ತುಮಕೂರು, ಸೆ.8: ತಾಯಿ ಮತ್ತು ಮಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ (Tumkur) ಕುಣಿಗಲ್ ತಾಲೂಕಿನ ಯಲಗಲವಾಡಿ ಗ್ರಾಮದಲ್ಲಿ ನಡೆದಿದೆ. ಮಗ ಶಾಲೆಗೆ ಹೋಗುತ್ತಿಲ್ಲ ಎಂದು ಮನೆಯಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಜಗಳದಿಂದ ಬೇಸತ್ತು ತಾಯಿ, ಮಗ ಕೆರೆಗೆ ಹಾರಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಂಗಳಗೌರಮ್ಮ (40) ಮತ್ತು ಈಕೆಯ ಮಗ ರುದ್ರೇಶ್ (13) ಮೃತರು.
ಅನಾರೋಗ್ಯ ಹಿನ್ನೆಲೆ ರುದ್ರೇಶ್ ಶಾಲೆಗೆ ಹೋಗದೆ ಮನೆಯಲ್ಲಿರುತ್ತಿದ್ದನು. ಈ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಅದರಂತೆ ಇಂದು ಕೂಡ ಜಗಳ ನಡೆದಿದ್ದು, ಬಳಿಕ ಕೆರೆಯತ್ತ ರುದ್ರೇಶ್ ಹೋಗಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮಗನ ಹಿಂದೆ ಹೋಗಿ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
ಬೀದರ್: ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಅಖಾಡಕ್ಕಿಳಿದಿದ್ದು.
ಇದನ್ನೂ ಓದಿ: ತುಮಕೂರು: ಶಿರಾದ ಚಿಕ್ಕಕೆರೆ ಬಾವಿಯಲ್ಲಿ ಎರಡು ಅಪರಿಚಿತ ಶವಗಳು ಪತ್ತೆ
ಅದರಂತೆ, ಬೀದರ್ ತಾಲೂಕಿನ ಜನವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3 ಪ್ರಕರಣಗಳು, ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 4 ಪ್ರಕರಣಗಳು, ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ 2 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಒಟ್ಟು 9 ಪ್ರಕರಣದಲ್ಲಿ 16 ಜನ ಆರೋಪಿಗಳನ್ನು ಬಂಧಿಸಿ 29 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Fri, 8 September 23