ತುಮಕೂರು, ಡಿ.11: ಜಿಲ್ಲೆಯ (Tumkur) ಕುಣಿಗಲ್ ತಾಲೂಕಿನ ಎಡೆಯೂರು ಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ಬಾಟಲಿಗೆ ಪೆಟ್ರೋಲ್ ತುಂಬಿಸುತ್ತಿದ್ದಾಗ ಬೆಂಕಿ ಅವಘಡ (Fire Accident) ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಸೌಂದರ್ಯ (16) ಮೃತ ವಿದ್ಯಾರ್ಥಿನಿ.
ಶುಕ್ರವಾರ ರಾತ್ರಿ ವಿದ್ಯುತ್ ಇಲ್ಲದ ವೇಳೆಯಲ್ಲಿ ಸೌಂದರ್ಯ ಮೊಂಬತ್ತಿ ಬೆಳಕಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಳು. ತಕ್ಷಣ ವಿದ್ಯುತ್ ಬಂದಾಗ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಬಾಟಲಿಯನ್ನ ಕೆಳಗೆ ಬಿಟ್ಟಿದ್ದಳು. ಈ ವೇಳೆ ಮೊಂಬತ್ತಿ ಕಿಡಿ ತಗುಲಿ ಬೆಂಕಿ ಹತ್ತಿಕೊಂಡು ಸೌಂದರ್ಯ ಗಂಭೀರವಾಗಿ ಗಾಯಗೊಂಡಿದ್ದಳು.
ಇದನ್ನೂ ಓದಿ: Brazil Fire Accident: ಬ್ರೆಜಿಲ್ನಲ್ಲಿ ಬೆಂಕಿ ಅವಘಡ, ಒಂಬತ್ತು ಮಂದಿ ಸಜೀವ ದಹನ, ಎಂಟು ಮಂದಿಗೆ ಗಾಯ
ಕೂಡಲೇ ಗಾಯಾಳು ಸೌಂದರ್ಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೌಂದರ್ಯ ಮೃತಪಟ್ಟಿದ್ದಾಳೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ