ರಾಜ್ಯದಲ್ಲಿ ಇಂದು ಎರಡನೇ ಹಂತದ ಲೋಕಲ್ ಫೈಟ್‌, 1,05,431 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

|

Updated on: Dec 27, 2020 | 1:38 PM

ಎರಡನೇ ಹಂತದ ಲೋಕಲ್ ಫೈಟ್‌ಗೆ ಕರುನಾಡು ಸಜ್ಜಾಗಿದೆ. ಪಕ್ಷ ಮತ್ತು ಚಿಹ್ನೆ ಹಂಗಿಲ್ಲದಿದ್ರೂ ಗ್ರಾಮಪಂಚಾಯತಿ ಚುನಾವಣೆ ಕೈ, ಕಮಲ ಮತ್ತು ದಳಕ್ಕೆ ಪ್ರತಿಷ್ಠೆ ಕಣವಾಗಿದೆ. ಇಂದು ಎರಡನೇ ಹಂತದ ಅಖಾಡದಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಭವಿಷ್ಯ ನಿರ್ಧಾರವಾಗಲಿದೆ.

ರಾಜ್ಯದಲ್ಲಿ ಇಂದು ಎರಡನೇ ಹಂತದ ಲೋಕಲ್ ಫೈಟ್‌, 1,05,431 ಅಭ್ಯರ್ಥಿಗಳ ಹಣೆಬರಹ ನಿರ್ಧಾರ
ಮತದಾನ
Follow us on

ಕೊರೊನಾ ನಡುವೆ ಡಿಸೆಂಬರ್ 22ರಂದು ಕರುನಾಡಿನಲ್ಲಿ ಮೊದಲ ಹಂತದ ಲೋಕಲ್ ಫೈಟ್‌ ನಡೆದಿತ್ತು. ಇವತ್ತು ಎರಡನೇ ಹಂತದ ಲೋಕಲ್​ ಫೈಟ್​ ನಡೆಯುತ್ತಿದೆ. ರಾಜ್ಯದ ಅತಿ ದೊಡ್ಡ ಚುನಾವಣೆ ಅಂತಲೇ ಕರೆಸಿಕೊಳ್ಳುವ ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆದಿದೆ.

ಎರಡು ಹಂತದಲ್ಲಿ ಇಂದು 109 ತಾಲೂಕುಗಳಲ್ಲಿ ಮತದಾನ ನಡೆಯಲಿದೆ. ಗ್ರಾಮ ಪಂಚಾಯತಿ ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲವಾದ್ರೂ, ಅಧಿಕಾರದಲ್ಲಿರೋ ಬಿಜೆಪಿಗೆ ಇದು ಪ್ರತಿಷ್ಠೆಯ ಸಮರವಾಗಿದೆ ಜತೆಗೆ, ಕ್ಷೇತ್ರದ ಶಾಸಕರಿಗೆ ಹಾಗೂ ಆಯಾ ಪಕ್ಷದ ಸ್ಥಳೀಯ ಮುಖಂಡರಿಗೆ ಇದು ಪ್ರತಿಷ್ಠೆಯ ಕಣವಾಗಿದೆ.

ರಾಜ್ಯದಲ್ಲಿ ಇಂದು ಎರಡನೇ ಹಂತದ ಲೋಕಲ್ ಫೈಟ್‌
ಇಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಕೊರೊನಾ ಇರೋದ್ರಿಂದ ರಾಜ್ಯ ಚುನಾವಣೆ ಆಯೋಗ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಕೊವಿಡ್ ಪಾಸಿಟಿವ್ ಇರೋರಿಗೆ ಕೊನೆಯ ಒಂದು ಗಂಟೆಯಲ್ಲಿ ಮತದಾನದ ಅವಕಾಶ ಕಲ್ಪಿಸಲಾಗಿದೆ.

ಇಂದು 2,709 ಗ್ರಾ. ಪಂಚಾಯಿತಿಗಳಿಗೆ ಚುನಾವಣೆ
ಇಂದು ಒಟ್ಟು 2,709 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದ್ದು, 43,291 ಸ್ಥಾನಗಳಿಗೆ ಹಣಾಹಣಿ ನಡೆಯಲಿದೆ. 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 20,728 ಮತಕೇಂದ್ರಗಳಲ್ಲಿ 1,05,43 ಅಭ್ಯರ್ಥಿಗಳ ಹಣೆಬರಹ ಇಂದು ತೀರ್ಮಾನ ಆಗಲಿದೆ.

ಬಿಗಿಭದ್ರತೆಯಲ್ಲಿ ನಡೆಯಲಿದೆ ಪಂಚಾಯಿತಿ ಫೈಟ್‌
ಇನ್ನು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂತೆ ಎಚ್ಚರಿಕೆ ವಹಿಸಲಾಗಿದೆ. ಶಾಂತಿಯುತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಸ್​ಪಿಗಳಿಗೆ ಸೂಚಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಂತೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಂದು ಎರಡು ಮತ್ತು ಕೊನೆಯ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 30 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಮುಂದಿನ ವಿಧಾನಸಭಾ ಚುನಾವಣೆಗೆ ಗ್ರಾಮ ಪಂಚಾಯಿತಿ ಚುನಾವಣೆ ಒಂದು ರೀತಿ ದಿಕ್ಸೂಚಿ ಇದ್ದಂತೆ. ಹೀಗಾಗಿ ಈ ಲೋಕಲ್ ಫೈಟ್‌ನಲ್ಲಿ ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 6:34 am, Sun, 27 December 20