ಖುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು, ಜೈಲಿನಲ್ಲಿದ್ದಾಗ ಡೈರಿ ಬರೆದಿದ್ದಾರೆ: ಬಿಎಸ್​ವೈ ಜನ್ಮದಿನದಂದೇ ಡೈರಿ ಬಾಂಬ್ ಸಿಡಿಸಿದ ಪುತ್ರಿ

|

Updated on: Feb 27, 2023 | 10:02 AM

ಬಿಎಸ್ ಯಡಿಯೂರಪ್ಪಗೆ(BS Yediyurappa) ಇಂದು(ಫೆ.27) 80ನೇ ಹುಟ್ಟು ಹಬ್ಬದ (Birthday) ಸಂಭ್ರಮ. ತಂದೆಯ ಜನ್ಮದಿನದ ಸಂಭ್ರಮದ ಮಧ್ಯೆ ಅವರ ಪುತ್ರಿ ಅರುಣಾ ದೇವಿ ಅವರು ಡೈರಿ ಬಾಂಬ್ ಸಿಡಿಸಿದ್ದಾರೆ.

ಖುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು, ಜೈಲಿನಲ್ಲಿದ್ದಾಗ ಡೈರಿ ಬರೆದಿದ್ದಾರೆ: ಬಿಎಸ್​ವೈ ಜನ್ಮದಿನದಂದೇ ಡೈರಿ ಬಾಂಬ್ ಸಿಡಿಸಿದ ಪುತ್ರಿ
ಪುತ್ರಿ ಅರುಣಾ ದೇವಿ, ಯಡಿಯೂರಪ್ಪ
Follow us on

ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪನವರಿಗೆ (BS Yediyurappa)ಇಂದು(ಫೆ.27) ಹುಟ್ಟುಹಬ್ಬದ ಸಂಭ್ರಮ. 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಈಗಾಗಲೇ ಶಿವಮೊಗ್ಗದಲ್ಲಿ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪನವರಿಗೆ ಶುಭಾಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ವಿಶೇಷ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಬರ್ತ್​ಡೇ ದಿನವೇ ಶಿವಮೊಗ್ಗ ಏರ್​ಪೋರ್ಟ್​ ಲೋಕಾರ್ಪಣೆ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಗಿಫ್ಟ್​ ನೀಡಲಿದ್ದಾರೆ. ಅಲ್ಲದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆನ್ನುವುದು ಯಡಿಯೂರಪ್ಪನವರ ಕನಸು ಸಹ ಆಗಿತ್ತು. ಇದೀಗ ಆ ಕನಸು ನನಸಾಗುತ್ತಿದೆ. ಇದರಿಂದ ತಮ್ಮ ಜನ್ಮದಿನದಂದು ಉದ್ಘಾಟನೆಯಾಗುತ್ತಿದ್ದರಿಂದ ಸಂತಸಗೊಂಡಿದ್ದಾರೆ.  ಇನ್ನು ತಂದೆಯ ಹುಟ್ಟುಹಬ್ಬದ ಸಂಬಂಧ ಟಿವಿ9ಗೆ ಪುತ್ರಿ ಅರುಣಾದೇವಿ ಪ್ರತಿಕ್ರಿಯಿಸಿ ಡೈರಿ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: Yediyurappa Birthday: 80ನೇ ವಸಂತಕ್ಕೆ ಕಾಲಿಟ್ಟ ಯಡಿಯೂರಪ್ಪ ಮಾಡಿದ ಸಾಧನೆಗಳ ಸವಾರಿ-ಬೆಳೆದು ಬಂದ ದಾರಿ

ಇಂದು(ಫೆ.27) ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪನವರ ಪುತ್ರಿ ಅರುಣಾದೇವಿ, ಇಡೀ ದೇಶದ್ಯಂತ ಹುಟ್ಟುಹಬ್ಬದ ಶುಭಾಶಯಗಳು ಬರ್ತಿದೆ. ನನ್ನ ಜೀವನ ಹಿಂದಿರುಗಿ ನೋಡಿದಾಗ ತೃಪ್ತಿ ತಂದಿದೆ ಎಂದಿದ್ದಾರೆ. 25 ವರ್ಷನ ಯುವಕನ ಶಿಸ್ತು ಇನ್ನೂ ಅವರಲ್ಲಿದೆ. ಯುವಕರಿಗೆ ಅವಕಾಶ ಕೊಟ್ಟಿದ್ದಾರೆ. ಅವರು ಮೂಲೆಯಲ್ಲಿ ಕೂರುತ್ತಿಲ್ಲ ರಾಜ್ಯಸುತ್ತಿ ಕೆಲಸ ಮಾಡುತ್ತಿದ್ದಾರೆ. ನಮ್ಮ ತಂದೆ ಜೈಲಿಗೆ ಹೋಗಿದ್ದು ಕರಾಳದಿನಗಳು ಅವರ  ಖುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು ಮಾಡಿದ್ದರು. ಅ ಸಂದರ್ಭದಲ್ಲಿ ರಾಜಕೀಯ ಅಸಹ್ಯ ಅನ್ನಿಸಿತ್ತು ಎಂದು ಬಾವುಕರಾದರು.

ಜೈಲಿನಲ್ಲಿದ್ದಾಗ ನಮ್ಮ ತಂದೆ ಡೈರಿ ಬರೆದಿದ್ದಾರೆ. ಪ್ರತಿಯೊಂದು ಘಟನೆಯನ್ನ ಬರೆದಿದ್ದಾರೆ. ಸಂದರ್ಭ ಬಂದಾಗ ಅದು ಹೊರಬರುತ್ತೆ. ಹೊನ್ನಳ್ಳಿಯಲ್ಲಿ 1ಎಕರೆ ಜಾಗ ತೆಗದುಕೊಂಡು ಗದ್ದೆ ಮಾಡಿದ್ರು. ನೋವನ್ನ ಮರೆಯಲು ಕೃಷಿಯನ್ನ ಮಾಡಿದ್ದಾರೆ. ಹೊಲದಲ್ಲಿ ನೇಗಿಲು ಹಿಡಿದು ಕೆಲಸ ಮಾಡಿದ್ದಾರೆ. ನಮ್ಮ ತಾಯಿ ಸದಾ ಮೈತ್ರಾದೇವಿಯರು ಜೊತೆಗಿದ್ದಾರೆ. ಪ್ರತಿ ಶಿವರಾತ್ರಿ ದಿನ ನನ್ನ ತಾಯಿ ನೆನದು ಕಣ್ಣೀರು ಹಾಕುತ್ತಾರೆ. ನನ್ನ ತಾಯಿಯನ್ನ ನೆನದು ನಮ್ಮ ತಂದೆ ಬಿಎಸ್‌ವೈ ಕಣ್ಣೀರು ಹಾಕುತ್ತಾರೆ ಎಂದು ಬಾವುಕರಾದರು.

ಇನ್ನು ಅರುಣಾದೇವಿ ತಮ್ಮ ತಂದೆಯ ಹುಟ್ಟುಹಬ್ಬದ ದಿನವೇ ರಾಜ್ಯ ರಾಜಕಾರಣದಲ್ಲಿ ಡೈರಿ ಬಾಂಬ್ ಸಿಡಿಸಿದ್ದಾರೆ. ಇದು ಯಾವಾಗ? ಎಲ್ಲಿ? ಸಿಡಿಯುತ್ತೆ ಎನ್ನುವುದು ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ದಾರೆ ಎನ್ನುವ ಬೇಸರ ಅವರ ಅಭಿಮಾನಿಗಳಲ್ಲಿದೆ. ಇದರ ಮಧ್ಯೆ ಇದೀಗ ಅರುಣಾ ಅವರು ತಂದೆಯ ಡೈರಿ ಬಗ್ಗೆ ಬಹಿರಂಗಪಡಿಸಿದ್ದು, ಆ ಡೈರಿಯಲ್ಲಿ ಏನಿದೆ? ಬಿಎಸ್​ವೈ ತಮ್ಮ ಡೈರಿಯಲ್ಲಿ ತಮ್ಮ ಪಕ್ಷದ ನಾಯಕ ಬಗ್ಗೆಯಯೇ ಬರೆದುಕೊಂಡಿದ್ದಾರಾ? ಎನ್ನುವ ಕುತೂಹಲ ಹುಟ್ಟುಹಾಕಿದೆ.

ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಇಡೀ ರಾಜ್ಯಾದ್ಯಂತ ಬಿಎಸ್​ವೈ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ, ಶಿವಮೊಗ್ಗ ಏರ್​ಪೋರ್ಟ್​ ಲೋಕಾರ್ಪಣೆ ಮರೆಯಲಾಗದ ಕ್ಷಣ. ಮೋದಿ ಏರ್​ಪೋರ್ಟ್​​ ಉದ್ಘಾಟನೆ ಮಾಡುತ್ತಿರುವುದು ನಮ್ಮ ಸೌಭಾಗ್ಯ, ಶಿವಮೊಗ್ಗ ಏರ್​ಪೋರ್ಟ್​ ಯಡಿಯೂರಪ್ಪ ಕನಸು ಎಂದು ಹೇಳಿದರು.

Published On - 8:56 am, Mon, 27 February 23