ಜನರೇ ಎಚ್ಚರ.. ನಿರ್ಲಕ್ಷ್ಯ ಬೇಡವೇ ಬೇಡ; ಮೇ ತಿಂಗಳ ಅಂತ್ಯಕ್ಕೆ 6 ಸಾವಿರ ಜನರನ್ನು ಬಲಿಪಡೆಯಲಿದೆ ಕೊರೊನಾ

|

Updated on: May 11, 2021 | 8:16 AM

ಮೇ ತಿಂಗಳ ಆರಂಭದಿಂದ ಈವರೆಗೆ 1,894 ಜನ ಮೃತಪಟ್ಟಿದ್ದಾರೆ. ಮುಂದಿನ 20 ದಿನದಲ್ಲಿ 4,500 ಜನ ಕೊರೊನಾಗೆ ಬಲಿಯಾಗಲಿದ್ದಾರೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಜನರೇ ಎಚ್ಚರ.. ನಿರ್ಲಕ್ಷ್ಯ ಬೇಡವೇ ಬೇಡ; ಮೇ ತಿಂಗಳ ಅಂತ್ಯಕ್ಕೆ 6 ಸಾವಿರ ಜನರನ್ನು ಬಲಿಪಡೆಯಲಿದೆ ಕೊರೊನಾ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಹಾದಿ ಬೀದಿಯಲ್ಲಿ ಸೋಂಕಿತರು ಉಸಿರು ನಿಲ್ಲಿಸ್ತಿದ್ರೆ, ತಮ್ಮವರ ಕಳೆದುಕೊಂಡು ಕುಟುಂಬಗಳು ಗೋಳಾಡ್ತಿವೆ. ಆಸ್ಪತ್ರೆ ಸೇರಿದ್ಮೇಲೆ ಪರದಾಟ. ಸತ್ತ ಮೇಲೂ ಶವಸಂಸ್ಕಾರಕ್ಕೂ ಹೆಣಗಾಡೋ ಭಯಾನಕ ಸ್ಥಿತಿ ಬೆಂಗಳೂರಿನಲ್ಲಿ ಬಂದೆರಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿದ್ದು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೇ ಅಂತ್ಯದೊಳಗೆ 6,000 ಜನ ಬಲಿಯಾಗುವ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಡಲಾಗಿದೆ.

ರಾಜಧಾನಿ ಬೆಂಗಳೂರು ಕೊರೊನಾ ಕುಲುಮೆಗೆ ಸಿಲುಕಿ ಬೆಂದು ಹೋಗ್ತಿದೆ. ನೋಡ ನೋಡ್ತಿದ್ದಂತೆ ಸೋಂಕಿತರ ಪ್ರಾಣವೇ ಹಾರಿ ಹೋಗ್ತಿದೆ. ನಿನ್ನೆ ಬೆಂಗಳೂರಿನಲ್ಲಿ 16,747 ಜನಕ್ಕೆ ಸೋಂಕು ತಗುಲಿದ್ರೆ, 374 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ನಿನ್ನೆ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿದೆ. ಆದ್ರೆ ಸಾವಿನ ಸಂಖ್ಯೆ ಮಾತ್ರ ರಾಜ್ಯ ರಾಜಧಾನಿ ಜನರ ಎದೆ ನಡುಗಿಸಿದೆ. ಈ ಸಾವಿನ ಸಂಖ್ಯೆಯಿಂದ ಬೆಂಗಳೂರಿನ ಸ್ಮಶಾನಗಳು ಫುಲ್ ಆಗಿವೆ. ಸತ್ತರೇ ಹೆಣ ಸುಡುಲು ಜಾಗವಿಲ್ಲದಂತೆ ಆಗಿದೆ.

ಮೇ ತಿಂಗಳ ಆರಂಭದಿಂದ ಈವರೆಗೆ 1,894 ಜನ ಮೃತಪಟ್ಟಿದ್ದಾರೆ. ಮುಂದಿನ 20 ದಿನದಲ್ಲಿ 4,500 ಜನ ಕೊರೊನಾಗೆ ಬಲಿಯಾಗಲಿದ್ದಾರೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮೇ ತಿಂಗಳಿನಲ್ಲಿ ನಿತ್ಯ ಸರಾಸರಿ 250 ರಿಂದ 300 ಜನ ಕೊರೊನಾಗೆ ಬಲಿಯಾಗುತ್ತಿದ್ದು, ಮುಂದಿನ 20 ದಿನದಲ್ಲಿ ನಿತ್ಯ ಸರಾಸರಿ 200 ರಿಂದ 250 ರಂತೆ 4,500 ಜನ ಮೃತಪಡುವ ನಿರೀಕ್ಷೆ ಇದೆ. ಅಲ್ಲಿಗೆ ಮೇ ಒಂದೇ ತಿಂಗಳಿನಲ್ಲಿ 6ಸಾವಿರ ಜನ ಕೊರೊನಾಗೆ ಬಲಿಯಾಗಲಿದ್ದಾರೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ 1907 ಜನ ಸಾವನ್ನಪ್ಪಿದ್ದರು. ಮೇ ತಿಂಗಳ ಆರಂಭದಿಂದ ನಿನ್ನೆವರೆಗೂ 1894 ಜನ ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿದ್ರಿಂದ ಸಾಮೂಹಿಕ ಶವಸಂಸ್ಕಾರ ಮುಂದುವರಿದಿದೆ. ಗಿಡ್ಡೇನಹಳ್ಳಿ, ತಾವರೆಕೆರೆ ಚಿತಾಗಾರಗಳಲ್ಲಿ 120ಕ್ಕೂ ಹೆಚ್ಚು ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯ್ತು. ತಾವರೆಕೆರೆಯಲ್ಲಿ 70, ಗಿಡ್ಡೇನಹಳ್ಳಿಯಲ್ಲಿ 50 ಶವಸಂಸ್ಕಾರ ನಡೆಸಲಾಗಿದೆ. ಸ್ಮಶಾನಗಳ ಬಳಿ ಸಾಲು ಸಾಲಾಗಿ ಹೆಣ ಹೊತ್ತ ಆ್ಯಂಬುಲೆನ್ಸ್ಗಳು ನಿಲ್ಲುವಂತಾಗಿದೆ. ಸದ್ಯದ ಭೀಕರ ಪರಿಸ್ಥಿತಿಯಲ್ಲಿ ಜನ ನಿರ್ಲಕ್ಷ್ಯವಹಿಸದೆ ತಮ್ಮ ಜೀವವನ್ನು ಜೀವನವನ್ನು ಸಾಗಿಸಬೇಕಾಗಿದೆ. ಕೊರೊನಾದ ವಿರುದ್ಧ ಹೋರಾಡಬೇಕಿದೆ.

ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟಕ್ಕೆ 30 ಕೋಟಿ ರೂ. ದೇಣಿಗೆ ನೀಡಲಿದೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ