ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರ.. ಕಾಮುಕ ಮಾವ ಅರೆಸ್ಟ್!

|

Updated on: Dec 18, 2020 | 4:29 PM

ಮಗನ ಮದುವೆಯಾಗಿ ಒಂದು ವರ್ಷವಾಗಿರಲಿಲ್ಲ. ಮಗ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದ. ಇದನ್ನು ಗಮನಿಸಿದ ರಂಗಪ್ಪ ಹಿಂಬಾಗಿಲಿನಿಂದ ಬಂದು ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರ.. ಕಾಮುಕ ಮಾವ ಅರೆಸ್ಟ್!
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಮಾವನೇ ಸೊಸೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಇಂತಹ ಒಂದು ಘಟನೆಯು ಇಡೀ ಗ್ರಾಮಸ್ಥರನ್ನು ಮತ್ತು ಕುಟುಂಬಸ್ಥರನ್ನು ಬೆಚ್ಚಿಬೀಳಿಸಿದೆ. ಆರೋಪಿ ಮಾವ ರಂಗಪ್ಪನನ್ನು(65) ಈಗಾಗಲೇ ಕುಂಸಿ ಪೊಲೀಸರು ಬಂಧಿಸಿದ್ದಾರೆ.

ಮಗನ ಮದುವೆಯಾಗಿ ಒಂದು ವರ್ಷವಾಗಿರಲಿಲ್ಲ. ಮಗ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದ. ಇದನ್ನು ಗಮನಿಸಿದ ರಂಗಪ್ಪ ಹಿಂಬಾಗಿಲಿನಿಂದ ಬಂದು ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.  ಇಂತಹ ಕೃತ್ಯಗಳು ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯ.

ವೈದ್ಯಕೀಯ ಪರೀಕ್ಷೆಯಿಂದ ಅತ್ಯಾಚಾರ ಎಸಗಿರುವುದು ಬಹಿರಂಗವಾಗಿದೆ.  ಶಿವಮೊಗ್ಗ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಮಾವ ರಂಗಪ್ಪನನ್ನು ಬಂಧನಕ್ಕೆ ಒಳಪಡಿಸಲಾಗಿದೆ.

ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ

Published On - 4:19 pm, Fri, 18 December 20