ತುಮಕೂರು, ಸೆ.8: ಜಿಲ್ಲೆಯ ಶಿರಾ ಪಟ್ಟಣದ ಚಿಕ್ಕಕೆರೆ ಬಳಿ ಇರುವ ಬಾವಿಯಲ್ಲಿ ಎರಡು ಅಪರಿಚಿತ ಮೃತದೇಹಗಳು ಪತ್ತೆಯಾದ (Dead Body Found) ಘಟನೆ ನಡೆದಿದೆ. ತುಮಕೂರು (Tumkur) ನಗರದ ನಿವಾಸಿಗಳಾದ ಹಾಜಿರಾ (40) ಮತ್ತು ಬಾಲಕಿ ಅಮ್ಮನ್ ಪಾಷಾ (12) ಮೃತರು ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳೀಯರು ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಬೊಪ್ಪಜ್ಜ ಎಂಬುವವರಿಗೆ ಸೇರಿದ ಬಾವಿ ಇದಾಗಿದೆ. ಸದ್ಯ ಸ್ಥಳಕ್ಕೆ ಆಗಮಿಸಿದ ಶಿರಾ ನಗರ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆಸುತ್ತಿದ್ದಾರೆ.
ಮೈಸೂರು: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಚ್ಡಿಎಫ್ಸಿ ಬ್ಯಾಂಗ್ ಸಿಬ್ಬಂದಿಯಾಗಿರುವ ಮಾರಿಗುಡಿ ಬೀದಿಯ ಮಂಜುನಾಥ್ (26) ಮೃತ ದುರ್ದೈವಿ.
ಇದನ್ನೂ ಓದಿ: ಮೈಸೂರು: ಗಂಡ-ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ
ಮಂಜುನಾಥ್ ತನ್ನ ತಂಗಿ ಮಗಳು ಪೂರ್ವಿಕಾಳೊಂದಿಗೆ ಬುಲೆಟ್ ಬೈಕಿನಲ್ಲಿ ಹೋಗುವಾಗ ಮೈಸೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡಿದದ್ದ ಮಂಜುನಾಥ್ ಮತ್ತು ಪೂರ್ವಿಕಾಳನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಸಾವನ್ನಪ್ಪಿದ್ದು, ಪೂರ್ವಿಕಾಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಪಘಾತ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ