ದಂಪತಿ ಮಧ್ಯೆ ಕಲಹ: ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ಸಾವು, ಮಕ್ಕಳು ಅನಾಥ

|

Updated on: Jun 25, 2023 | 5:46 PM

ಮನೆಯಲ್ಲಿ ಸಣ್ಣ ವಿಚಾರಕ್ಕೆ ನಡೆದ ದಂಪತಿ ನಡುವೆ ಜಗಳ ಸಾವಿನ ಅಂತ್ಯವಾಗಿದ್ದು, ಇಬ್ಬರು ಪುಟ್ಟ ಮಕ್ಕಳು ಅನಾಥವಾಗಿವೆ.

ದಂಪತಿ ಮಧ್ಯೆ ಕಲಹ: ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ಸಾವು, ಮಕ್ಕಳು ಅನಾಥ
Follow us on

ಉಡುಪಿ: ಒಂದು ನಿಮಿಷದ ಸಿಟ್ಟು ಏನೆಲ್ಲ ಅನಾಹುತಕ್ಕೆ ಕಾರಣವಾಗುತ್ತವೆ ಕಾರಣವಾಗುತ್ತೆ ಎನ್ನುವುದನ್ನು ಈ ಸುದ್ದಿ ಉದಾಹರಣೆ. ದಂಪತಿ(couple) ನಡುವಿನ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು, ಇಬ್ಬರು ಪುಟ್ಟ ಮಕ್ಕಳು ಅನಾಥವಾಗಿವೆ. ಹೌದು…ಮನೆಯಲ್ಲಿ ಸಣ್ಣ ವಿಚಾರಕ್ಕೆ ಜಗಳದಿಂದ ಮನನೊಂದು ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ಸಹ ಮೃತಪಟ್ಟಿದ್ದಾನೆ. ಈ ದಾರುಣ ಘಟನೆ ಉಡುಪಿ ಜಿಲ್ಲೆ ಕಾರ್ಕಳ(karkala) ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಯಶೋಧಾ, ಇಮ್ಯಾನುವಲ್ ಮೃತ ದಂಪತಿ.

ಇದನ್ನೂ ಓದಿ: ಪ್ರೀತಿ ವಿರೋಧಿಸಿ ಯುವತಿ ತಂದೆಯಿಂದ ಯುವಕನ ಮೇಲೆ ಹಲ್ಲೆ; ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೃತ ದಂಪತಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಮೂಲದವರಾಗಿದ್ದು, ತೋಟದ ಕೆಲಸಕ್ಕೆ ಬಂದು ಕಾರ್ಕಳದಲ್ಲಿ ನೆಲೆಸಿತ್ತು. ಆದ್ರೆ, ಮನೆಯಲ್ಲಿ ಸಣ್ಣ ವಿಚಾರಕ್ಕೆ ಯಶೋಧಾ, ಇಮ್ಯಾನುವಲ್ ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಮನನೊಂದಿದ್ದ ಪತ್ನಿ ಯಶೋಧ ನಲ್ಲೂರು ಬಳಿ ತೋಟ ನೀರಿನ ಹೊಂಡಕ್ಕೆ ಹಾರಿದ್ದಾಳೆ. ಬಳಿಕ ಪತ್ನಿಯನ್ನು ರಕ್ಷಿಸಲು ಪತಿ ಇಮ್ಯಾನುವಲ್ ಸಹ ಹೊಂಡಕ್ಕೆ ಹಾರಿದ್ದಾನೆ. ಆದ್ರೆ, ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದಂಪತಿ ಸಾವಿನಿಂದ ಇಬ್ಬರು ಪುಟ್ಟ ಮಕ್ಕಳು ಅನಾಥವಾಗಿವೆ. ಇನ್ನು ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲದ ಭಾದೆ ರೈತ ವಿಷ ಸೇವಿಸಿ ಅತ್ಮಹತ್ಯೆ

ಶಿವಮೊಗ್ಗ: ಸಾಲ ಬಾಧೆಯಿಂದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಸುರೇಶ (55) ಮೃತ ರೈತ . ಕೆನರಾ ಬ್ಯಾಂಕ್ ಮತ್ತು ಸಹಕಾರ ಸಂಘ ಹಾಗೂ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸುಮಾರು 8 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಸಾಲ ಕಟ್ಟುಂವಂತೆ ಕೆನರಾ ಬ್ಯಾಂಕ್ ಸುರೇಶನಿಗೆ ನೋಟಿಸ್ ಕೊಟ್ಟಿತ್ತು. ಇದರಿಂದ ಹೆದರಿಕೊಂಡ ಸುರೇಶ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಿಪ್ಪನಪೇಟೆ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.