ಕೋಲಾರದಲ್ಲಿ ಮಂಗಳಮುಖಿಗೆ ಪೊಲೀಸರಿಂದ ಲಾಠಿ ಏಟು; ಜುಟ್ಟು ಹಿಡಿದು ಠಾಣೆಗೆ ಕರೆದೊಯ್ದ ಪಿಎಸ್ಐ

|

Updated on: May 10, 2021 | 1:20 PM

ಪೊಲೀಸರು ಅನಗತ್ಯವಾಗಿ ಓಡಾಡಬೇಡ ಎಂದು ಹೇಳಿ ಮಂಗಳಮುಖಿಯನ್ನು ಕಳುಹಿಸಿದ್ದರು. ಆದರೆ ಮಂಗಳಮುಖಿ ಸ್ಮಿತಾ ಮನೆಗೆ ವಾಪಸ್ ಹೋಗಿ ಮತ್ತೆ ಹೊರ ಬಂದಿದ್ದರು. ಈ ವೇಳೆ ಮತ್ತೆ ಏಕೆ ಬಂದೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ

ಕೋಲಾರದಲ್ಲಿ ಮಂಗಳಮುಖಿಗೆ ಪೊಲೀಸರಿಂದ ಲಾಠಿ ಏಟು; ಜುಟ್ಟು ಹಿಡಿದು ಠಾಣೆಗೆ ಕರೆದೊಯ್ದ ಪಿಎಸ್ಐ
ಮಂಗಳಮುಖಿಗೆ ಲಾಠಿ ಏಟು ನೀಡಿದ ಪಿಎಸ್ಐ ವೇದಾವತಿ
Follow us on

ಕೋಲಾರ: ಮೆಡಿಕಲ್ ಶಾಪ್​ಗೆ ಹೋಗಬೇಕೆಂದು ನೆಪ ಹೇಳಿದ್ದ ಮಂಗಳಮುಖಿಗೆ ಪೊಲೀಸರು ಲಾಠಿ ರುಚಿ ನೀಡಿದ್ದಾರೆ. ಈ ಘಟನೆ ಕೋಲಾರ ನಗರದ ಅಮ್ಮವಾರಪೇಟೆ ವೃತ್ತದಲ್ಲಿ ನಡೆದಿದೆ. ಪೊಲೀಸರು ಅನಗತ್ಯವಾಗಿ ಓಡಾಡಬೇಡ ಎಂದು ಹೇಳಿ ಮಂಗಳಮುಖಿಯನ್ನು ಕಳುಹಿಸಿದ್ದರು. ಆದರೆ ಮಂಗಳಮುಖಿ ಸ್ಮಿತಾ ಮನೆಗೆ ವಾಪಸ್ ಹೋಗಿ ಮತ್ತೆ ಹೊರ ಬಂದಿದ್ದರು. ಈ ವೇಳೆ ಮತ್ತೆ ಏಕೆ ಬಂದೆ ಎಂದು ಪೊಲೀಸರು ಪ್ರಶ್ನಿಸಿದಾಗ ಸ್ಮಿತಾ ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಕೋಪಗೊಂಡ ಗಲ್ ಪೇಟೆ ಪೊಲೀಸ್ ಪಿಎಸ್​ಐ ವೇದಾವತಿ ಮಂಗಳಮುಖಿ ಬಲಗೈನಲ್ಲಿ ರಕ್ತ ಬರುವಂತೆ ಲಾಟಿ ಏಟು ನೀಡಿದ್ದಾರೆ. ಜೊತೆಗೆ ಜುಟ್ಟು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಚಾಲಕನಿಗೆ ಕಪಾಳಮೋಕ್ಷ
ಬೆಳಗಾವಿ: ಕುಟುಂಬ ಸಮೇತ ಕಾರಿನಲ್ಲಿ ತೆರಳುತ್ತಿದ್ದ ಚಾಲಕನಿಗೆ ಪೊಲೀಸರು ಕಪಾಳಮೋಕ್ಷ ಮಾಡಿ, ಲಾಠಿ ಏಟು ನೀಡಿದ್ದಾರೆ. ಈ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿರುವ ಚೆನ್ನಮ್ಮನ ಕೋಟೆ ಬಳಿ ನಡೆದಿದೆ. ಅನಗತ್ಯವಾಗಿ ಹೊರ ಬರಬೇಡಿ ಅಂದರೂ ಕಾರು ಚಾಲಕರೊಬ್ಬರು ಕುಟುಂಬ ಸಮೇತ ಹೊರ ಬಂದಿದ್ದರು. ಈ ವೇಳೆ ಪೊಲೀಸರು ಚಾಲಕನನ್ನು ಕೆಳಗಿಳಿಸಿ ಕಪಾಳಕ್ಕೆ ಹೊಡೆದು ಲಾಠಿ ಏಟು ನೀಡಿ ವಾಪಾಸ್ ಕಳುಹಿಸಿದ್ದಾರೆ.

ಬಸ್ಕಿ ಹೊಡೆಸಿದ ಪೊಲೀಸರು
ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸಿದ್ದಾಪುರ ಗೇಟ್ನಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ಕೊಣನೂರು ಠಾಣಾ ಪಿಎಸ್ಐ ಅಜಯ್ ಕುಮಾರ್ ಹಾಗೂ ಸಿಬ್ಬಂದಿಗಳು ಬಸ್ಕಿ ಹೊಡೆಸಿ ಮತ್ತೊಮ್ಮೆ ಬಂದರೆ ವಾಹನ ಸೀಜ್ ಮಾಡಿ ದಂಡ ಹಾಕುವುದಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಮುಂದೆ ಮದ್ಯವ್ಯಸನಿಯ ಕಿರಿಕ್, ಕುಡಿದ ಮತ್ತಲ್ಲಿ ರಸ್ತೆಯಲ್ಲಿ ನಿಂತು ಸ್ಟೆಪ್ಸ್

ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಜತೆ ವಾಟಾಳ್ ನಾಗರಾಜ್​ ರಸ್ತೆಗೆ ಬಂದಿದ್ದರು

(Transgender was knocked out by police at Kolar)