ಜಾತಿ ಕೇಳಿ ಹುಟ್ಟುವುದಾಗಿದ್ರೇ.. ನಾನು ಮೇಲ್ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕ್ತಿದ್ದೆ: ಸಿದ್ದರಾಮಯ್ಯ

|

Updated on: Dec 04, 2020 | 2:40 PM

ಜಾತಿ ಕೇಳಿ ಹುಟ್ಟುವುದಾಗಿದ್ದರೆ ನಾನೂ ಅರ್ಜಿ ಹಾಕುತ್ತಿದ್ದೆ. ಮೇಲ್ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕುತ್ತಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಜಾತಿ ಕೇಳಿ ಹುಟ್ಟುವುದಾಗಿದ್ರೇ.. ನಾನು ಮೇಲ್ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕ್ತಿದ್ದೆ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಮೈಸೂರು: ಜಾತಿ ಕೇಳಿ ಹುಟ್ಟುವುದಾಗಿದ್ದರೆ ನಾನು ಅರ್ಜಿ ಹಾಕುತ್ತಿದ್ದೆ. ಮೇಲ್ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕುತ್ತಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನ್ಯಾಕೆ ಕೆಳವರ್ಗದ ಜಾತಿಯಲ್ಲಿ ಹುಟ್ಟಬೇಕು. ಯಾವ್ದೋ ಮೇಲ್ವರ್ಗದ ಜಾತಿಯಲ್ಲಿ ಹುಟ್ಟಬೇಕು ಎಂದು ಕೇಳಿಕೊಳ್ಳುತ್ತಿದ್ದೆ ಎಂದು ಹೇಳಿದರು.

ನಮ್ಮಪ್ಪ ಇದ್ದ ಜಾತಿಯಲ್ಲಿ ನಾವು ಹುಟ್ಟಿದ್ದೇವೆ ಅಷ್ಟೇ. ಹಾಗಾಗಿ, ನಾವು ಅದೇ ಜಾತಿಯಲ್ಲಿ ಇರಬೇಕು. ಇವಾಗ ಏನೋ ಕನ್ವರ್ಟ್ ಆಗಬಹುದೇನೋ ಅಷ್ಟೇ. ಆದರೆ, ನಾವು ಯಾರು ಕೂಡ ಇಂತಹ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡವರಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಾವು ಬಸವಣ್ಣ ಹಾಗೂ ಭಕ್ತ ಕನಕದಾಸರನ್ನ ಅನುಸರಿಸಬೇಕು. ಬಸವಣ್ಣ ಇವ ನಮ್ಮವ ನಮ್ಮವ ಅಂತಾ ಹೇಳ್ತಿದ್ರು. ಆದ್ರೆ, ಇವರ ಜಯಂತಿ‌ ಮಾಡುವ ಗಿರಾಕಿಗಳು ಯಾರೂ ಕೂಡ ಇದನ್ನ ಅನುಸರಿಸುವುದಿಲ್ಲ. ಅವರು ಯಾರೂ ಬಸವಣ್ಣ, ಕನಕದಾಸರನ್ನ ಅನುಸರಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕನಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದರಾಮಯ್ಯ ಹೀಗೆ ಮಾತನಾಡಿದರು.

ಸಿದ್ದರಾಮಯ್ಯನವ್ರೇ, ಏಕವಚನದಲ್ಲಿ ಮಾತನಾಡೋದನ್ನ ಬಿಡಿ -ಹುಲಿಯಾಗೆ ಹಳ್ಳಿಹಕ್ಕಿಯ ಹಿತವಚನ

 

ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ -ಲವ್​ ಜಿಹಾದ್​ಗೆ ಸಿದ್ದರಾಮಯ್ಯ ಕೌಂಟರ್​

ಜಯಂತಿಗೆ ಸೀಮಿತವಾಗದಿರಲಿ ಕನಕದಾಸರ ನೆನಪು

Published On - 2:34 pm, Fri, 4 December 20