ವಿದ್ಯಾರ್ಥಿಗಳಿಗೆ ಕಳಪೆ ಶೂ: ಶಿಕ್ಷಕ ಅಮಾನತು, ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್

|

Updated on: Nov 25, 2019 | 2:24 PM

ಬಾಗಲಕೋಟೆ: ವಿದ್ಯಾರ್ಥಿಗಳಿಂದ ಹೆಚ್ಚುವರಿ ಫೀಜು ವಸೂಲಿ ಮಾಡಿ ಕಳಪೆ ಮಟ್ಟದ ಶೂ, ಸಾಕ್ಸ್​ ನೀಡಿದ ಹಿನ್ನೆಲೆ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಲಿಂಗಪುರ ಪಟ್ಟಣ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್ ವೈ ರಾಠೋಡ್ ವಿರುದ್ಧ ಎಸ್ ಡಿ ಎಮ್‌‌ಸಿ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಸ್ ವೈ ರಾಠೋಡ್ ವಿದ್ಯಾರ್ಥಿಗಳಿಂದ ಹೆಚ್ಚುವರಿ ಪೀಜು ವಸೂಲಿ ಮಾಡುತ್ತಿದ್ದರು. ಹಾಗೂ ಕಳಪೆ ಮಟ್ಟದ ಶೂ ಸಾಕ್ಸ್ […]

ವಿದ್ಯಾರ್ಥಿಗಳಿಗೆ ಕಳಪೆ ಶೂ: ಶಿಕ್ಷಕ ಅಮಾನತು, ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್
Follow us on

ಬಾಗಲಕೋಟೆ: ವಿದ್ಯಾರ್ಥಿಗಳಿಂದ ಹೆಚ್ಚುವರಿ ಫೀಜು ವಸೂಲಿ ಮಾಡಿ ಕಳಪೆ ಮಟ್ಟದ ಶೂ, ಸಾಕ್ಸ್​ ನೀಡಿದ ಹಿನ್ನೆಲೆ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಲಿಂಗಪುರ ಪಟ್ಟಣ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್ ವೈ ರಾಠೋಡ್ ವಿರುದ್ಧ ಎಸ್ ಡಿ ಎಮ್‌‌ಸಿ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಸ್ ವೈ ರಾಠೋಡ್ ವಿದ್ಯಾರ್ಥಿಗಳಿಂದ ಹೆಚ್ಚುವರಿ ಪೀಜು ವಸೂಲಿ ಮಾಡುತ್ತಿದ್ದರು. ಹಾಗೂ ಕಳಪೆ ಮಟ್ಟದ ಶೂ ಸಾಕ್ಸ್ ನೀಡುತ್ತಿದ್ರು ಎಂದು ಹೇಳಲಾಗುತ್ತಿದೆ.

ಶಿಕ್ಷಕ ಅಮಾನತು ವಿರೋಧಿಸಿ ಪ್ರೊಟೆಸ್ಟ್
ಆದರೆ ಶಾಲೆಯಲ್ಲಿ ಶಿಕ್ಷಕನ ಅಮಾನತಿಗೆ ವಿದ್ಯಾರ್ಥಿಗಳ ಪರ ವಿರೋಧ ಶುರುವಾಗಿದೆ. ಶಿಕ್ಷಕನ ಅಮಾನತು ಖಂಡಿಸಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಶಾಲೆ ಆವರಣದಲ್ಲಿ ಟೈರ್‌ ದಹಿಸಿ ವಿದ್ಯಾರ್ಥಿಗಳು ಆಕ್ರೋಶವನ್ನು ಹೊರಹಾಕಿದ್ದಾರೆ. ಶಿಕ್ಷಕನ ಅಮಾನತು ರದ್ದು ಮಾಡಬೇಕೆಂದು ಅಗ್ರಹಿಸಿದ್ದಾರೆ. ಅಮಾನತು ಕ್ರಮದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಿದ್ದಾರೆ.

Published On - 2:14 pm, Mon, 25 November 19