ತುಮಕೂರು: ಬೈಕ್​ ಮೇಲೆ ಶವ ಸಾಗಾಟ: ಸಮುದಾಯ ಆರೋಗ್ಯಾಧಿಕಾರಿಗೆ ಸಿಎಂ ಕಚೇರಿಯಿಂದ ನೋಟಿಸ್

ಆಂಬ್ಯುಲೆನ್ಸ್ ಇಲ್ಲದೇ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್​ನಲ್ಲೇ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿತ್ತು. ಈ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ.

ತುಮಕೂರು: ಬೈಕ್​ ಮೇಲೆ ಶವ ಸಾಗಾಟ: ಸಮುದಾಯ ಆರೋಗ್ಯಾಧಿಕಾರಿಗೆ ಸಿಎಂ ಕಚೇರಿಯಿಂದ ನೋಟಿಸ್
ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಮಹೇಶ್ ಇ, ಭೂಮನಹಳ್ಳಿ Edited By: ವಿವೇಕ ಬಿರಾದಾರ

Updated on: Sep 21, 2024 | 12:28 PM

ತುಮಕೂರು, ಸೆಪ್ಟೆಂಬರ್​ 21: ಮಕ್ಕಳು ತಂದೆಯ ಶವವನ್ನು ಬೈಕ್​ನಲ್ಲಿ ಸಾಗಿಸಿದ್ದಕ್ಕೆ ಕಾರಣ ಕೇಳಿ ಮುಖ್ಯಮಂತ್ರಿಗಳ ಕಚೇರಿ (CM Office) ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿ ಲೋಕೇಶ್ ಅವರಿಗೆ ನೋಟಿಸ್​ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ (80) ಎಂಬುವರು ಬುಧವಾರ ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳು, ಹೊನ್ನೊರಪ್ಪನವರನ್ನು 108 ಆಂಬ್ಯುಲೆನ್ಸ್​ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ, ಅಷ್ಟರಾಗಲೇ ಹೊನ್ನೂರಪ್ಪನ ಜೀವ ಹೋಗಿತ್ತು.

ಬಳಿಕ ಮೃತ ಶರೀರವನ್ನು ಮನೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕಿಸಿದ್ದರು. ಮೃತದೇಹವನ್ನು ಆಂಬ್ಯುಲೆನ್ಸ್​​ನಲ್ಲಿ ಸಾಗಿಸುವಂತಿಲ್ಲ ಎಂದಿದ್ದರು. ಕೈಯಲ್ಲಿ ಹಣವಿಲ್ಲದೆ ಕೊನೆಗೆ ಹೊನ್ನೂರಪ್ಪ ಮಕ್ಕಳು ವಿಧಿಯಿಲ್ಲದೆ ತಂದೆ ಶವವನ್ನು ಬೈಕ್​ನಲ್ಲೇ ತೆಗೆದುಕೊಂಡು ಮನೆಗೆ ಹೋಗಿದ್ದರು. ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಹೇಶ್ ಇ, ಭೂಮನಹಳ್ಳಿ

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Loading...
Unable to load recommendations.
Follow Us