ಅರ್ಚಕರನ್ನು ಮದುವೆ ಆದರೆ ಹೆಣ್ಣುಮಕ್ಕಳಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಾಂಡ್​ !

ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಮೈತ್ರಿ ಹೆಸರಿನ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬ್ರಾಹ್ಮಣ ಅರ್ಚಕರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರೂಪಾಯಿ ಮೌಲ್ಯದ ಬಾಂಡ್​ ನೀಡಲಾಗುತ್ತಿದೆ.

ಅರ್ಚಕರನ್ನು ಮದುವೆ ಆದರೆ ಹೆಣ್ಣುಮಕ್ಕಳಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಾಂಡ್​ !
ಸಾಂದರ್ಭಿಕ ಚಿತ್ರ

Updated on: Jan 09, 2021 | 8:54 PM

ಬೆಂಗಳೂರು: ಯಾರದ್ದೇ ಮದುವೆ ಆಗಲಿ, ಅಲ್ಲಿ ಅರ್ಚಕರು ಇದ್ದೇ ಇರುತ್ತಾರೆ. ಅವರ ಮಂತ್ರಘೋಷ ಇಲ್ಲದೆಯೇ ಮದುವೆ ನಡೆಯುವುದೇ ಇಲ್ಲ. ಆದರೆ, ಈಗ ಮದುವೆ ಮಾಡಿಸುವ ಅರ್ಚಕರಿಗೆ ಹೆಣ್ಣು ಸಿಗುತ್ತಿಲ್ಲ. ಈ ಕಾರಣಕ್ಕೆ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ, ಅರ್ಚಕರನ್ನು ಮದುವೆ ಆಗುವ ಮಹಿಳೆಗೆ ಮೂರು ಲಕ್ಷ ನೀಡಲು ಮುಂದಾಗಿದೆ.

ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಮೈತ್ರಿ ಹೆಸರಿನ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬ್ರಾಹ್ಮಣ ಅರ್ಚಕರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರೂಪಾಯಿ ಮೌಲ್ಯದ ಬಾಂಡ್​ ನೀಡಲಾಗುತ್ತಿದೆ. ಈ ಯೋಜನೆಗೆ ಈಗ ಕಾಂಗ್ರೆಸ್​ ಅಪಸ್ವರ ಎತ್ತಿದೆ.

ಎಲ್ಲಾ ಸಮುದಾಯದಲ್ಲೂ ಅರ್ಚಕರು ಇರುತ್ತಾರೆ. ಹಾಗಾದರೆ, ನೀವು ಅವರಿಗೂ ಈ ಯೋಜನೆ ಅಡಿಯಲ್ಲಿ ಹಣ ನೀಡುತ್ತೀರಾ ಎಂದು ಕಾಂಗ್ರೆಸ್​ ಪ್ರಶ್ನೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಯೋಜನೆ ಅಡಿ ಅರ್ಚಕರನ್ನ ಮದುವೆ ಆಗುವವರಿಗೆ ಬಾಂಡ್ ನೀಡುತ್ತಿದ್ದೇವೆ. ಅನೇಕ ಅರ್ಚಕರು ಅವರ ಸಮಸ್ಯೆ ತೋಡಿಕೊಂಡಿದ್ದಾರೆ. ಈ ಕಾರಣಕ್ಕೆ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಪಕ್ಕದ ತೆಲಂಗಾಣದಲ್ಲಿ ಕೂಡ ಇದೇ ಮಾದರಿಯ ಯೋಜನೆ ಇದೆ. ವಿವಿಧ ಸಮುದಾಯಗಳಿಗೆ ಅವರದ್ದೇ ಆದ ಮಂಡಳಿಗಳಿವೆ. ಅವರು ಬೇಕಾದರೆ ಇದೇ ರೀತಿ ಮಾಡಲಿ. ಈ ಯೋಜನೆಯನ್ನ ಸಾರ್ವಜನಿಕರು ಬಳಸಿಕೊಳ್ಳಲಿ. ಕೆಲವರು ಅನಗತ್ಯವಾಗಿ ವಿವಾದ ಮಾಡುತ್ತಾ ಇದ್ದಾರೆ ಎಂದು ಸಚ್ಚಿದಾನಂದಮೂರ್ತಿ ಕಾಂಗ್ರೆಸ್​ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಮದುವೆ ಮನೆಯಲ್ಲಿ ಗುಂಡಿನ ಸದ್ದು; ಭಗ್ನ ಪ್ರೇಮಿಯ ಕೃತ್ಯಕ್ಕೆ ವಧು ಕುಟುಂಬ ಕಂಗಾಲು

Published On - 7:45 pm, Sat, 9 January 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us