ ಅರಣ್ಯ ಇಲಾಖೆಯ ಜೊತೆಗೂಡಿ ಅಧ್ಯಯನ ನಡೆಸಿದೆ. ಸತತ 5 ವರ್ಷಗಳ ಕಾಲ ಅಧ್ಯಯನವನ್ನು ಹಮ್ಮಿಕೊಳ್ಳಲಾಗಿದೆ. ಕಾಡುಗಳಲ್ಲಿರುವ ಮರ, ಪೊದೆ ಹಾಗೂ ಬಳ್ಳಿಗಳ ಪ್ರಬೇಧಗಳ ವೈವಿಧ್ಯತೆಯೊಂದಿಗೆ, ಸಂಪನ್ಮೂಲಗಳ ಹರಿವಿನ ಸಂರಕ್ಷಣೆ ಮುಖ್ಯ ಉದ್ದೇಶವಾಗಿತ್ತು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ಜೀವ ವೈವಿಧ್ಯಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಮೀಕ್ಷೆಗಳು ನಡೆದಿಲ್ಲ. ವೈದ್ಯಕೀಯ ಸಸ್ಯಗಳ ಸಂರಕ್ಷಣೆ ಮತ್ತು ಅವುಗಳ ಬೆಳವಣಿಗೆ ಆಗಬೇಕಾಗಿದೆ. ಇಂತಹ ಸಸ್ಯಗಳನ್ನು ಗುರುತಿಸಿ, ಸಂಬಂಧಿಸಿದ ಅರಣ್ಯ ಇಲಾಖೆಗೆ ತಿಳಿಸಿ ಅವುಗಳನ್ನು ಉಳಿಸುವ ಕಾರ್ಯಗಳು ಜರುಗಬೇಕಿದೆ. ಇಂತಹ ಉದ್ದೇಶವನ್ನು ಇಟ್ಟುಕೊಂಡು ಅಧ್ಯಯನವನ್ನು ಹಮ್ಮಿಕೊಂಡಿದ್ದೆವು ಎಂದು ಅಭಿಪ್ರಾಯ ತಿಳಿಸಿದರು.

ಪಶ್ಚಿಮ ಘಟ್ಟದಲ್ಲಿ ಸುಮಾರು 900 ರಿಂದ 1,000 ಔಷಧಿ ಮೂಲಿಕೆ ಸಸ್ಯಗಳನ್ನು ಗುರುತಿಸಿದೆವು. ಅವುಗಳನ್ನು ಸಂರಕ್ಷಿಸಿ ಬೆಳೆಸಬೇಕು. ನೈಸರ್ಗಿಕವಾಗಿ ಸಿಗುವ ಅನೇಕ ವಸ್ತುಗಳು ನಮ್ಮಿಂದ ನಾಶ ಹೊಂದುತ್ತಿವೆ. ಅವುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಯಿತು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ತಾಂತ್ರಿಕ ಕಾರ್ಯ ನಿರ್ವಾಹಕಿ ಶ್ರುತಿ ಅಭಿಪ್ರಾಯಪಟ್ಟರು.

ಜೀವ ವೈವಿಧ್ಯ ಮಂಡಳಿ ಆಶ್ರಯದಲ್ಲಿ ಔಷಧಿ ಮೂಲಿಕಾ ಸಂಪತ್ತಿನ ಸಂರಕ್ಷಣೆ, ಸವಾಲುಗಳು ಹಾಗೂ ಮುಂದಿನ ಯೋಜನೆಗಳ ರಾಜ್ಯಮಟ್ಟದ ಸಮಾಲೋಚನಾ ಕಾರ್ಯಾಗಾರ.. ಇದು 30 ಜಿಲ್ಲೆಗಳ ಅರಣ್ಯ ವಿಭಾಗಗಳಲ್ಲಿ ಪ್ರಕಟಗೊಂಡಿರುವ ‘ಕರ್ನಾಟಕ ವೈದ್ಯಕೀಯ ಸಸ್ಯಗಳಿಗೆ ವಿಶೇಷ ಒತ್ತು ನೀಡಿ, ಸಸ್ಯಗಳ ಸ್ಥಿತಿಗತಿ ಮತ್ತು ಕಾಡಿನಲ್ಲಿ ಜೈವಿಕ ಸಂಪನ್ಮೂಲಗಳ ಪರಿಶೀಲನೆ” ಸಮೀಕ್ಷೆಯನ್ನು, ಬೆಂಗಳೂರಿನ ಅರಣ್ಯ ಭವನದಲ್ಲಿ ನವೆಂಬರ್ 21ರಂದು ಬಿಡುಗಡೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಔಷಧಿ ಸಸ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆ ಕುರಿತಂತೆ ಮುಂದೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಕಾರ್ಯಯೋಜನೆ ಹಮ್ಮಿಕೊಳ್ಳಲಿದೆ. ಅರಣ್ಯ ಪರಿಸರ ಸಚಿವ ಆನಂದ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.